ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೧೫.] ಪ್ರಥಮಸ್ಕಂಧವು. ೧೩೫ ಸ್ಸಿನ ರಾಗಾಧಿಕಲ್ಮಷಗಳೆಲ್ಲವೂ ನೀಗಿ, ಅವನ ಬುದ್ಧಿಯಲ್ಲಿ ತಿಳಿವುಂ ಟಾಯಿತು. ವಾಸುದೇವನ ಪಾದಪದ್ಮಗಳನ್ನು ಎಡೆಬಿಡದೆ ಧ್ಯಾನಿಸುತಿ ದ್ದುದರಿಂದ ಭಕ್ಷಾವೇಶವೂ ಹೆಚ್ಚಿತು, ಕಾಮಕ್ರೋಧಾದಿದುರ್ಗುಣಗ ಳೊಂದೂ ತಲೆಯೆತ್ತದಂತಾಯಿತು. ಹೀಗೆ ನಿಷ್ಕಲ್ಮಷವಾದ ಬುದ್ಧಿಯುಳ್ಳ ಅರ್ಜುನನು, ಹಿಂದೆ ರಣಾಗ್ರದಲ್ಲಿ ಭಗವಂತನು ತನಗುಪದೇಶಿಸಿದ ಗೀತಾರ ವನ್ನು ತನ್ನಲ್ಲಿ ತಾನೇ ಮನನಮಾಡಿಕೊಂಡನು. ತಾನು ಆ ಗೀತಾರವನ್ನು ಕೇಳಿ ಬಹಳ ದಿನಗಳು ಕಳೆದುಹೋದುದರಿಂದಲೂ, ಅದರಿಂದೀಚೆಗೆ ತಾನು ಬೇರೆ ಬೇರೆ ಕಾರಾಂತರಗಳಲ್ಲಿದ್ದುದರಿಂದಲೂ, ತಮೋಗುಣಪ್ರಾಬಲ್ಯದಿಂದ ಲೂ, ಹಿಂದೆ ತನಗೆ ಪ್ರಾಪ್ತವಾಗಿದ್ದ ಜ್ಞಾನವು ಕ್ರಮಕ್ರಮವಾಗಿ ಕುಂದು ತಬಂದಿ -ಗೋಗ್ರಹಣಧಾರಣಗಳಲ್ಲಿಸಮನಾದ ಅರ್ಜುನನು, ಅವೆಲ್ಲವ ನಾ ತಿರುಗಿ ತನ್ನ ಭಾವನೆಗೆ ತಂದುಕೊಂಡನು.ಹೀಗೆ ತನಗುಂಟಾದ ಬ್ರಹ್ಮ ಜ್ಞಾನದಿಂದ ಅರ್ಜುನನು, ಜೀವಾತ್ಮನಿಗೆ ಬೇರೆಬೇರೆ ದೇಹಗಳಸಂಬಂಧದಿಂದ ತೋರುವ ಭೇದಭಾಂತಿಯನ್ನು ತೊಲಗಿಸಿಕೊಂಡು, ತನಗಿರುವ ಸೂಲದೇಹ ದಮತ್ತು ಸೂಕ್ಷ್ಮ ಪ್ರಕೃತಿಯ ಸಂಬಧವೆರಡೂ ನೀಗಿದಮೇಲೆ,ಸತ್ಯಾದಿಗು ಣತ್ರಯಸಂಪರ್ಕವಿಲ್ಲದಂತಾಗುವ ನಿಜಸ್ಥಿತಿಯನ್ನೂ ತನ್ನಲ್ಲಿ ತಾನು ಅನುಸಂ ಧಾನಮಾಡಿಕೊಂಡನು. ಇದರಿಂದ ಅವನಿಗೆ ಪುನರ್ಜನ್ಮ ಸಂಬಂಧವು ನೀಗಿ ತು, ಆಪಹತಪಾಹ್ಮತ್ವವೇ ಮೊದಲಾಗಿ ಮುಕ್ತರಲ್ಲಿರುವ ಎಂಟುಗು ಣಗಳೂ ಅವನಲ್ಲಿ ನೆಲೆಗೊಂಡುವು. ಇತ್ತಲಾಗಿ ನಮ್ಮ ರಾಜನೂಕೂಡ ಅರ್ಜುನನಿಂದ ಯದುಕುಲನಾಶವನ್ನೂ ಮತ್ತು ಕೃಷ್ಣನಿರ್ಯಾಣವನ್ನೂ ಕೇಳಿದೊಡನೆ, ಹಿಂದೆ ನಾರದನು ಸೂಚಿಸಿ ಹೋಗಿದ್ದ ಸಂಗತಿಯನ್ನು ಸ್ಮರಿಸಿ, ತನ್ನ ಮನಸ್ಸನ್ನು ದೃಢಪಡಿಸಿಕೊಂಡು, ಮುಂದೆ ತನ್ನ ಸ ದೃತಿಗಾಗಿ ತಾನು ಪ್ರಯತ್ನಿಸುತ್ತಿದ್ದನು. ಇಷ್ಟರಲ್ಲಿ ಕುಂತಿದೇವಿಯೂ ಕೂಡ, ಅರ್ಜುನನಿಂದ ಶ್ರೀಕೃಷ್ಣನ ವೃತ್ತಾಂತವನ್ನೂ, ಯದುಕುಲನಾಶ ನವನ್ನೂ ಕೇಳಿದಮೇಲೆ, ಅವನ್ಯಪ್ರಯೋಜನವಾದ ಭಕ್ತಿಯಿಂದ ಶ್ರೀಕೃ ಹೃನ ಪಾದಕಮಲದಲ್ಲಿ ತನ್ನ ಮನಸ್ಸನ್ನು ನಿಲ್ಲಿಸಿ, ಆಗಲೇ ಸಂಸಾರದಲ್ಲಿ ಮೋಹವನ್ನು ತ್ಯಜಿಸಿ ವೈರಾಗ್ಯವನ್ನು ವಹಿಸಿದಳು. ಓಕೆನಕಾ! ಕಾಲಿಗೆ