ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು [ಅಧ್ಯಾ. ೧೩, ಕ್ಲಿಯೇ ಬದುಕಿರಬೇಕೆಂಬ ಆಸೆಯಿದ್ದರೂ ಇರಬಹುದು! ಈ ದೇಹತ್ಯಾಗ ವನ್ನು ಮಾಡುವುದಕ್ಕೆ ನಿನಗಾಗಿ ಇಷ್ಟವಿಲ್ಲದಿದ್ದರೂ, ಜರೆಯಿಂದಾವೃತವಾದ ಈ ನಿನ್ನ ದೇಹವು, ಜೀರ್ಣವಸ್ತ್ರದಂತೆ ಕ್ರಮಕ್ರಮವಾಗಿ ನಶಿಸುತ್ತ ಬರು ವುದರಲ್ಲಿ ಸಂದೇಹವಿಲ್ಲ. ಮುಖ್ಯವಾಗಿ ಲೋಕದಲ್ಲಿ ಯಾವ ಮನುಷ್ಯನು, ಈ ದೇಹಾದಿಗಳೆಲ್ಲವೂ ಅನಿತ್ಯವೆಂಬುದನ್ನು ತಿಳಿದು, ಸಂಸಾರಸಂಬಂಧವನ್ನು ತೊರೆದು, ವಿರಕ್ತನಾಗಿ, ತಾಪಸವೃತ್ತಿಯನ್ನವಲಂಬಿಸಿ, ಅಡವಿಗೆ ಹೋಗಿ, ಬೇರೊಬ್ಬರಿಗೆ ತನ್ನ ಸ್ಥಿತಿಗತಿಯೇ ತಿಳಿಯದಹಾಗೆ ದೇಹತ್ಯಾಗವನ್ನು ಮಾಡುವನೋ, ಅಂತವನೇ ಧಿರನು'ಅವನೇ ಯೋಗಿಯು! ಮತ್ತು ಯಾವ ನು ತನ್ನಷ್ಟಕ್ಕೆ ತಾನೇ ಆಗಲಿ, ಪರೋಪದೇಶದಿಂದಾಗಲಿ, ತತ್ತ್ವಜ್ಞಾನ ನನ್ನವಲಂಬಿಸಿ, ವಿರಕ್ತನಾಗಿ,ಶ್ರೀಕೃಷ್ಣನನ್ನು ಹೃದಯದಲ್ಲಿ ನಿಲ್ಲಿಸಿ, ಮನೆ ಯನ್ನು ಬಿಟ್ಟು ಅಡವಿಗೆ ಹೋಗುವನೋ ಅವನೇ ನರೋತ್ತಮನು ! ಆ ದುದರಿಂದ ಅಣ್ಣಾ! ಇನ್ನು ನೀನು ಮನಸ್ಸಿನಲ್ಲಿ ಧೈರವನ್ನವಲಂಬಿಸು ! ಮೋಹಪಾಶವನ್ನು ತೊರೆದುಬಿಡು! ವಿರಕ್ತಿಮಾರ್ಗವನ್ನಂಗೀಕರಿಸು ಮುಂ ದೆಮುಂದೆ ಕಾಲವೆಂಬುದು ಪ್ರಾಣಿಗಳ ಧೈಯ್ಯಾರಿಗುಣಗಳನ್ನು ಬಹಳವಾಗಿ ಕೆಡಿಸುವುದು! ಆದುದರಿಂದ ಈಗಲೇ ನೀನು ನಿನ್ನ ಜ್ಞಾತಿಗಳಾದ ಥರಾ ಜಾದಿಗಳಿಗೂ ತಿಳಿಯದಂತೆ ಇಲ್ಲಿಂದ ಉತ್ತರದಿಕ್ಕಿಗೆ ಹೊರಡು! ಇನ್ನು ಮೇ ಲೆ ನೀನು ಇದುವರೆಗಿನಂತೆ ನಡೆಯಬಾರದು!” ಎಂದನು. ಆಗ ಧೃತರಾಷ್ಟ್ರ) ನು ತನ್ನ ತಮ್ಮನಾದ ವಿದುರನು ಹೇಳಿದ ಈ ಹಿತೋಪದೇಶವನ್ನು ಕೇಳಿ ಪರಮಸಂತುಷ್ಟನಾಗಿ, ಜ್ಞಾನದೃಷ್ಟಿಯನ್ನವಲಂಬಿಸಿ,ಪಾಂಡವರಲ್ಲಿ ತನ್ನ ವರೆಂಬ ಸ್ನೇಹಪಾಶವನ್ನು ತೊರೆದು, ದೃಢಮನಸ್ಸುಳ್ಳವನಾಗಿ, ವಿದುರನು ತೋರಿಸಿದ ದಾರಿಯನ್ನೇ ಹಿಡಿದು ತಾಪಸವೃತ್ತಿಯಿಂದ ಪ್ರಯಾಣೋದು ಕನಾದನು.ಇದನ್ನು ನೋಡಿ ಮಹಾಪತಿವ್ರತೆಯಾದ ಗಾಂಧಾರಿಯೂ ಡ, ತನ್ನ ಪತಿಯಾದ ಧೃತರಾಷ್ಟ್ರ ನನ್ನೆ ಹಿಂಬಾಲಿಸಿ ಹೊರಟಳು. ಸತ್ವ ಭೂತಸುಕೃತ್ತುಗಳೆನಿಸಿದ ಯೋಗಿಗಳಿಗೂ ಸಂತೋಷಕರವಾದ ಹಿಮವತ್ ಊತದ ಕಡೆಗೆ ಧೃತರಾಷ್ಟ್ರನು ಹೋಗುತಿದ್ದಾಗ, ಪತಿವ್ರತಾಮಣಿಯಾದ ಗಾಂಧಾರಿಯಕೂಡ, ಅರಣ್ಯ ಸಂಚಾರಶ್ರಮವನ್ನು ಸ್ವಲ್ಪ ಮಾತ್ರವೂ ಲ