ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೨ ಶ್ರೀಮದ್ಭಾಗವತವು [ಆಧ್ಯಾ. ೧೩. ಹಿಸಿರುವಳು. ಇದಕ್ಕಾಗಿಯೇ ಅದಕ್ಕೆ ಸಪ್ತಸ್ರೋತವೆಂಬ ಪ್ರಸಿದ್ಧಿಯುಂ ಟಾಯಿತು. ಅಂತಹ ಸಿದ್ಧಾಶ್ರಮದಲ್ಲಿ ಸೇರಿದ ಧೃತರಾಷ್ಟ್ರನು, ಆ ಮಹಾ ನದಿಯಲ್ಲಿ ಸ್ನಾನಮಾಡುತ್ತಿಸಂಧ್ಯಾಕಾಲಗಳಲ್ಲಿಯೂ ಅಗ್ನಿ ಹೋತ್ರಾದಿ ಕಾಗೈಗಳನ್ನು ನಡೆಸಿ, ಆ ನಸೀಜಲವೊಂದನ್ನೇ ಆಹಾರವಾಗಿ ತೆಗೆದುಕೊಂಡು ಮನಸ್ಸಿನಲ್ಲಿದ್ದ ಕಾಮಾದಿದುರ್ಗುಣಗಳನ್ನು ನಿಶೇಷವಾಗಿ ಸೀಗಿ ದಾರೇಷ ಣ, ಧನೇಷಣ, ಪತ್ತೇಷಣಗಳೆಂಬ ಈಷಣತ್ರಯಗಳನ್ನೂ ತ್ಯಜಿಸಿ ಶುದ್ಧನ ನಸ್ಕನಾಗಿರುವನು, ಮತ್ತು ಆತನು ಎಷ್ಟು ಕಾಲವಾದರೂ ನಿಶ್ಚಲವಾಗಿ ಕುಳಿ ತಿರತಕ್ಕ ಆಸನಶಕ್ತಿಯನ್ನೂ, ಕ್ಯಾಸಧಾರಣಶಕ್ತಿಯನ್ನೂ ಸ್ವಾಧೀನಪಡಿಸಿ ಕೊಂಡು, ಷಡಿಂದ್ರಿಯಗಳನ್ನೂ ನಿವ್ರಹಿಸಿರುವನು,ಶ್ರೀಹರಿಧ್ಯಾನವೊಂದರಲ್ಲಿ ಯೇ ಮನಸ್ಸಿಟ್ಟು, ಅದರಬಲದಿಂದ ಸತ್ಕಾಯಗುಣಕಾರಗಳಾದ ಕಾಮಾದಿಗ ಇನ್ನೂ, ಮುಕ್ತಿಗೆ ಪ್ರತಿಬಂಧಕಗಳಾದ ಕಣ್ಮಕಲಾಪಗಳ ಸೀಗಿರುವನು. ಮತ್ತು ಈಗ ಧೃತರಾಷ್ಟ್ರನು, ಇಂದ್ರಿಯಗಳು ಮನಸ್ಸನ್ನಾ ಕೆ ರ್ಪಿಸದಂತೆ ಅವುಗಳನ್ನು ವಿಜ್ಞಾನಸ್ವರೂಪನಾದ ಕ್ಷೇತ್ರಜ್ಞನಸೇರಿಸಿ, ಫುಟವುನಮ್ಮ ವಾದಮೇಲೆ ತದಂತರ್ಗತವಾದ ಆಕಾಶವು ಮಹಾಕಾಶದೊಡನೆ ಸಾಮ್ಯುವ ನ್ನು ಹೊಂದುವಂತೆ, ಆ ಕ್ಷೇತ್ರಜ್ಞನಿಗೆ ಉಪಾಧಿಭತವಾದ ದೇಹಸಂಬಂ ಧವನ್ನು ಬಿಡಿಸಿದಮೇಲೆ ಅದಕ್ಕಾಧಾರಭೂತವಾದ ಪರಬ್ರಹ್ಮನೊಡನೆಸಮಾ ನಾಕಾರತ್ವವುಂಟಾಗುವುದೆಂಬ ತತ್ತ್ವಜ್ಞಾನವನ್ನು ಹೊಂದಿ,ಸಿರಾಹಾರನಾ ಗಿ, ರಜಸ್ಸು ಮೊದಲಾದ ಮಾಯಾಗುಣಗಳಿಂದ ಹುಟ್ಟತಕ್ಕ ರಾಗದ್ವೇಷಾದಿ ಗಳೊಂದಕ್ಕೂ ಅವಕಾಶಕೊಡದೆ, ಇಂದ್ರಿಯಚಾಪಲ್ಯಗಳೆಲ್ಲವನ್ನೂ ತಡೆದು, ಮರದ ತುಂಡಿನಂತೆ ನಿಶ್ಚಿಷ್ಯನಾಗಿರುವನು. ಹೀಗೆ ಕಮ್ಮಸಂಬಂಧವನ್ನೇ ತ್ಯಜಿಸಿ, ದೃಢನಿಶ್ಚಯದಿಂದಿರುವ ಆತನ ಸಮಾಧಿಗೆಮಾತ್ರ ನೀನು ಎಷ್ಟು ಮಾತ್ರವೂ ವಿಷ್ಣುವನ್ನುಂಟುಮಾಡಬಾರದು ! ರಾಜೇಂದ್ರಾ! ಇಲ್ಲಿಂದ ಐದನೆಯದಿನಕ್ಕೆ ಆತನು ತನ್ನ ದೇಹವನ್ನು ತನ್ನ ಯೋಗಾಗ್ನಿಯಿಂದಲೇ ಭಸ್ಮಮಾಡುವನು. ಹೀಗೆ ಧೃತರಾಷ್ಟ್ರನ ದೇಹವು ಅವನ ಯೋಗಾಗ್ನಿ ಯಿಂದ ಪರ್ಣಶಾಲಾಸಮೇತವಾಗಿ ದಗ್ಧವಾಗುತ್ತಿರುವುದನ್ನು ನೋಡಿಗಾಂ ಧಾರಿಯೂ ಅದೇ ಅಗ್ನಿಯಲ್ಲಿ ಪ್ರವೇಶಿಸಿ' ದೇಹತ್ಯಾಗವನ್ನು ಮಾಡುವಳು.