ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧೬.] ಪ್ರಥಮಸ್ಕಂಧವು, ೧೭೯ ದನ್ನು ತಿಳಿದು, ಶ್ರೀಹರಿಯಲ್ಲಿ ತನ್ನ ಮನಸ್ಸನ್ನು ದೃಢವಾಗಿ ನೆಲೆಗೊಳಿಸಿ ಪರಮಪದವನ್ನು ಹೊಂದಿದಳು. ಓಶೌನಕಾ! ಶ್ರೀಕೃಷ್ಣನಿಲ್ಯಾಣ, ಪಾಂಡ ವಪ್ರಯಾಣವೆಂಬ ಈ ಸತ್ಕಥೆಯನ್ನು ಯಾವನು ಶ್ರದ್ಧೆಯಿಂದ ಪಠಿಸುವ ನೋ, ಅಥವಾ ಭಕ್ತಿಯಿಂದ ಕೇಳುವನೋ, ಅವನು ಸಮಸ್ತಶುಭಗಳಿಗೂ ಭಾಗಿಯಾಗಿ, ಕೊನೆಗೆ ವಿಷ್ಣುಭಕ್ತಿವಿಶಿಷ್ಯನಾಗಿ, ಸಂಸಾರಬಂಧವನ್ನು ತೊಲಗಿಸಿ, ಮುಕ್ತಿಯನ್ನು ಹೊಂದುವನು. ಇದು ಹದಿನೈದನೆಯ ಅಧ್ಯಾ ಯವು. w+ ಪರೀಕ್ಷಿದ್ರಾಜನ ವೃತ್ತಾಂತವು. ww ಧರರಾಜಾದಿಗಳು ತನಗೆ ಪಟ್ಟವನ್ನು ಕಟ್ಟಿ ರಾಜ್ಯವನ್ನು ಬಿಟ್ಟು ಹೋದಮೇಲೆ, ಇತ್ತಲಾಗಿ ಪರೀಕ್ಷಿದ್ರಾಜನು, ಹಿಂದೆ ತನ್ನ ಜನನಕಾಲದಲ್ಲಿ ಜ್ಯೋತಿಶ್ಯಾಸನಿಪುಣರು ಹೇಳಿದ ರೀತಿಯಲ್ಲಿಯೇ ಬ್ರಾಹ್ಮಣೋತ್ತಮರ ಉಪದೇಶದಿಂದ ಪರಮಭಾಗವತನೆಸಿಸಿ, ಬಹಳಸದ್ಗುಣಶೀಲನೆಂಬ ಪ್ರಸಿದ್ಧಿ ಯನ್ನು ಪಡೆದು, ಧನಿಂದ ರಾಜ್ಯವನ್ನಾಳುತ್ತಿದ್ದನು. ಈತನು ರಾಜ್ಯಕ್ಕೆ ಬಂದಮೇಲೆ, ಉತ್ತರನ ಮಗಳಾದ ಇರಾವತಿಯೆಂಬ ಕನೈಯನ್ನು ಮದುವೆ ಯಾಗಿ, ಅವಳಲ್ಲಿ ಜನಮೇಜಯನೇ ಮೊದಲಾದ ನಾಲ್ಕು ಮಂದಿ ಪುತ್ರರನ್ನು ಪಡೆದನು. ಈತನು ತನ್ನ ರಾಜ್ಯಭಾರಕಾಲದಲ್ಲಿ ಕೃಪಾಚಾರರನ್ನು ಗುರು ವಾಗಿಟ್ಟುಕೊಂಡು, ಗಂಗಾತೀರದಲ್ಲಿ ಭೂರಿದಕ್ಷಿಣೆಯುಳ್ಳ ಮೂರು ಆಶ್ವ ಮೇಧಯಾಗಗಳನ್ನು ಮಾಡಿದನು, ಈ ಯಾಗಗಳಲ್ಲಿ ದೇವತೆಗಳು ಸ್ವಸ್ವರೂ ಪದಿಂದ ಪ್ರತ್ಯಕ್ಷವಾಗಿಯೇ ಬಂದು ಹವಿರ್ಭಾಗಗಳನ್ನು ಸ್ವೀಕರಿಸುತಿದ್ದರು. ಒಮ್ಮೆ ಈತನು ದಿಗ್ವಿಜಯಕ್ಕಾಗಿ ಹೊರಟು, ಸಮಸ್ತದಿಕ್ಕುಗಳನ್ನೂ ಕ್ರಮ ವಾಗಿ ಜಯಿಸುತ್ತ ಬರುವಾಗ, ದಾರಿಯಲ್ಲಿ ಒಂದಾನೊಂದುಕಡೆಯಲ್ಲಿ, ಶೂ ದ್ರನೊಬ್ಬನು, ರಾಜಲಕ್ಷಣಗಳಿಂದ ಕೂಡಿದವನಾಗಿ ಗೋಮಿಥುನವನ್ನು ಕಾ ಲಿನಿಂದೊದೆಯುತಿದ್ದುದನ್ನು ಕಂಡನು. ಅವನೇ ಕಲಿಪುರುಷನೆಂಬುದನ್ನು ತಿಳಿದು, ಪರೀಕ್ಷಿದ್ರಾಜನು ಅಕ್ಷಣವೇ ಆತನನ್ನು ನಿಗ್ರಹಿಸಿ ಬಂದನು.” ಎಂ ದು ಸೂತಪೌರಾಣಿಕನು ಹೇಳಿದುದನ್ನು ಕೇಳಿ, ಶೌನಕನು ತಿರುಗಿ