ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

оно ಶ್ರೀಮದ್ಭಾಗವತವು [ಅಧ್ಯಾ ೧೨. ನಾಗಿಯೂ, ವಿಷ್ಣುವಿನಂತೆ ಸತ್ವಭೂತಾಶ್ರಯನಾಗಿಯೂ, ಶ್ರೀ ಕೃಷ್ಣ ನಂತೆ ಸಮಸ್ತ ಸದ್ದು ಣಾಶ್ರಯನಾಗಿಯೂ ಇರುವನು, ಮತ್ತು ಈ ಬಾಲ ನು ಕೇದಾರದಲ್ಲಿ ರಂತಿದೇವನಿಗೂ, ಧರ್ಮಗುಣದಲ್ಲಿ ಯಯಾತಿಗೂ, ಧೈ ದಲ್ಲಿ ಬಲಿಚಕ್ರವರ್ತಿಗೂ, ಹರಿಭಕ್ತಿಯಲ್ಲಿ ಪ್ರಹ್ಲಾದನಿಗೂ ಸಾಟಿಯೆನಿಸುವ ನ.. ಮತ್ತು ಈ ಕುಮಾರನು ಮುಂದೆ ಅನೇಕಾಶ್ವಮೇಧಗಳನ್ನು ನಡೆಸುವನು. ವೈದ್ಯರನ್ನು ಸೇವಿಸುವನು. ತನಗೆ ಸಮಾನರಾದ ಸತ್ಪುತ್ರನನ್ನೇ ಪಡೆಯುವ ನು. ಉನ್ಮಾರ್ಗದಲ್ಲಿ ಪ್ರವರ್ತಿಸುವವರನ್ನು ತಿಕ್ಷಿಸುವನು. ತಾನು ಸನ್ಮಾ ರ್ಗವನ್ನು ಬಿಟ್ಟು ಹೋಗತಕ್ಕವನಲ್ಲ. ಭೂಮಿಯಲ್ಲಿ ಧರ್ಮವನ್ನು ಸ್ಥಾಪಿ ಸುವುದಕ್ಕಾಗಿ ಕಲಿಯನ್ನು ಜಯಿಸುವನು. ಕೊನೆಗೆ ಈತನು ದೈವಯೋಗ ದಿಂದ ಬ್ರಾಹ್ಮಣಶಾಪಕ್ಕೆ ಪಾತ್ರನಾಗಿ, ತನಗೆ ತಕ್ಷಕನಿಂದ ಮೃತ್ಯುವುಂ ಟಾಗುವುದನ್ನು ತಿಳಿದು, ಸರಸಂಗಪರಿತ್ಯಾಗಮಾಡಿ, ವಿಷ್ಣುಭಕ್ತಿಪರಾಯಣ ನಾಗಿ, ಗಂಗಾತೀರದಲ್ಲಿ ಪ್ರಾಯೋಪವೇಶವನ್ನು ಮಾಡುವನು. ಈ ಸಮಯ ದಲ್ಲಿ ಶುಕಮಹರ್ಷಿಯು ಈತನಿಗೆ ತತ್ವಜ್ಞಾನವನ್ನು ಪದೇತಿಸುವನು. ತತ್ವ ಜ್ಞಾನವು ಹುಟ್ಟಿದೊಡನೆ ಈತನ ದೇಹವನ್ನು ತೊರೆದು ವಿಷ್ಣು ಸ್ಥಾನವನ್ನು ಹೊಂದುವನು” ಎಂದರು. ಹೀಗೆ ಬ್ರಾಹ್ಮಣರೆಲ್ಲರೂ ಪರೀಕ್ಷಿದ್ರಾಜನ ಜಾ ತಕವನ್ನು ನೋಡಿ ಈ ಭವಿಷ್ಯತ್ಕಾಂತಗಳನ್ನು ತಿಳಿಸಿದೊಡನೆ, ಧರ್ಮ ರಾಜನು ಅವರೆಲ್ಲರನ್ನೂ ಬಹುಮಾನಗಳಿಂದ ಗೌರವಿಸಿದನು. ಆ ಬ್ರಾಹ್ಮಣ ರೆಲ್ಲರೂ ಧರ್ಮಪುತ್ರನ ಅನುಮತಿಯನ್ನು ಪಡೆದು, ತಮ್ಮ ತಮ್ಮ ಸ್ಥಾನ ಗಳಿಗೆ ಹೋದರು. ಅದರಿಂದಾಚೆಗೆ ಇತ್ತಲಾಗಿ ಉತ್ತರೆಯ ಗರ್ಭದಲ್ಲಿ ಹು ಟೈದ ಈ ಕುಮಾರನು, ತನಗೆ ತಾಯಿಯ ಗರ್ಭದಲ್ಲಿ ಗೋಚರಿಸಿದ ಪುರುಷ ನಾರೆಂದು ತನ್ನಲ್ಲಿ ತಾನೇ ಧ್ಯಾನಿಸುತ್ತ, ಆಗ ಕಾಣಿಸಿದ ದಿವ್ಯಪುರುಷನು ಇನ್ನೂ ಈ ಲೋಕದಲ್ಲಿರುವನೇ, ಇಲ್ಲವೇ ಎಂಬುದನ್ನು ಪರೀಕ್ಷಿಸುವ ಕಾ ಲ್ಯದಲ್ಲಿಯೇ ದೃಢಪ್ರಯತ್ನವನ್ನು ಮಾಡುತಿದ್ದುದರಿಂದ, ಆತನಿಗೆ ಪರೀ ಕಿತೆಂದೇ ಪ್ರಸಿದ್ಧಿಯುಂಟಾಯಿತು. ಈ ರಾಜಕುಮಾರನು ತನ್ನ ಪಿತೃಜನ ಗಳಿಂದ ಸುಖವಾಗಿ ಪೋಷಿಸಲ್ಪಡುತ್ತ, ಶುಕ್ಲ ಪಕ್ಷದಲ್ಲಿ ಮೇಲೆಮೇಲೆ ಕಲೆಗೆ ಳಿಂದ ತುಂಬುತ್ತಿರುವ ಚಂದ್ರನಂತೆ, ದಿನದಿನಕ್ಕೆ ವೃದ್ಧಿ ಹೊಂದುತ್ತ ಬಂದನು