ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೬ ಶ್ರೀಮದ್ಭಾಗವತವು ಅಧ್ಯಾ, ೧೨, ಗಂಭೀರವಾದ ಅಭಿಪ್ರಾಯಗಳನ್ನು, ಸೂಚಿಸತಕ್ಕ ಮಂದಹಾಸಗಳಿಂದ ಲೂ, ಲಜ್ಜೆಯಿಂದಲೂ ಕೂಡಿದ ನೋಟಗಳಿಂದ ಶೋಭಿತೆಯರಾದ ಆ ಶ್ರೀಕೃಷ್ಣನ ಭಾರೈಯರನ್ನು ನೋಡಿದೊಡನೆ ಮನ್ಮಥನೂಕೂಡ ಮ ರುಳಾಗಿ, ತನ್ನ ಕೈಯಲ್ಲಿರುವ ಧನುಸ್ಸನ್ನು ಬಿಸುಡುವನು. ಹೀಗೆ ಮನ್ಮಥ ನನ್ನೂ ಮರುಳುಮಾಡತಕ್ಕ ಶಕ್ತಿಯುಳ್ಳವರಾಗಿದ್ದರೂ ಆ ಸ್ತ್ರೀಯರು, ತಮ್ಮ ವಿಲಾಸದಿಂದಾಗಲಿ, ತಮ್ಮ ವಂಚನೆಗಳಿಂದಾಗಲಿ,ಕೃಷ್ಣನನ್ನು ಮೋ ಹಗೊಳಿಸುವುದಕ್ಕೆ ಸಮಸ್ಯರಲ್ಲ.ಹೀಗೆ ನಿಸ್ಸ೦ಗನಾದ ಶ್ರೀಕೃಷ್ಣನು ತನ್ನ ನಿ ಜಸ್ವರೂಪವನ್ನು ಮರೆಸಿಕೊಂಡು, ಮನುಷ್ಯನಂತೆ ನಡೆಯುತ್ತಿರುವುದನ್ನು ನೋಡಿ, ಮಡಾದಕೆಲವರು, ಆತನನ್ನು ಸಂಸಾರಸಂಬಂಧವುಳ್ಳವನೆಂದೆಣಿ ಸಿ, ತಮ್ಮೊಡನೆ ಹೋಲಿಸಿಕೊಳ್ಳವರು.ಅಂತವರು ಅಜ್ಞರೆಂಬುದಕ್ಕೆ ಏನೇನೂ ಸಂದೇಹವಿಲ್ಲ. ಸತ್ಕಟ ಗುಣಗಳಾಗಲಿ, ಜೀವನಿಗೆ ಸಹಜವಾದ ಅವಿದ್ಯೆ, ರಾಗ,ದ್ವೇಷ ಮೊದಲಾದುವುಗಳಾಗಲಿ, ಪರಮಾತ್ಮನನ್ನಾಶ್ರಯಿಸಿದ ಜ್ಞಾ ನವನ್ನು ಹೇಗೆ ಮುಟ್ಟಲಾರವೋ, ಹಾಗೆಯೇ ಭಗವಂತನೂ ಮೂಲಪ್ರಕೃತಿ ಯಲ್ಲಿ ವ್ಯಾಪಕನಾಗಿದ್ದರೂ ಅದರದೋಷಗಳು ಅವನನ್ನು ಮುಟ್ಟಲಾರವು. ಯಾವಾಗಲೂ ಅದರ ಸಂಬಂಧವುಳ್ಳವನಾಗಿದ್ದರೂ ಅದರ ದೋಷವನ್ನು ತಾನು ಅಂಟಿಸಿಕೊಳ್ಳದಿರುವುದೇ ಆ ಭಗವಂತನಲ್ಲಿರುವ ಆಸಾಧಾರಣಮಹಿ ಮೆಯೆಂದು ತಿಳಿ! ಲೋಕದಲ್ಲಿ ಸಂಸಾರಿಗಳ ಬುದ್ಧಿಯು, ಈಶ್ವರನ ನಿಜಸ್ಥಿತಿ ಯನ್ನು ತಿಳಿಯಲಾರದೆ ಹೇಗೆ ಬೇರೆ ವಿಧವಾಗಿ ಶ್ರಮಿಸುವುದೋ,ಹಾಗೆಯೇ, ಮೂಢಯರಾದ ಈ ಸಿಯರೂಕೂಡ ಆತನ ನಿಜಸ್ಥಿತಿಯನ್ನು ತಿಳಿಯಲಾ ರದೆ ಆ ಕೃಷ್ಣನು ತಮಗೆ ವಶವೆಂದು ತಿಳಿದಿರುವರು. ಇಲ್ಲಿಗೆ ಹನ್ನೊಂದ ನೆಯ ಅಧ್ಯಾಯವು. w+ ಪರೀಕ್ಷಿನಹಾರಾಜನ ಜನನವು. ಇw ಇದನ್ನು ಕೇಳಿ ಶೌನಕನು ತಿರುಗಿ ಸೂತನನ್ನು ಕುರಿತು ಪ್ರಶ್ನೆ ಮಾಡು ವನು - ಎಲೈ ಸೂತನೆ ! ಉತ್ತರೆಯ ಗರ್ಭವು ಸಹಿಸಲಸಾಧ್ಯವಾದ ತೇಜ. ಸ್ಸುಳ್ಳ ಬ್ರಹ್ಮತಿರೋನಾಮಕವಾದ ಆಶ್ವತ್ಥಾಮನ ಮಹಾಸ್ತ್ರದಿಂದ ದಕ್ಟ್