ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. 4ಎಲೆ ಬಾಲೆ ! ಕೇಳು! ಈ ಕಲಿಯುಗವಾದರೋ ಅತಿಕ್ರೂರವಾದು ದು, ಇದರಿಂದ ಲೋಕದಲ್ಲಿ ಸದಾಚಾರವೆಲ್ಲವೂ ಕೆಟ್ಟುಹೋದುವು. ತಪಸ್ಸ ಮಾಧಿಗಳೆಲ್ಲವೂ ನಷ್ಟವಾದುವು. ಜನರೆಲ್ಲರೂ ದುಷ್ಕರ್ಮದಲ್ಲಿ ಪ್ರವರ್ತಿಸಿ, ಅಸುರಪ್ರಕೃತಿಯನ್ನು ಹೊಂದಿರುವರು. ಸತ್ಪುರುಷರು ದುಃಖವನ್ನನುಭವಿ ಸುತ್ತಿರುವರು, ದುರ್ಜನರು ಸಂತೋಷದಿಂದುಬ್ಬುತ್ತಿರುವರು. ದುಷ್ಪರಿಂ ದುಂಟಾದ ಭಾರವನ್ನು ಸಹಿಸಲಾರದೆ ಭೂದೇವಿಯು ಕ್ರಮಕ್ರಮವಾಗಿ ಕುಗ್ಗುತ್ತಿರುವಳು. ನಿನ್ನ ನ್ನಾಗಲಿ, ನಿನ್ನ ಮಕ್ಕಳನ್ನಾಗಲಿ ಕಣ್ಣೆತ್ತಿ ನೋಡುವ ವರೇ ಇಲ್ಲದಂತಾಗಿರುವುದು. ಇದರಿಂದಲೇ ನಿಮಗೆ ಈ ವಿಧವಾದ ಜೀರ್ಣ ದಶೆಯುಂಟಾಯಿತು ಆದರೆ ಬೃಂದಾವನಕ್ಷೇತ್ರದ ಸಂಬಂಧದಿಂದ, ತಿರುಗಿ ನಿನಗೆ ಈ ಹೊಸಯೌವನವುಂಟಾಯಿತು. ಆ ಕ್ಷೇತ್ರವೊಂದೇ ಈಗ ಪರಮ ಪುಣ್ಯವೆನಿಸಿಕೊಂಡಿರುವುದು. ಆ ಸ್ಥಳವೊಂದರಲ್ಲಿಯೇ ಈಗ ದೈವಭಕ್ತಿಯು ನಲಿದಾಡುತ್ತಿರುವುದು. ಈ ನಿನ್ನ ಮಕ್ಕಳಿಗೆ ಅಲ್ಲಿ ಹೋಗುವುದಕ್ಕೂ ಅವ ಕಾಶವಿಲ್ಲವಾದುದರಿಂದ, ಈ ಜೀರ್ಣದಶೆಯಲ್ಲಿ ನರಳುತ್ತಿರುವರು.”ಎಂದನು. ಅದಕ್ಕಾಭಕ್ತಿಯು “ಎಲೈ ಮಹಾತ್ಮನ ! ಅಷ್ಟು ಧಾರ್ಮಿಕನಾದ ಪರೀಕ್ಷೆ ಪ್ರಾಜಸಿಬ್ಬಾಗಲೂ, ಇಲ್ಲಿ ಆ ಕಲಿಗೆ ಹೇಗೆ ಪ್ರವೇಶವುಂಟಾಯಿತು? ಪರಮ ದಯಾಳುವಾದ ಶ್ರೀ ಮಹಾವಿಷ್ಣುವಾದರೂ ಈ ಅಧರ್ಮಪ್ರಾಚುರವನ್ನು ನೋಡಿ ಹೇಗೆ ಸಹಿಸುತ್ತಿರುವನು ? ಈ ಸಂದೇಹವನ್ನು ನನಗೆ ನೀಗಿಸಬೇಕು” ಎಂದಳು. ಇದನ್ನು ಕೇಳಿ ನಾರದನು (ಎಲೆ ಭದ್ರೆ ಕೇಳು! ಯಾವಾಗ ಶ್ರೀ ಕೃಷ್ಣ ಪರಮಾತ್ಮನು ಈ ಭೂಮಿಯನ್ನು ಬಿಟ್ಟು ಶಾಶ್ವತವ ದ ತನ್ನ ಸ್ಥಾನಕ್ಕೆ ಸೇರಿದನೋ, ಆ ದಿನದಿಂದಲೇ ಕಲಿಯು ಈ ಭೂಮಿಯಲ್ಲಿ ಕಾಲಿ ಟೈನು, ಪರೀಕ್ಷಿದ್ರಾಜನು ದಿಗ್ವಿಜಯಕ್ಕಾಗಿ ಹೊರಟ ಕಾಲದಲ್ಲಿ ಆ ಕಲಿಯು ಇವನ ದೃಷ್ಟಿಗೆ ಗೋಚರಿಸಿದನು. ಆದರೆ ಅವನು ಈ ರಾಜನನ್ನು ನೋಡಿದೊಡನೆ, ಅತ್ಯಂತದೈನ್ಯದಿಂದ ಇವನಲ್ಲಿಯೇ ಮರೆಹೊಕ್ಕನು, ಅದ ಕ್ಕಾಗಿ ರಾಜನು ಆ ಕಲಿಯನ್ನು ಕೊಲ್ಲದೆ ಕೃಪಾಪರವಶನಾಗಿ ಬಿಟ್ಟುಬಿ ಟ್ಟನು. ಆದರೇನು? ಈ ಕಲಿಪ್ಪಾಚುರದಿಂದ ಲೋಕದಲ್ಲಿ ಸಮಸ್ಯಸತ್ಯ ರ್ಮಗಳೂ ಕೆಟ್ಟು ಹೋಗಿದ್ದರೂ, ತಪಸ್ಸಿನಿಂದಲೂ, ಯೋಗಾಭ್ಯಾಸಸಮಾ