ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೦ ಶ್ರೀಮದ್ಭಾಗವತವು [ಅಧ್ಯಾ, ೧೫ (ಅಣ್ಣಾ ! ನಾನೇನು ಹೇಳಲಿ ! ನಮಗೆ ಬಂಧುರೂಪದಿಂದಿದ್ದ ಕೃಷ್ಣನು ನಮ್ಮನ್ನು ವಂಚಿಸಿಹೊರಟು ಹೋದನು, ಬಹ್ಮಾದಿಗಳಿಗೂ ಆಶ್ಚದ್ಯವನ್ನುಂಟು ಮಾಡುತಿದ್ದ ನನ್ನ ತೇಜಸ್ಸನ್ನೂ ಅಪಹರಿಸಿಕೊಂಡು ಹೋದನು. ಪ್ರಾಣವಿ ಲ್ಲದ ದೇಹವು ಶವವೆನಿಸುವಂತೆ ಆ ಮಹಾತ್ಮನ ಕಣವಿಯೋಗಮಾತ್ರದಿಂದ ಲೇ ಮನುಷ್ಯನು ಅಪ್ರಿಯದರ್ಶನವುಳ್ಳವನಾಗುವನು. ಅಣ! ಈಗ ನಾ ನು ಜೀವಚ್ಛವದಂತೆ ಕಾಣುವುದಕ್ಕೆ ಆ ಕೃಷ್ಣಮೂರ್ತಿಯ ವಿಯೋಗವೇ ಕಾರಣವು! ಯಾವ ಮಹಾನುಭಾವನ ಆಶ್ರಯಬಲದಿಂದ ಹಿಂದೆ ನಾನು ದ್ರು. ಪದನಗರಿಯಲ್ಲಿ ಬ್ರೌಪದಿಗೆ ಸ್ವಯಂವರವು ನಡೆದಾಗ ಕಾಮಾತುರದಿಂದ ಕೊಬ್ಬಿ ಕಲಹಕ್ಕೆ ನಿಂತ ಅನೇಕ ದುಷ್ಟರಾಜರ ವೀರವನ್ನ ಡಗಿಸಿ, ನಾಣೇರಿಸಿದ ಧನುಸ್ಸಿನಿಂದ ಮತ್ರ್ಯಯಂತ್ರವನ್ನು ಭೇದಿಸಿ, ದೌಪದಿಯನ್ನು ಸಾಧಿಸಿತಂದ ಮೋ ಅಂತಹ ಮಹಾತ್ಮನು ಈಗ ನಮ್ಮನ್ನು ಬಿಟ್ಟು ಹೋದನು. ಯಾವ ಮಹಾತ್ಮನ ಆಶ್ರಯಬಲದಿಂದಲೇ ನಾನು, ಅನೇಕ ದೇವಗಣಸಹಿತನಾದ ಇಂದ್ರನನ್ನು ಜಯಿಸಿ,ಖಾಂಡವವನವನ್ನು ಅಗ್ನಿ ದೇವನಿಗೊಪ್ಪಿಸಿದೆನೋ,ಯಾ ವ ಪುರುಷೋತ್ತಮನ ಕೃಪಾಬಲದಿಂದಲೇ ನಮಗೆ ಆತ್ಯರಕರವಾದ ಶಿಲ್ಪ ಚಾತುರವುಳ್ಳ ಮಯನಿರ್ಮಿತವಾದ ಸಭೆಯು ಲಭಿಸಿತೋ, ಯಾವನ ಕೃಪಾಬಲದಿಂದಲೇ ನಿನ್ನ ರಾಜಸೂಯಯಾಗದಲ್ಲಿ ದಿಕ್ಕುಕ್ಕಿನಿಂದಲೂ ಅನೇಕರಾಜರು ನಿನಗೆ ಕಾಣಿಕೆಗಳನ್ನು ತಂದೊಪ್ಪಿಸಿದದರೋ, ಅಕೃಷ್ಣನು ಈಗ ನಮ್ಮನ್ನು ಬಿಟ್ಟು ಹೊರಟುಹೋದನು. ಯಾವನ ತೇಜೋಬಲದಿಂದ ಹತ್ತು ಸಾವಿರಾನೆಯ ಬಲವುಳ್ಳ ಆಧ್ಯನಾದ ಭೀಮನು, ಯಜ್ಞಕ್ಕೆ ಮೊದಲು ದಿಗ್ವಿಜಯಕ್ಕೆ ಹೊರಟಾಗ, ಜರಾಸಂಧನ ತಲೆ ಕಾಲುಗಳನ್ನು ಕತ್ತರಿಸಿ, ಆತನು ಭೈರವಬಲಿಗಾಗಿ ತಂದು ಸೆರೆಯಲ್ಲಿಟ್ಟಿದ್ದ ಅನೇಕರಾಜರನ್ನು ಬಿಡಿಸಿ, ಅದ ಕ್ಯಾಗಿ ಅವನು ಸಂಗ್ರಹಿಸಿದ್ದ ಅನೇಕದ್ರವ್ಯರಾಶಿಗಳನ್ನೂ ನಿನ್ನ ಯಜ್ಞಕ್ಕೆ ಕಾಣಿಕೆಯಾಗಿ ತಂದೊಪ್ಪಿಸುವಂತೆ ಮಾಡಿದನೋ, ಆ ಕೃಷ್ಣನು ಈಗ ನಮ್ಮನ್ನಗಲಿ ಹೋದನು. ಹಿಂದೆ ದುರಾತ್ಮರಾದ ದಶ್ಯಾಸನಾದಿಗಳು, ಯಾ ಗದಲ್ಲಿ ಮಂತ್ರಪೂತವಾದ ಜಲಾಭಿಷೇಕದಿಂದ ಪವಿತ್ರವಾಗಿಯೂ, ಸುಂದರ ವಾಗಿಯೂ ಇದ್ದ ನಿನ್ನ ಪತ್ನಿ ಯ ತಲೆತುರುಬನ್ನು ಹಿಡಿದು ಸಭೆಗೆಳೆದು ತಂದು,