ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೦ ಶ್ರೀಮದ್ಭಾಗವತವು [ಅಧ್ಯಾ ೧೩. ಅಜ್ಞಾನಸಂಬಂಧದಿಂದ ದೇಹದಲ್ಲಿ ಆತ್ಮಬುದ್ಧಿಯನ್ನಾ ರೋಪಿಸಿದಾಗಮಾ ಇವೇ ಆ ದೇಹಾದಿಗಳಲ್ಲಿ ಅನುರಾಗವು ಹೆಚ್ಚುತ್ತಿರುವುಮ. ಆ ಅನುರಾಗವು ಹೆಚ್ಚುವುದರಿಂದ ವಿಯೋಗಕಾಲದಲ್ಲಿ ದುಃಖವನ್ನೂ ಹೆಚ್ಚಿಸುವುದು. ಈ ದುಃಖವೆಂಬುದು ದೇಹಾತ್ಮಭ್ರಮರೂಪವಾದುದಲ್ಲದೆ ಬೇರೆಯಲ್ಲ ಅದುದ ರಿಂದ ಎಲೈ ರಾಜೇಂದ್ರನೆ! 4ಜ್ಞಾನಜನ್ಯವಾದ ಈ ದುಃಖವನ್ನು ಬಿಟ್ಟು ಬಿಡು! ನನ್ನನ್ನು ಬಿಟ್ಟು ಹೋದಮೇಲೆ ಧೃತರಾಷ್ಟ್ರಗಳಿಗೆ ಬೇರೆ ಹಕ್ಕಾ ರು? ಅವರು ಆನಾಥರಾಗಿ ಹೇಗೆ ಜೀವಿಸಬಲ್ಲರು?” ಎಂದು ಸೀನು ಶಂಕಿಸಬ ಹುದು! ಅವರಿಗೆ ನೀನೇ ರಕ್ಷಕನೆಂಬ ಭ್ರಾಂತಿಯನ್ನೂ ಬಿಟ್ಟುಬಿಡು. ಈ ದೇಹ ವೆಂಬುದು ಕಾಲಕೂ, ಪಪಕರಗಳಿಗೂ, ಸಾವಿಗುಣಗಳಿಗೂ ಅಧೀನವಾಗಿ ಪಂಚಭೂತಾತ್ಮಕವಾಗಿರುವುದು.ಲೋಕದಲ್ಲಿರುವ ಪ್ರತಿಯೊಂ ದು ಪ್ರಾಣಿಗೂ ಈ ದೇಹಬಂಧವು ಬಿಟ್ಟುದಲ್ಲ!ಹಾವಿನ ಬಾಯಲ್ಲಿ ಸಿಕ್ಕಿಬಿ ದ್ದು ತನ್ನನ್ನೇ ತಾನು ಕಾಪಾಡಿಕೊಳ್ಳಲಾರದ ದುಸ್ಥಿತಿಯಲ್ಲಿರುವವನು ಮ ತೊಬ್ಬರನ್ನು ಕಾಪಾಡಬಲ್ಲನೆ?ಅದರಂತೆಯೋ ನಿನ್ನ ದೇಹವನ್ನೆ ನೀನು ರಕ್ಷಿ ಸಿಕೊಳ್ಳುವುದಕ್ಕೆ ಶಕ್ತನಲ್ಲದಿರುವಾಗ, ಬೇರೆಯವರಿಗೆ ನೀನು ರಕ್ಷಕನೆಂಬ ಭಾ ವವನ್ನಿಟ್ಟುಕೊಳ್ಳಬಹುದೆ? ಆದುದರಿಂದ ಲೋಕದಲ್ಲಿ ಒಬ್ಬೊಬ್ಬರೂ ಕಮ್ಮಾ ಧೀನವಾದ ದೇಹದಲ್ಲಿ ಸಿಕ್ಕಿಬಿದ್ದಿರುವಾಗ ಒಬ್ಬರು ಮತ್ತೊಬ್ಬರನ್ನು ರಕ್ಷಿ ಸುವರೆಂಬ ಮಾತುಸುಳ್ಳು' ಒಬ್ಬರನ್ನೊಬ್ಬರು ರಕ್ಷಿಸುವರೆಂಬ ಈ ಭಾಂತಿ ಯೂ ಹಾಗಿರಲಿ! ಒಬ್ಬರನ್ನೊಬ್ಬರು ಭಕ್ಷಿಸದೆ ಬಿಟ್ಟರೆ ಸಾಕಲ್ಲವೇ?ಲೋಕದಲ್ಲಿ ನೋಡು!ಕ್ಕೆ ಮೊದಲಾದ ಅನುಕೂಲಸಾಧನಗಳುಳ್ಳ ಮನುಷ್ಯರು ಕೈಯಿಲ್ಲ ದ ಮೃಗಾದಿಗಳನ್ನು ಹೊಡೆದು ಭಕ್ಷಿಸುವರು, ಕಾಲಿರತಕ್ಕೆ ಜಂತುಗಳಿಗೆ ಕಾ ಲಿಲ್ಲದ ಕೆಲವು ಜಂತುಗಳು ಆಹಾರವಾಗುವುವು, ಕಾಲಿಲ್ಲದಿರುವ ಅಜಗರಾದಿಗ ಳಾದ ದೊಡ್ಡ ಪ್ರಾಣಿಗಳಿಗೂ ಕ್ಷುದ್ರ ಜಂತುಗಳು ಆಹಾರವಾಗುವುವು ಮಖ್ಯ ವಾಗಿ ಒಂದುಜೀವವು ಮತ್ತೊಂದುಜೀವವನ್ನು ತಿಂದೇ ಬದುಕಬೇಕಲ್ಲದೆ ಬೇ ರೆಯಲ್ಲ: ಎಲೈ ಧಯ್ಯ ಪುತ್ರನೆ! ಕಾಡಿನಲ್ಲಿದ್ದರೂ, ಮನೆಯಲ್ಲಿದ್ದರೂ, ಸರಾ ತ್ಮಕನಾದ ಆ ಭಗವಂತನೇ ರಕ್ಷಿಸಬೇಕಲ್ಲದೆ, ಮನುಷ್ಯನನ್ನು ಮನುಷ್ಯನು ಬದುಕಿಸುವನೆಂಬ ಮಾತು ಸುಳ್ಳು! ಈಗ ನಮಗೆ ಕಾಣುತ್ತಿರುವ ಚಿದಚಿದಾ