ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೧೩} ಪ್ರಥಮಸ್ಕಂಧವು. ೧೫೧ ಇಷ್ಟರಲ್ಲಿ ಧರ್ಮರಾಜನಿಗೆ, ತನ್ನ ಜಾತಿಗಳನ್ನು ಕೊಂದ ಪಾಪಕ್ಕೆ ಪ್ರಾಯ ತೃತರೂಪವಾಗಿ ಅಶ್ವಮೇಧಯಾಗವನ್ನು ಮಾಡಬೇಕೆಂಬ ಬುದ್ದಿ ಹುಟ್ಟಿ ತು, ಈ ಯಜ್ಞವನ್ನು ನಡೆಸುವುದಕ್ಕಾಗಿ ಬಹಳ ಧನವು ಬೇಕಾಯಿತು. ಪ್ರಜೆಗ ಳಲ್ಲಿ ತೆರಿಗೆಗಳನ್ನೂ, ದಂಡನೆಗಳನ್ನೂ ಹೆಚ್ಚಿಸಿದಹೊರತು, ಬೇರೆ ವಿಧದಿಂದ ಆ ತೊಂದು ಥನವನ್ನು ಸಂಗ್ರಹಿಸಲು ಸಾಧ್ಯವಿಲ್ಲದುದರಿಂದ ಮನಸ್ಸಿನಲ್ಲಿ ಬ ಹಳವಾಗಿ ಚಿಂತಿಸುತ್ತಿದ್ದನು. ಆಗ ಕೃಷ್ಣನಿಂದ ಪ್ರೇರಿತರಾದ ಭೀಮಾರ್ಜು ನಾದಿಗಳೆಲ್ಲರೂ ಒಗ್ವಿಜಯಾರ್ಥವಾಗಿ ಉತ್ತರದಿಕ್ಕಿಗೆ ಹೊರಟು, ಅನೇಕರಾ ಜರನ್ನು ಜಯಿಸಿ, ಬೇಕಾದಷ್ಟು ದ್ರವ್ಯವನ್ನು ತಂದು ಧರ್ಮರಾಜನ ಪಾದ ಗಳಿಗೊಪ್ಪಿಸಿದರು. ಆಗ ಧರ್ಮರಾಜನು ಬಹಳ ಸಂತೋಷಗೊಂಡವನಾಗಿ ಯಜ್ಞಸಂಭಾರಗಳೆಲ್ಲವನ್ನೂ ಸಿದ್ಧಪಡಿಸಿ, ಮಂತ್ರತಂತ್ರಾದಿಗಳಿಗೆ ಲೋಪ ವಿಲ್ಲದಂತೆ ಬಹಳ ಭಯಭಕ್ತಿಗಳಿಂದ ಯಜ್ಞಕಾರವನ್ನಾರಂಭಿಸಿ, ಮೂರಾ ವರ್ತಿ ಅಶ್ವಮೇಧವನ್ನು ನಡೆಸಿ ಶ್ರೀಕೃಷ್ಣನನ್ನಾ ರಾಧಿಸಿದನು. ಈಯಜ್ಞ ಕ್ಯಾಗಿಬಂದ ಕೃಷ್ಣನು ಆತನಿಂದ ಯಜ್ಞಕಾವ್ಯಗಳನ್ನು ಮುಗಿಸಿದಮೇಲೆ ಯೂ, ಪಾಂಡವರ ಸಂತೋಷಾರ್ಥವಾಗಿ ಕೆಲವು ತಿಂಗಳವರೆಗೆ ಅಲ್ಲಿಯೇ ಇರುತಿದ್ದು, ಆಮೇಲೆ ಧರ್ಮರಾಜಾದಿಗಳ ಅನುಮತಿಯನ್ನು ಪಡೆದ..ಅರ್ಜು ನನ್ನೂ ಕರೆದುಕೊಂಡು ತನ್ನ ಬಂಧುವೀತ್ರಪರಿವಾರಗಳೊಡಗೂಡಿ, ಹಿಂತಿ ರುಗಿ ದ್ವಾರಕೆಗೆ ಬಂದು ಸೇರಿದನು. ಇಲ್ಲಿಗೆ ಹನ್ನೆರಡನೆಯ ಅಧ್ಯಾಯವು. ( ವಿದುರನು ಹಸ್ತಿನಾಪುರಕ್ಕೆ ಬಂದು ಧೃತರಾಷ್ಟ್ರನಿಗೆ ) – ಹಿತವನ್ನು ಹೇಳಿದುದು. ಧೃತರಾಷ್ಟ್ರನಿರ್ಗಮನವು ನಾರದಾಗಮನವು.* « ಓ ಶೌನಕಾ! ಇನ್ನು ಹಸ್ತಿನಾಪುರವೃತ್ತಾಂತವನ್ನು ಹೇಳುವೆನು ಕೇಳು. ಬಹುದಿನಗಳ ಹಿಂದೆ ತೀರ್ಥಯಾತ್ರೆಗಾಗಿ ಹೋಗಿದ್ದ ವಿದುರನು, ಸಮಸ್ತ ತೀರ್ಥಗಳನ್ನೂ ಸೇವಿಸಿ ಬರುವಾಗ, ಮಾರ್ಗವಶದಿಂದ ಒಂದಾ ನೊಂದು ಕಡೆಯಲ್ಲಿ ತಪಸ್ಸು ಮಾಡುತಿದ್ದ ಮೈತ್ರೇಯಮಹರ್ಷಿಯನ್ನು ಕಂ ಡನು. ಅವನಿಂದ ತತ್ವಜ್ಞಾನವನ್ನು ಹೊಂದಿ ಕೃತಕೃತ್ಯನಾಗಿ ಹಿಂತಿರುಗಿ ಹ ಸ್ತಿನಾಪುರಕ್ಕೆ ಬಂದು ಸೇರಿದನು. ವಿದುರನು ಕೇಳಿದ ಪ್ರಶ್ನೆಗಳಲ್ಲಿ ಕೆಲವಕ್ಕೆ