ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೮ ಶ್ರೀಮದ್ಭಾಗವತವು ಅಧ್ಯಾ ೧೪, ದ ದ್ವಾರಕೆಯಲ್ಲಿರುವುದರಿಂದಲೇ,ಯಾದವರೆಲ್ಲರೂ ಲೋಕಪೂಜ್ಯರೆನಿಸಿ,ಯ ಕರಂತೆ ಪರಮಾನಂದವಿಶಿಷ್ಯರಾಗಿ ಮೆರೆಯುತ್ತಿರುವರೋ, ಯಾವ ಮ ಹಾತ್ಮನ ಪಾದಸೇವೆಯೊಂದೇ ತಮಗೆ ಮುಖ್ಯಕರವೆಂದು ನಂಬಿದುದರಿಂ ದ, ಸತ್ಯಭಾಮೆ ಮೊದಲಾದ ಅಷ್ಟಮಹಿಷಿಯರೂಹದಿನಾರುಸಾವಿರಮಂ ದಿ ಗೋಪಿಯರೂ, ಆ ಭಗವಂತನು ಯುದ್ಧದಲ್ಲಿ ದೇವತೆಗಳನ್ನು ಜಯಿಸಿ ತಂದ ಪಾರಿಜಾತಾದಿಗಳಿಂದ, ವಜ್ರಧಾರಿಯಾದ ಮಹೇಂದ್ರನ ಪತ್ನಿ ಯರಿಗೆ ಯೋಗ್ಯಗಳಾದ ಅಭೀಷ್ಮವಸ್ತುಗಳೆಲ್ಲವನ್ನೂ ಪಡೆಯುತ್ತಿರುವರೋ,ಯಾವ ಪುರುಷೋತ್ತಮನ ಭುಜಬಲಾಶ್ರಯದಿಂದ ಯಾ ದವರು ದೇವತೆಗಳನ್ನು ಜ ಯಿಸಿ ಬಲಾತ್ಕಾರದಿಂದಸಾಗಿಸಿತಂದ ದೇವಯೋಗ್ಯವಾದ ಸುಧಾಸಭೆಯ ನ್ನು ಆಗಾಗ ತಮ್ಮ ಪಾದಗಳಿಂದ ನಿರ್ಭಯವಾಗಿ ತುಳಿದು ನಿಲ್ಲುವರೋ, ಅಂತಹ ಶ್ರೀಕೃಷ್ಣಮೂರ್ತಿಯೂ ಕ್ಷೇಮಹಿಂದಿರುವನಷ್ಟೆ?ವತ್ರ! ಮ್ಯಾರಕೆ ಯಲ್ಲಿ ನೀನೂ ಇದುವರೆಗೆ ಕ್ಷೇಮಖಂಡಿವೆಯಷ್ಟೆ? ನಿನ್ನ ಮುಖವು ಹೇಗೋ ಕಳೆಗುಂದಿದಂತೆ ತೋರುವುದು. ಈಗ ನಿನ್ನ ಮುಖದಲ್ಲಿ ಮೊದಲಿದ್ದ ತೇಜಸ್ಸೇ ಕಾಣುವುದಿಲ್ಲ! ಅಲ್ಲಿದ್ದಾಗ ನಿನ್ನ ದೇಹಕ್ಕೆ ಆಲಸ್ಯವೇನೂ ಉಂಟಾಗಲಿಲ್ಲವ ಪೈ? ಅರ್ಜುನಾ! ನೀನು ಇಷ್ಟು ದೀರ್ಘಕಾಲದವರೆಗೆ ಅಲ್ಲಿ ನಿಂತುದೇ ಸರಿ ಯಲ್ಲ ! ಈ ಚಿರಪರಿಚಯದಿಂದ ಅಲ್ಲಿ ನಿನಗೆ ಯಾರಾದರೂ ತಕ್ಕ ಗೌರವವ ನ್ನು ಕೊಡದೆ ಅವಮಾನಪಡಿಸಿರುವರೇನು ? ಅದೇನೂ ಇಲ್ಲವಷ್ಟೆ ? ನಿನ್ನ ಮುಖವೇನೋ ಬಹಳವಾಗಿ ಕಳೆಗೆಟ್ಟಿರುವುದು ನಮ್ಮ ಯೋಗ್ಯತೆಗೆ ಉಚಿತಗ ಇಲ್ಲದ ಶಬ್ದಾದಿವಿಷಯಗಳಲ್ಲಿ ನೀನು ಸಿಕ್ಕಿಬಿದವನಲ್ಲವಷ್ಟೆ? ಯಾರಿಗಾದರೂ ಯಾಚಕರಿಗೆ ನೀನು, ಮೊದಲು ಆಸೆಯನ್ನು ತೋರಿಸಿ, ಆಮೇಲೆ ತಪ್ಪಿನಡೆಯ ಲಿಲ್ಲವಷ್ಟೆ? ಆಶ್ರಿತರಕ್ಷಣೆಯಲ್ಲಿ ಪ್ರಸಿದ್ಧಿಗೊಂಡ ಸೀನು ನಿನ್ನಲ್ಲಿಗೆ ಶರಣಾರ್ಥಿಗ ಳಾಗಿ ಬಂದ, ಬಾಲಕರನ್ನಾಗ, ಗೋಬ್ರಾಹ್ಮಣರನ್ನಾಗಲಿ, ರೋಗಿಗಳ ನ್ನಾಗಲಿ, ಸ್ತ್ರೀಯರನ್ನಾಗಲಿ ರಕ್ಷಿಸದೆನಿರಾಕರಿಸಲಿಲ್ಲವಷ್ಟೆ? ಅಪರಿಗ್ರಾಹ್ಯ ಳಾದ ಸ್ತ್ರೀಯನ್ನು ಪರಿಗ್ರಹಿಸುವುದಕ್ಕಾಗಲಿ, ಪರಿಗ್ರಾಹ್ಯಳಾದ ಹೆಂಗಸನ್ನು ನಿರಾಕರಿಸುವುದಕ್ಕಾಗಲಿ ನೀನು ಪ್ರಯತ್ನಿಸಲಿಲ್ಲವಷ್ಟೆ? ನೀನು ದ್ವಾರಕೆಯಿಂದ ಹೊರಟುಬರುವಾಗ ದಾರಿಯಲ್ಲಿ, ನಿನಗಿಂತಲೂ ಮೇಲೆನಿಸಿದವರಿಂದಾಗಲಿ,