ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೩ ಶ್ರೀಮದ್ಭಾಗವತವು ಅಧ್ಯಾ, ೧೪, ತಾಯಿಯ ಮೊಲೆಯನ್ನು ಕುಡಿಯಲೊಲ್ಲವು! ಹಸುಗಳು ತಮ್ಮ ಕರುಗಳಿಗೆ ಹಾಲನ್ನು ಸೆರೆಬಿಡದೆ ಒದೆದು ನೂಕುವುವು!ಗೋವುಗಳು ಕಣ್ಣೀರುಬಿಟ್ಟು, ಅಳುತ್ತಿರುವುವು.ವೃಷಭಗಳು ಮಂದೆಯಲ್ಲಿಯೂ ಸಂತೋಷವಿಲ್ಲದೆ ಕೊರಗು ವಂತೆ ಕಾಣುವುವು. ದೇವಾಲಯಗಳಲ್ಲಿರುವ ದೇವತಾಪ್ರತಿಮೆಗಳೂ ಕೂಡ ಕಣ್ಣೀರುಬಿಡುವಂತೆಯೂ ಮೈಯಲ್ಲಿ ಬೆವರನ್ನು ಸುರಿಸುವಂತೆಯೂ,ಇದ್ದಕ್ಕಿ ದಹಾಗೆ ಮೇಲೆ ಹಾರುವಂತೆಯೂ ಕಾಣುತ್ತಿರುವುವು ಇದೋ! ಈ ನಮ್ಮ ಜನಪದಗಳೂ, ಗ್ರಾಮಗಳೂ, ಪಟ್ಟಣಗಳೂ, ಉದ್ಯಾನವನಗಳೂ, ಸರೋ ವರಗಳೂ, ಋಷ್ಯಾಶ್ರಮಗಳೂ, ಗಣಿಗಳೂ, ಎಂದಿನಂತೆ ಉಲ್ಲಾಸವಿಶಿಷ್ಟ ವಾಗಿಲ್ಲದೆ ಕೇವಲಕಾಂತಿಹೀನವಾಗಿರುವುವು. ನಮಗೆ ಯಾವ ಅನಾ ಗಿ ಈ ದುರ್ನಿಮಿತ್ತಗಳೆಲ್ಲವೂ ಕಾಣುವುವೋ ತಿಳಿಯಲಿಲ್ಲ! ಇಷ್ಟೊಂದು ಭ ಯಂಕರದುರ್ನಿಮಿತ್ತಗಳನ್ನು ನೋಡಿದರೆ, ಅಸಾಧಾರಣಶುಭಲಕ್ಷಣಗ ಳುಳ್ಳ ಆ ಶ್ರೀಕೃಷ್ಣನ ಪಾದಪದ್ಮಗಳಿಂದ ತುಳಿಯಲ್ಪಡುವ ಭಾಗ್ಯವು ಇ ನ್ನು ಮೇಲೆ ಈ ಭೂಮಿದೇವಿಗೆ ಲಭಿಸಲಾರದೆಂದೇ ಎಣಿಸಬೇಕಾಗಿದೆ” ಎಂದ ನು. ಹೀಗೆ ಧರಪುತ್ರನು ಮಹೋತ್ಸಾತಗಳನ್ನು ನೋಡಿದ ಭಯದಿಂದ ತಮ್ಮ ಳಿಸುತ್ತಿರುವ ಸಮಯಕ್ಕೆ ಸರಿಯಾಗಿ, ದ್ವಾರಕೆಯಿಂದ ಅರ್ಜುನನು ಹಿಂತಿರು ಗಿ ಬಂದು,ಧರರಾಜನ ಪಾದಗಳನ್ನು ಹಿಡಿದು ನಮಸ್ಕರಿಸಿದನು. ಆದರೆ ಆಗ ಅರ್ಜುನನ ಸ್ಥಿತಿಯು ಎಂದಿನಂತೆ ಹರ್ಷೋನ್ಮುಖವಾಗಿರಲಿಲ್ಲ ಏನೋಬಹಳ ದುಃಖಾತುರನಾದಂತೆ ಧರರಾಜನ ಮುಂದೆ ತಲೆಯನ್ನು ತಗ್ಗಿಸಿ, ಪಳಪ ಳನೆ ಕಣ್ಣೀರುಬಿಡುತ್ತ ನಿಂತಿದ್ದನು. ಹೀಗೆ ತನ್ನ ಪ್ರಿಯಸಹೋದರನಾದ ಅರ್ಜುನನು,ಕಳೆಗುಂದಿದ ಮುಖದಿಂದ ದುಃಖಾಕುಲನಾಗಿ ನಿಂತಿರುವುದನ್ನು ನೋಡಿದೊಡನೆ, ಧರರಾಜನಿಗೆ, ಹಿಂದೆ ನಾರದನು ಹೇಳಿ ಹೋದ ಮಾತು ನೆನಪಿಗೆ ಬಂದಿತು. ಆತನ ಮನಸ್ಸಿಗೂ ಕಳವಳವು ಹುಟ್ಟಿತು.ಹೀಗೆ ಚಿಂತಾ ಕುಲನಾದ ಥರ ಪುತ್ರನು, ತನ್ನ ಮಿತ್ರ ಮಂಡಲಿಯೆಲ್ಲವೂ ಕೇಳುತ್ತಿರುವ ಹಾ ಗೆ ಅರ್ಜುನನನ್ನು ಕುರಿತು ಪ್ರಶ್ನೆ ಮಾಡುವನು. 'ವತ್ಸ ಅರ್ಜುನಾ! ಇದೇ ನಿದು! ನೀನು ಇಷ್ಟು ದುಃಖಾಕುಲನಾಗಿರುವುದಕ್ಕೆ ಕಾರಣವೇನು ? ದ್ವಾರಕೆ ಯಲ್ಲಿ ನಮ್ಮ ಬಂಧುಗಳೆಲ್ಲರೂ ಕ್ಷೇಮದಿಂದಿರುವರಷ್ಟೆ? ಮಧುಗಳು, ಭೂ