ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧೫.] ಪ್ರಥಮಸ್ಕಂಧವು. ೧೭೧ ಅವಳು ದೈನ್ಯದಿಂದ ಕಣ್ಣೀರುಬಿಟ್ಟು ಕಾಲಿಗೆ ಬಿದ್ದು ಪ್ರಾರ್ಥಿಸಿಕರೂ ಬಿಡದೆ, ಅವಳಿಗೆ ಮಾನಭಂಗಮಾಡಿದುದನ್ನು ನೋಡಿ ಸಹಿಸಲಾರದೆ, ಭಯ. ಹಾತ್ಮನು ತನ್ನ ವೀರಬಲದಿಂದಲೇ ಅವರನ್ನು ಕೊಲ್ಲಿಸಿ, ಅವರ ಪತ್ನಿಯ ತಲೆಕೂದಲನ್ನು ಬಿಚ್ಚಿಸಿದನೋ, ಆ ಪುರುಷೋತ್ತಮನು ಈಗ ನಮ್ಮನ್ನಗಳ ಹೋದನು. ಹಿಂದೆ ನಮ್ಮ ಶತ್ರುವಾದ ದುರ್ಯೋಧನನ ಪ್ರೇರಣೆಯಮೇಲೆ, ಸುಲಭಕೋಪಿಯಾದ ದಾಸನು ನಮ್ಮಲ್ಲಿಗೆ ಬಂದು, ನಾವಿದ್ಯ ನಿರ್ಜನ ವಾದ ಅಡವಿಯಲ್ಲಿ ದಶಸಹಸ್ರಬ್ರಾಹ್ಮಣರಿಗೆ ಭೋಜನವನ್ನೊದಗಿಸಬೇ ಕೆಂದು ನಿರ್ಬಂಧಿಸಿದಾಗ, ಯಾವ ಮಹಾತ್ಮನು ನಾವು ತಿಂದುಳಿಸಿದ ತಾಕಾ ದಗಳನ್ನು ತಿಂದು, ಆ ದುರಾಸನನ್ನು ಮಾತ್ರವಲ್ಲದೆ ಮೂರು ಲೋಕವ ನ್ಯೂ ತೃಪ್ತಿ ಪಡಿಸಿ, ಆ ಮಹರ್ಷಿಯ ಕಪದಿಂದ ನಮಗುಂಟಾಗುತಿದ್ದ ಮಹಾವಿಪತ್ತನ್ನು ತಪ್ಪಿಸಿದನೋ, ಆ ಕೃಷ್ಣನು ಈಗ ನಮ್ಮನಗಲಿ ಹೋದ ನು. ಅಣ್ಣ! ಹಿಂದೆ ನಾನು ಯುದ್ಧದಲ್ಲಿ ರುದ್ರನಿಗೂ ಆಶ್ಚದ್ಯವನ್ನುಂಟು ಮಾಡತಕ್ಕ ಮಹಾವೀರವನ್ನು ತೋರಿಸಿ ಅವನಿಂದ ಪಾಶುಪತಾಸ್ತ್ರವನ್ನು ಪಡೆದು ಬಂದುದೂ, ದೇವಾದಿದೇವತೆಗಳಿಗೂ ಆಶ್ರವುಂಟಾಗುವಂತೆ ಇದೋ! ಈಗ ಕಾಣುವ ಈ ದೇಹದಿಂದಲೇ ಹಿಂದೆ ನಾನು ಆ ದೇವೇಂದ್ರನ ಅರ್ಧಾಸನವನ್ನೇರಿ ಕುಳಿತಿದ್ದುದೂ, ಆ ಶ್ರೀಕೃಷ್ಣನು ನಿಜತೇಜಸ್ಸನ್ನು ನನ್ನ ಕ್ಲಿರಿಸಿದುದರಿಂದಲೇ ಹೊರತು ಬೇರೆಯ ! ಹಿಂದೆ ನಾನು ದೇವಲೋಕ ದಲ್ಲಿ ವಿಹರಿಸುತಿದ್ದಾಗ, ದೇವತೆಗಳೆಲ್ಲರೂ ಕಾಲಕೇಯವಧಕ್ಕಾಗಿ, ಗಾಲಿವ ಯುಕ್ತವಾದ ನನ್ನ ಈ ಬಾಹುಯುಗ್ಯವನ್ನಾಶ್ರಯಿಸಿದುದೂಕೂಡ ಆ ಶ್ರೀಕೃಷ್ಣನು ನನ್ನ ತೋಳುಗಳಲ್ಲಿ ತನ್ನ ವೀರಲೇಶವನ್ನಿರಿಸಿದ್ದುದರಿಂ ದಲ್ಲದೆ ಬೇರೆಯಲ್ಲ ! ಅಂತಹ ಕೃಷ್ಣನು ಈಗ ನಮ್ಮನ್ನಗಲಿ ಸಿಜಿಕ ವನ್ನು ಸೇರಿಬಿಟ್ಟನು. ಎಲೈ ಆರನೆ! ಮುಖ್ಯವಾಗಿ ಹಿಂದಿನಿಂದಲೂ ನಾನು ನಡೆಸಿದ ಒಂದೊಂದುಕಾರವೂ ಆ ಕೃಷ್ಣಸಹಾಯದಿಂದಲ್ಲದೆ ಬೇರೆಯಲ್ಲ. ಹಿಂದಿನಯುದ್ಧದಲ್ಲಿ ಅತಿದುಸ್ತರವಾಗಿದ್ದ ಕೌರವಸೈನ್ಯವೆಂಬ ಮಹಾಸಮು ದ್ರವನ್ನು ದಾಟಿದುದು, ಶತ್ರುರಾಜ್ಯಗಳಿಂದ ಬಹುದ್ರವ್ಯವನ್ನು ಸಂಗ್ರಹಿಸಿ ತಂದುದು, ವೈರಿರಾಜರ ಅಮೂಲ್ಯತಿರೋರತ್ನಗಳನ್ನು ಕಿತ್ತು ತಂದುದು,