ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಬ್ಭಾ. ೧೫. | ಪ್ರಥಮಸ್ಕಂಧವು ೧೭೩ ಆತನ ಬಾಯಿಂದ ಹೊರಟ ಮಧುರಾಕ್ಷರಗಳು ಈಗಲೂ ನನ್ನ ಮನಸ್ಸಿನಲ್ಲಿ ದೃಢವಾಗಿ ನಾಟಿರುವುವು. ಈಗ ಅವುಗಳನ್ನು ನೆನಸಿಕೊಂಡ ಮಾತ್ರಕ್ಕೆ ನನ್ನ ಹೃದಯವು ಹೊರಳುತ್ತಿರುವುದು. ಹಿಂದೆ ನಿದ್ರಾಹಾರವಿಹಾರಸಂಚಾರಗಳೇ ಮೊದಲಾದ ಒಂದೊಂದು ಕಾವ್ಯದಲ್ಲಿಯೂ ನಾನು ಆ ಮಹಾತ್ಮನೊಡನೆ ಸ ಸಮಭಾವದಿಂದ ವರ್ತಿಸುತಿಬ್ಬಾಗ,ಅಜ್ಞತೆಯಿಂದ ನಾನು ಎಷ್ಟೆಷ್ಟೋತಪ್ಪು ಗಳನ್ನು ನಡೆಸಿ ಅವನನ್ನು ತಿರಸ್ಕರಿಸಿದ್ದರೂ ಕೂಡ, ಸುರಲೋಕನಾಥನಾ ದ ಆ ಪುರುಷೋತ್ತಮನು ಮಹಾಮಹಿಮೆಯುಳ್ಳವನಾದುದರಿಂದ, ವಿ ತ್ರರ ತಪ್ಪನ್ನು ಪಿ.ತ್ರನೂ, ಮಕ್ಕಳ ತಪ್ಪನ್ನು ತಂದೆಯೂ ಮನ್ನಿಸುವಂತೆ ನನ್ನ ಮಹಾಪರಾಧಗಳೆಲ್ಲವನ್ನೂ ಮನ್ನಿಸುತಿದನು. ಅಂತಹ ಕೃಷ್ಣನು ಈಗ ನನ್ನ ಹೃದಯವನ್ನು ಸಹಿಸಿಕೊಂಡು ಹೋದನು. ! ಇನ್ನು ಹೆಚ್ಚು ಮಾತಿಸಂದೇನು? ಮುಖ್ಯವಾಗಿ ನಮಗೆ ಸತ್ವವಿಧದಲ್ಲಿಯೂ ಹಿತೈಷಿಯಾಗಿ, ಮಿತ್ರನಾಗಿ, ಪರಮಪ್ರಿಯನಾಗಿ, ಸದಾ ನನ್ನ ಹೃದಯದಲ್ಲಿ ಸೇರಿದ್ದ ಪುರುಷೋತ್ರಮನಾದ ಶ್ರೀಕೃಷ್ಣ, ಈಗ ನನ್ನನ್ನಗಲಿ ಹೋದನು ಅಮಹ, ತ್ಮನು ಬೆನ್ನನ್ನು ಒಮ್ಮೆ ಸಿಜಿಕಕ್ಕೆ ಹೋದಮೇಲೆ, ನಾನು ಆಕೃಷ್ಣನ ಭಾಖ್ಯಾನವನ್ನು ರಕ್ಷಿಸುತ್ತ, ಪರಕೆಯಿಂದ ಹೊರಟು ಈ ಕಡೆಗೆ ಬರು ತಿರುವಾಗ, ವರಿಯಲ್ಲಿ ದುರ್ಜನರಾದ ಕೆಲವು ಗೋಪಾಲಕರು ನನ್ನನ್ನು ತ ಡೆದು ನಿಂತರು ಅಬಲೆಯಾದ ಹೆಂಗಸಿನಂತೆ ನಾನು ಅವರಿಂದ ಸಿಪಿಷಮಾ ತ್ರದಲ್ಲಿ ಜಯಿಸಲ್ಪಟ್ಟನು ಅಣ್ಣ! ಮಹಾತ್ಮನ ಮಾ: ಯೆಯನ್ನು ನೋಡಿ ದೆಯಾ?” ಇದೊ.ಹಿಂದ್ದ ಗಾಂಡೀವಧನುಸ್ಸೇ ಈಗಲೂ ನನ್ನ ಕೈಯಲ್ಲಿ ರುವುದು! ಈಗ ಅದೇ ಬಾಣಗಳನ್ನು ಹಿಡಿದಿರುವೆನು! ರಥವೂ ರಥಾಶ್ವಗ ಭೂ ಅವೇ!ಹಿಂದೆ ಅನೇಕರಾಜಮಂಡಲಿಯಿಂದ ಮಹಾರವನೆಂದು ಗೌರವಿಸ ಲ್ಪಡುತಿದ್ದ ಆಗಿನ ಅರ್ಜುನನೇ ನಾನಲ್ಲದೆ ಹೊಸಬನಲ್ಲ! ಏನಿದ್ದರೇನು? ಆಗಿದ್ದ ಶ್ರೀಕೃಷ್ಣ ಸಾನ್ನಿಧ್ಯವೊಂದು ತಪ್ಪಿದುದರಿಂದ, ಇತರಸಹಾಯಸಂಪತ್ತಿಗಳೆ ಲ್ಲವೂ, ಊಷರಕ್ಷೇತ್ರದಲ್ಲಿ ಬಿತ್ತಿದ ಬೀಜದಂತೆಯೂ, ಬೂಟಯಲ್ಲಿ ಮಾಡಿದ ಹೋಮದಂತೆಯೂ, ಅಸತ್ಪಾತ್ರದಲ್ಲಿ ಕೊಟ್ಟ ದಾನದಂತೆಯೂ ಕ್ಷಣಮಾ ತ್ರದಲ್ಲಿ ನಿರರಕಗಳಾದುವು. ಅಣ್ಣಾ ! ದ್ವಾರಕೆಯಲ್ಲಿ ನಮ್ಮ ಯಾದವ.