ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೪ ಶ್ರೀಮದ್ಭಾಗವತವು [ಅಧ್ಯಾ, ೧೪. ಪೋಷಿಸದೆ ನಿರಾಕರಿಸುತಿದ್ದರು, ಬ್ರಾಹ್ಮಣರು ವೇದಾಧ್ಯಯನಗಳನ್ನು ಬಿ ಟ್ಟುಬಿಟ್ಟರು. ಶೂದ್ರರು ವೇದಪಠನಕ್ಕೆ ತೊಡಗಿದರು. ಇವೆಲ್ಲವನ್ನೂ ನೋಡಿ ಧರರಾಜನಿಗೆ ಮನಸ್ಸಿನಲ್ಲಿ ಬಹಳವಾದ ಚಿಂತೆಯು ಹುಟ್ಟಿತು. ಆ ಥರ ಪ್ರಚುರಗಳಾದ ಈ ದುರ್ನಿಮಿತ್ರಗಳೆಲ್ಲವೂ ಕಾಲವೈಪರೀತ್ಯದಿಂದಲೇ ತಲೆದೋರುತ್ತಿರುವುವೆಂದು ತಿಳಿದು, ಧಮ್ಮರಾಜನು ತನ್ನ ತಮ್ಮನಾದ ಭೀಮ ನನ್ನು ಕರೆದು, 14 ವತ್ಸ ಭೀಮಾ ! ಅರ್ಜುನನು ಬಂಧುಗಳನ್ನು ನೋಡಿ ಬರುವುದಕ್ಕಾಗಿಯೂ, ಶ್ರೀಕೃಷ್ಣನ ಆದ್ಭುತಚರಿತ್ರಗಳನ್ನು ತಿಳಿಯುವುದ ಕ್ಯಾಗಿಯೂ ದ್ವಾರಕೆಗೆ ಹೋಗಿ ಇದುವರೆಗೆ ಪೂರ್ಣವಾಗಿ ಏಳುತಿಂಗ ಗಳುಗಳು ಕಳೆದುಹೋದುವು. ಇಷ್ಟು ದಿನಗಳಾದರೂ ಅವನು ಹಿಂತಿರುಗಿ ಬಾರದಿರುವುದಕ್ಕೆ ಕಾರಣವೇನೆಂದು ತಿಳಿಯಲಿಲ್ಲ. ಯೋಚಿಸಿ ನೋಡಿದರೆ ದೇವರ್ಷಿಯಾದ ನಾರದನು ನಮಗೆ ಸೂಚಿಸಿಹೋದ ಕಾಲವು ಈಗಲೇತಿ ದೋರಿರುವಂತೆ ಕಾಣುವುದು. ಹಾಗಿದ್ದರೆ ಪೂಜ್ಯನಾದ ಶ್ರೀಕೃಷ್ಣನು ಲೀ ಲಾರ್ಥವಾಗಿ ಗ್ರಹಿಸಿದ ತನ್ನ ದೇಹವನ್ನು ಬಿಟ್ಟು ಹೋಗುವಪ್ರಯತ್ನದಲ್ಲಿ ರಬೇಕಲ್ಲವೆ ? ಭೀಮಾ ! ನಮಗೆ ಈ ರಾಜಸಂಪತ್ಯ, ಈ'ರಾಜ್ಯವೂ ಈ ಪತ್ನಿಯರೂ, ಈ ನಮ್ಮ ಪ್ರಾಣಗಳೂ, ಕುಲವೂ, ಪ್ರಜೆಗಳೂ,ಇದುವರೆಗೆ ನಮಗುಂಟಾದ ಶತ್ರುಜಯವೂ, ನಮಗೆ ಮುಂದೆ ಉತ್ತಮಲೋಕಪ್ರಾಪ್ತಿಗೆ ಬೇಕಾದ ಯಜ್ಞಯಾಗಾದಿಗಳನ್ನು ನಡೆಸತಕ್ಕ ಸಾಮವೂ, ಆ ಶ್ರೀಕೃ ಷ್ಣನ ಪರಮಾನುಗ್ರಹಬಲದಿಂದ ಬಂದುದಲ್ಲದೆ ಬೇರೆಯಲ್ಲ. ಅ ಶ್ರೀಕೃಷ್ಣ ನಿಗೆ ಆಪಾಯವೇನಾದರೂ ಉಂಟಾಗಿರಬಹುದೋ ಎಂದು ನನ್ನ ಮನಸ್ಸು ಬಹಳವಾಗಿ ತುಳಿಸುತ್ತಿರುವುದು. ವತ್ಸ ಭೀಮಾ ! ಇದೋ ! ಆಕಾಶದಲ್ಲಿ ಯೂ, ಭೂಮಿಯಲ್ಲಿಯೂ, ಆಗಾಗ ನನ್ನ ದೇಹದಲ್ಲಿಯೂ, ತಲೆದೋರುತ್ತಿ ರುವ ಭಯಂಕರಗಳಾದ ದುರ್ನಿಮಿತ್ತಗಳನ್ನು ನೋಡಿದೆಯಾ? ಇವೆಲ್ಲವೂ ನ ನ್ನ ಬುದ್ಧಿಯನ್ನು ಬಹಳವಾಗಿ ಕಳವಳಹೊಂದಿಸುತ್ತಿರುವುವು. ಇದೇನೋ ಡು! ಈ ನನ್ನ ಎಡಗಣ್ಣು, ಎಡತೋಳು, ಎಡದತೊಡೆ, ಇವೆಲ್ಲವೂ ಕ್ಷಣಕ್ಷಣ ಕ್ಕೂ ಆದಿರುತ್ತಿರುವುವು. ಇದಕ್ಕಿದ್ದ ಹಾಗೆ ನನ್ನ ಹೃದಯವು ನಡುಗುತ್ತಿರು ವುದು. ಇವೆಲ್ಲವನ್ನೂ ನೋಡಿದರೆ ಶೀಘ್ರದಲ್ಲಿಯೇ ನಮಗೆ ಏನೋ ಒಂದು