ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧೩ ] ಪ್ರಥಮಸ್ಕಂಧವು. ೧೫, ಶುದ್ಧರಾದುದರಿಂದ, ನಿಮ್ಮಂತವರು ಈ ತೀರ್ಥಯಾತ್ರೆಗಳಿಂದಪವಿತ್ರತೆಯ ನ್ನು ಸಂಪಾದಿಸಬೇಕಾದ, ಅವಶ್ಯಕತೆಯಿಲ್ಲ. ಆದರೆ ಗಂಗಾನದಿಗಳು ಸಹಜ ವಾಗಿಯೇ ಪವಿತ್ರವೆನಿಸಿಕೊಂಡಿದ್ದರೂ, ಸಾರಾತ್ಮರು ಬಂದು ಅದರಲ್ಲಿ ತಮ್ಮ ಪಾಪಗಳನ್ನು ಪರಿಹರಿಸಿಕೊಂಡು ಹೋಗುವುದರಿಂದ, ಆ ಪುಣ್ಯತೀರ್ಥ ಗಳಲ್ಲಿ ಅವರ ಸಂಬಂಧಂದುಂಟಾದ ಪಾಪಗಳನ್ನು ಪರಿಹರಿಸಿ, ಆ ತೀರ್ಥಗಳ ನ್ನು ಪವಿತ್ರೀಕರಿಸುವುದಕ್ಕಾಗಿಯೇ ನಿಮ್ಮಂತವರು ಆ ಪುಣ್ಯತೀರ್ಥಗಳಿಗೆ ಹೋಗಬೇಕಲ್ಲದೆ ಬೇರೆ ಯಲ್ಲ,ಾಪನಿವಾರಕನಾದ ಶ್ರೀಹರಿಯು ನಿಮ್ಮಂತವ ರ ಹೃದಯದಲ್ಲಿ ಯಾವಾಗಲೂ ನೆಲೆಸಿರುವುದರಿಂದ, ನಿಮ್ಮ ಸಂಬಂಧವು ಪು "ತೀರ್ಥಗಳಿಗೆ ೧: ಪತಿ ಯನ್ನುಂಟು ಮಾಡುವುದು ತಾತಾ ! ಶ್ರೀಕೃಷ್ಣ ನನ್ನೆ – ಪರದೇವತೆಯೆಂದು ಭಾವಿಸಿ ಅವನನ್ನೆ ನಂಬಿರುವ ನಮ್ಮ ಬಂಧುಗಳಾ ದ ಯಾದವರನ್ನು ನೀನು ನೋಡಿ ಬಂದೆಯಷ್ಟೆ? ದ್ವಾರಕೆಯಲ್ಲಿ ಅವರೆಲ್ಲರೂ ಕ್ಷೇಮದಿಂರುವರೆ?” ಎಂದುಪ್ರಶ್ನೆ ಮಾಡಿದನು ಧರ್ಮರಾಜನ ವಾಕ್ಯವನ್ನು ಕೇಳಿ ವಿದುರನು, ಪರಮಸಂತೋಷಭರಿತನಾಗಿ, ತಾವು ಅಲ್ಲಿ ನೋಡಿಬಂದ ಪುಣ್ಯಸ್ಥಳಗಳ ಮಾಹಾತ್ಮವನ್ನೂ , ಅಲ್ಲಲ್ಲಿ ತಾನು ಕೇಳಿದ ವಿಶೇಷವೃತ್ತಾಂ ತಗಳನ್ನೂ ಯಧಾಶ್ರಮವಾಗಿ ವಿವರಿಸುತ್ತ ಬಂದನು, ಆದರೆ ಯದುಕುಲವು ನಾಶಹೊಂದಿದ ವೃತ್ತಾಂತವೊಂದನ್ನು ಮಾತ್ರಧರ್ಮರಾಜನಿಗೆ ತಿಳಿಸದೆ ಮ ರೆಸಿಬಿಟ್ಟನು. ಈ ಯದುವಂಶಕ್ಷಯವನ್ನು ಕೇಳಿದ ಪಕ್ಷದಲ್ಲಿ ಧರ್ಮರಾಜನಿಗೆ ವಿಶೇಷವಾದ ದುಃಖವುಂಟಾಗಬಹುದೆಂದೆಣಿಸಿ ಅದನ್ನು ಮಾತ್ರ ತನ್ನಲ್ಲಿಯೇ ಅಡಗಿಸಿಬಿಟ್ಟನು. ಶೌನಕ! ಮಹಾತ್ಮರ ಸುಸ್ವಭಾವವನ್ನು ನೋಡಿದೆಯಾ? ಸತ್ಪುರುಷರು ಇತರರ ದುಃಖವನ್ನು ನೋಡಿ ಸ್ವಲ್ಪ ಮಾತ್ರವೂ ಸಹಿಸಲಾರರು ಪಾಂಡವರ ವ್ಯಸನವನ್ನು ನೋಡಿ ಸಹಿಸಲಾರದುದಕ್ಕಾಗಿಯೇ, ವಿದುರನು ಈ ವೃತ್ತಾಂತವನ್ನೆ ತ್ಯದೆ ಬಿಟ್ಟುಬಿಟ್ಟನು. ವಿದುರನು ಹೀಗೆ ಧರ್ಮರಾಜಾದಿಗಳಿ ಗೆ ಪುಣ್ಯತೀರ್ಥ ಮಹಿಮೆಗಳನ್ನು ತಿಳಿಸಿ, ಅವರಿಂದ ಪೂಜಿತನಾಗಿ, ಅಲ್ಲಿನ ಪುರ ವಾಸಿಗಳೆಲ್ಲರಿಗೂ ಸಂತೋಷವುಂಟಾಗುವಂತೆ, ಹಸ್ತಿನಾಪುರದಲ್ಲಿಯೇ ಕೆಲ ವುದಿನಗಳವರೆಗೆ ಸುಖದಿಂದಿರುತ್ತಿದ್ದನು. ಈ ಕಾಲದಲ್ಲಿ ತನ್ನ ನಾದ ಧೃತರಾಷ್ಟ್ರನಿಗೆ ಅನೇಕತತ್ತ್ವಗಳನ್ನೂ ತಿಳಿಸಿದನು. ಅವನಿಗೆ ಮರಣಕಾ