ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಭ್ಯಾ. ೧೩.] ಪ್ರಥಮಸ್ಕಂಧವು. ಯ ಯಾ ವವಿಧದಿಂದಲೂ ಪ್ರತೀಕಾರವಿಲ್ಲದ ಪೂಜ್ಯವಾದ ಕಾಲವು, ಇ ದೊ! ನಮ್ಮೆಲ್ಲರನ್ನೂ ಮೇಲೆ ಬಿದ್ದುಹಿಡಿಯುವುದಕ್ಕೆ ಕಾದಿರುವುದು! ಇಂ ತಹ ಮೃತ್ಯುಕಾಲವು ಸಮೀಪಿಸಿದಾಗ, ನಮಗೆ ಪರಮಪ್ರೇಮಪಾತ್ರಗ ಳಾಗಿ, ನಮ್ಮೊಡನೆ ಸೇರಿರುವ ಪ್ರಾಣಿಗಳನ್ನೇ ನಾವು ಅದಕ್ಕೊಪ್ಪಿಸಬೇಕಾ ಗಿರುವಾಗ, ನಡುವೆ ಆಗಂತುಕವಾಗಿ ಬಂದ ರಾಜ್ಯಧನಾದಿಗಳನ್ನು ಬಿಟ್ಟು ಕೊಡಬೇಕಾದುದೊಂದು ಹೆಜ್ಜೆ ? ಓ ಪ್ರಭ! ಇನ್ನು ಮೇಲೆ ಇವುಗಳಿಂದ ನಿನಗೇನಾಗಬೇಕಾಗಿದೆ ? ನಿನ್ನ ಪುತ್ರವಿತ್ರಬಂಧುಪರಿವಾರಾದಿಗಳೆಲ್ಲರೂ ಸತ್ತು ! ನಿನ್ನ ಯೌವನಕಾಲವೂ ಕಳೆದುಹೋಯಿತು! ನಿನ್ನ ದೇಹವೆಲ್ಲವೂ ಜರೆಯಿಂದ ಜೀರ್ಣವಾಯಿತು! " ಸ್ಥಿತಿಯಲ್ಲಿಯೂ ನಿನಗೆ, ನಿನ್ನ ದಾಯಾ ದರ ಕೈಕೆಳಗಾದರೂ ಬದುಕಿರಬೇಕೆಂಬ ಆಸೆಯೆ?ಆಹಾ!ಲೋಕದಲ್ಲಿ ಪ್ರಾ ಣಿಗಳಿಗೆ ಜೀವದಾಸೆಯೆಂಬುದುಮಾತ್ರ ಎಂದೆಂದಿಗೂ ಬಿಡತಕ್ಕುದಲ್ಲ. ಆ ಜೀವಸೆಯಿಂದಲ್ಲವೇ ಈಗಲೂ ನೀನು, ಪಾಂಡವರ ಮನೆಯಲ್ಲಿ ಸೇರಿ ಕೊಂಡು, ಭೀಮನು ತಂದಿಕ್ಕಿದ ಕೈಕೂಳನ್ನು ತಿಂದು, ನಾಯಿಯಹಾಗೆ ಜನ್ಮವನ್ನು ಕೊರೆಯುತ್ತಿರುವೆ?ರಾಜೇಂದಾಪೂರವೃತ್ತಾಂತವನ್ನು ಯೋ ಚಿಸಿನೋಡು! ಪಾಂಡವರಿಗೆ ನಿನ್ನಲ್ಲಿ ಸ್ವಲ್ಪ ಮಾತ್ರವಾದರೂ ಅನುರಾಗವಿ ರುವುದೆಂದೆಣಿಸಬೇಡ! ಅವರು ನಿನಗೆ ಆ ವಸ್ತಿ ಕ್ಯುವಾಗ ಮನಸ್ಸಿನಿಂದಾ ದರೂ ನಿನ್ನನ್ನು ಮೂದಲಿಸದೆ ಬಿಡಲಾರರು! ಹಿಂದೆ ನಿನ್ನ ಮಕ್ಕಳು ಅವರು ಮಲಗಿದ್ದ ಮನೆಗೆ ಬೆಂಕಿಯಿಟ್ಟರು! ವಿಷಾನ್ನವನ್ನು ತಿನ್ನಿಸಿದರು.ಅವರ ಕೈ ಹಿಡಿದ ಹೆಂಡತಿಯಾದ ದಪಗೆ ಮಹಾಸಭೆಯಲ್ಲಿ ಮಾನಭಂಗವನ್ನು ಮಾಡಿದರು! ಅವರ ಧನವನ್ನೂ ,ರಾಜ್ಯವನ್ನೂ ಕಿತ್ತುಕೊಂಡು ಅರಣ್ಯಕ್ಕಟ್ಟಿ ದರು ನಿನ್ನ ಮಕ್ಕಳು ಇಷ್ಟೊಂದು ಮಹಾಪರಾಧವನ್ನು ಮಾಡಿದಾಗಲೂ, ಸಿನ ಅವರನ್ನು ತಡೆಯದೆ ಸುಮ್ಮನಿದ್ದೆಯಲ್ಲವೆ? ಇದರಿಂದ ನೀನೂ ಅವರ ವಿಷಯಹಲ್ಲಿ ವೈರಬುದ್ಧಿಯನ್ನೆ ತೋರಿಸದಂತಾಯಿತಲ್ಲವೆ? ಅವರಿಗೆ ನಿನ್ನ ವಿಷಯದಲ್ಲಿ ಈ ದುರಭಿಪ್ರಾಯವಿರುವುದರಲ್ಲಿ ಸಂದೇಹವೇನು?ಈಸ್ಥಿತಿಯಲ್ಲಿ ನೀನು ಅವರ ಕೈಕೂಳನ್ನು ತಿಂದಾದರೂ ಬದುಕಿ ಮಾಡಬೇಕಾದುದೇನು? ಆಣ್ಣಾ! ಆದೂ ಹಾಗಿರಲಿ! ಒಂದುವೇಳೆ ನಿನಗೆ ಇನ್ನೂ ಈ ನೀಚಜೀವನದ ON