ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೧೪.] ಪ್ರಥಮಸ್ಕಂಧವು. ೧೬೩ ಈ ಆಶ್ಚದ್ಯವನ್ನು ನೋಡಿ ವಿದುರನೂ ಕೂಡ, ದುಃಖಹರ್ಷಗಳಿಂದ ಕದಲಿ ದಮನಸ್ಸುಳ್ಳವನಾಗಿ, ಒಡನೆಯೇ ಆ ಸ್ಥಳವನ್ನು ಬಿಟ್ಟು, ತೀರಯಾತ್ರಾ ವಾಗಿ ಹೊರಟುಬಿಡುವನು.” ಎಂದು ನಾರದನು, ಧರರಾಜನಿಗೆ ಮುಂದಿನ ವೃತ್ತಾಂತವನ್ನು ತಿಳಿಸಿ, ತುಂಬುರುಸಹಿತನಾಗಿ ಆಗಲೇ ಅಂತರಿಕ್ಷಕ್ಕೆ ಹಾರಿ ದನು. ಇತ್ತಲಾಗಿ ಧರರಾಜನೂಕೂಡ ನಾರದನು ಹೇಳಿದ ವೃತ್ತಾಂತ ವನ್ನು ಕೇಳಿ, ಅದನ್ನೇ ಮನಸ್ಸಿನಲ್ಲಿ ದೃಢವಾಗಿಟ್ಟುಕೊಂಡು, ತನಗಿದ್ದ ಮ ನೋವ್ಯಥೆಯನ್ನು ನೀಗಿ ನಿಶ್ಚಿಂತನಾಗಿದ್ದನು. ಇಲ್ಲಿಗೆ ಹದಿಮೂರನೆಯ ಅಧ್ಯಾಯವು, ಧರರಾಜನು ದುಶ್ಯ ಕುನಗಳನ್ನು ಕಂಡು ಚಿಂತಾಕು ) ,

  • ಲನಾಗಿದ್ದುದು. ಅರ್ಜುನಾಗಮನವು. ಹಿಂದೆ ಅರ್ಜುನನು ದ್ವಾರಕೆಯಲ್ಲಿ ತನ್ನ ಬಂಧುಗಳನ್ನು ನೋಡಬೇ ಕೆಂದೂ, ಶ್ರೀಕೃಷ್ಣನ ಆದ್ಭುತಚಾರಿತ್ರಗಳನ್ನು ತಿಳಿಯಬೇಕೆಂದೂ, ಶ್ರೀಕೃ ಷ್ಣನೊಡನೆ ಅಲ್ಲಿಗೆ ಹೋದಮೇಲೆ, ಅಲ್ಲಿಯೇ ಕೆಲವು ತಿಂಗಳವರೆಗೆ ನಿಂತು ಬಿಟ್ಟನು. ಇಷ್ಟರಲ್ಲಿ ಇತ್ತಲಾಗಿ ಧನ್ಯರಾಜನಿಗೆ ಕೆಲವು ದುಶ್ಯಕುನಗಳು ಕಂಡು ಬಂದುವು. ಅರ್ಜುನನು ಬಹುಕಾಲದವರೆಗೆ ಹಿಂತಿರುಗಿ ಬಾರದಿದ್ದುದ ನ್ಯೂ , ಇತ್ತಲಾಗಿ ದುರ್ನಿಮಿತ್ತಗಳು ತಲೆದೋರುತ್ತಿರುವುದನ್ನೂ ನೋಡಿ ಧರರಾಜನಿಗೆ ಮನಸ್ಸಿನಲ್ಲಿ ಚಿಂತೆಯು ಹುಟ್ಟಿತು. ಕಾಲಸ್ಥಿತಿಯೂ ಕೂ ರವಾಗಿ ಪರಿಣಮಿಸುತ್ತ ಬಂದಿತು. ಋತುಥರಗಳೆಲ್ಲವೂ ವ್ಯತ್ಯಸ್ತವಾಗಿ ಕಂಡುಬಂದುವು. ಮನುಷ್ಯರೆಲ್ಲರೂ ಕ್ರೋಥಲೋಭಾಡಿದುರ್ಗುಣಗಳಲ್ಲಿಯೇ ವಿಶೇಷಾಸಕ್ತಿಯುಳ್ಳವರಾಗಿ, ದುಷ್ಟಾರಗಳಲ್ಲಿ ಪ್ರವರ್ತಿಸುತ್ತಿದ್ದರು. ವ್ಯವ ಹಾರಗಳೆಲ್ಲವೂ ಮೋಸದಿಂದಲೇ ನಡೆಯುತ್ತಿದ್ದುವು. ವಿತ್ರವರ್ಗದಲ್ಲಿಯೂ ಕೂಡ ಪರಸ್ಪರವಂಚನೆಗಳು!ಹೆಚ್ಚಿ ಹೋದುವು. ತಂದೆತಾಯಿಗಳಿಗೆ ಮಕ್ಕ ಇಲ್ಲಿ ವಾತ್ಸಲ್ಯವು ತಪ್ಪಿತು. ಮಿತ್ರರಲ್ಲಿಯೂ, ಸಹೋದರರಲ್ಲಿಯೂ,ದಂಪತಿ ಗಳಲ್ಲಿಯೂ ಪರಸ್ಪರಕಲಹವು ಹೆಚ್ಚಿತು. ತಂದೆತಾಯಿಗಳು ಕನ್ಯಾವಿಕ್ರ ಯದಲ್ಲಿ ಪ್ರವರ್ತಿಸುತ್ತಿದ್ದರು. ಮಕ್ಕಳು 'ವೃದ್ಧರಾದ ತಂದೆತಾಯಿಗಳನ್ನು