ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೬ ಶ್ರೀಮದ್ಭಾಗವತವು [ಅಧ್ಯಾ, ೧೫, ಹೊಕ್ಕ ಮುಳ್ಳನ್ನು ಬೇರೆಮುಳ್ಳಿನಿಂದಲೇ ತೆಗೆದು, ಅವೆರಡನ್ನೂ ಹೊರಗೆ ಬಿಸಾಡುವಂತೆ, ಭಗವಂತನು ಯದುವಂಶದಲ್ಲಿ ಕೃಷ್ಣ ರೂಪದಿಂದವತರಿಸಿ, ಲೋಕಕಂಟಕರಾದ ದುರಾರ್ಗರೆಲ್ಲರನ್ನೂ ಕೊಲ್ಲಿಸಿ, ಭೂಭಾರವನ್ನು ತಗ್ಗಿ ಸಿದಮೇಲೆ, ಅದಕ್ಕಾಗಿ ತಾನು ಗ್ರಹಿಸಿ ಬಂದಿದ್ದ ಲೀಲಾಮಾನುಷವಿಗ್ರಹವ ನ್ಯೂ ಇಲ್ಲಿಯೇ ಬಿಟ್ಟು,ತನ್ನ ನಿಜಸ್ವರೂಪದಿಂದ ನಿಜಲೋಕಕ್ಕೆ ಸೇರಿಬಿಟ್ಟ ನು. ಭಗವಂತನಿಗೆ ಈ ತನ್ನ ಶರೀರವನ್ನು ಬಿಡುವುದೂ, ಇತರರ ಶರೀರವನ್ನು ಬಿಡಿಸುವುದೂ ಸಮಾನವಲ್ಲದೆ ಇವುಗಳಲ್ಲಿ ತಾರತಮ್ಯವೇನ ಇಲ್ಲ ! ಸಹಜ ಸ್ವರೂಪವನ್ನು ಬಿಡದೆ ಆಗಾಗ ಮೇಲಿನ ವೇಷವನ್ನು ಮಾತ್ರ ಬದಲಾಯಿ ಸುತ್ತಿರುವ ನಟನಂತೆ ಭಗವಂತನೂಕೂಡ, ತನಗೆ ಅವಶ್ಯಕತೆಯು ತೋರಿ ದಾಗ ಮ ದ್ಯಾಕಾರಗಳನ್ನು ಧರಿಸಿ ಬಂದು, ತಾನು ನಡೆಸಬೇಕಾದ ಕಾ ಕ್ಯಗಳನ್ನು ನಡೆಸಿದಮೇಲೆ ಆ ಶರೀರವನ್ನು ನೀಗಿಬಿಡುವನು. ಆದುದರಿಂದ ಈಗಲೂ ಕೃಷ್ಣನು ಭೂಭಾರಪರಿಹರಣರೂಪವಾದ ತನ್ನ ಕಾವ್ಯವನ್ನು ಮ ಗಿಸಿದಮೇಲೆ ಆ ಶರೀರವನ್ನು ನೀಗಿರುವನು. ಶೆ ಇನಕಾ! ಪುಣ್ಯ ಕೀರ್ತನವುಳ್ಳ ಶ್ರೀಕೃಷ್ಣನು ಯಾವ ದಿನದಲ್ಲಿ, ತನ್ನ ಅಸಾಧಾರಣ ದಿವ್ಯಮಂಗಳವಿಗ್ರಹ ದೊಡನೆ ಈ ಭೂಮಿಯನ್ನು ಬಿಟ್ಟು ವೈಕುಂಠಕ್ಕೆ ತೆರಳಿದನೋ, ಆಸನವೇ ಇತ್ತಲಿಂದ ! ಆಧರಹೇತುವಾದ ಕಲಿಯು ಈ ಭೂಮಿಗೆ ಕಾಲಿಟ್ಟಿತು. ಆಮೇಲೆ ಧಮ್ಮರಾಜನು ಈ ಕಲಿಪ್ರವೇಶದಿಂದ ತನ್ನ ದೇಶದಲ್ಲಿ ಪ್ರತಿಗೃಹದ ಕ್ಲಿಯೂ, ಪ್ರತಿಮನುಷ್ಯರಲ್ಲಿಯೂ, ಲೋಭ, ಹಿಂಸೆ, ಸುಳ್ಳು, ಮೋಸ, ಮೊ ದಲಾದ ದುರ್ಗುಣಗಳು ಹೆಚ್ಚಿಬರುತಿದ್ದುದನ್ನು ನೋಡಿ, ಇನ್ನು ಈ ಲೋ ಕದಲ್ಲಿರುವುದಕ್ಕೆ ಇಷ್ಟವಿಲ್ಲದೆ ಸ್ವರ್ಗಾರೋಹಣಕ್ಕಾಗಿ ನಿಶ್ಚಯಿಸಿಕೊಂಡ ನು. ಈ ನಿಶ್ಚಯವು ಹುಟ್ಟಿದೊಡನೆ ಧಮ್ಮರಾಜನು, ಅತಿವಿನೀತನಾಗಿಯೂ, ಗುಣಗಳಲ್ಲಿ ತನಗೆ ಸಮಾನನಾಗಿಯೂ ಇದ್ದ ತನ್ನ ಮಮ್ಮಗನಾದ ಪರೀ ಹೈದ್ರಾಜನನ್ನು ಕರೆತರಿಸಿ, ತನ್ನ ರಾಜ್ಯವನ್ನಾ ತನ ವಶಕ್ಕೊಪ್ಪಿಸಿ, ಹಸ್ತಿನಾವ ತಿಯಲ್ಲಿ ಪಟ್ಟಾಭಿಷೇಕವನ್ನೂ ನಡೆಸಿಬಿಟ್ಟನು. ಅನಿರುದ್ಧಕುಮಾರನಾದ ವಜ್ರನೆಂಬವನನ್ನು ಕರೆದು, ಅವನಿಗೆ ಶೂರಸೇವದೇಶಾಧಿಪತ್ಯವನ್ನು ಕೊಟ್ಟು ಮಧುರಾಪುರಿಯಲ್ಲಿ ಅವನಿಗೂ ಪಟ್ಟಾಭಿಷೇಕವನ್ನು ನಡೆಸಿದನು. ಆಮೇಲೆ