ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೨ ಶ್ರೀಮದ್ಭಾಗವತವು [ಅಧ್ಯಾ ೧೩, ಮಾನಿಸುತ್ತಬಂದನು ಮತ್ತು ಭಕ್ತವತ್ಸಲನಾದ ಶ್ರೀಕೃಷ್ಣನು ಪಾಂಡವ ರಲ್ಲಿರುವ ಪ್ರೇಮಾತಿಶಯದಿಂದ, ಕಾಲೋಚಿತವಾಗಿ ಅವರಿಗೆ ಸಾರಥಿಯಾಗಿ ಯೂ, ಮಂತ್ರಿಯಾಗಿಯೂ, ಸಭಾಧ್ಯಕ್ಷನಾಗಿಯೂ, ದೂತನಾಗಿಯೂ, ಅನುಚರನಾಗಿಯೂ ಇದ್ದು,ಆಯಾ ಸಂದರ್ಭಕ್ಕೆ ತಕ್ಕಂತೆ ರಾಜಾನುವರ್ತವ ದಿಂದಲೂ, ಸ್ತೋತ್ರದಿಂದಲೂ, ನಮಸ್ಕಾರಗಳಿಂದಲೂ ಅವರನ್ನು ವ ಶೀಕರಿಸಿ, ಸನ್ಮಾರ್ಗಕ್ಕೆಳೆಯುತಿದ್ದುದನ್ನು ನೆನೆಸಿಕೊಂಡು, ತಾನೂ ಪಾಂಡವರಂತೆಯೇ ಶ್ರೀಕೃಷ್ಣಾನುಗ್ರಹಕ್ಕೆ ಪಾತ್ರನಾಗಬೇಕೆಂಬ ಉದ್ದೇ ಶದಿಂದ, ಆ ಶ್ರೀಕೃಷ್ಣನ ಪಾದಾರವಿಂದಗಳನ್ನು ಅನವರತವೂ ತನ್ನ ಹೃದಯದಲ್ಲಿಟ್ಟು ಧ್ಯಾನಿಸುತ್ತಿದ್ದನು. ಹೀಗೆ ಪರೀಕ್ಷಿದ್ರಾಜನು ತನ್ನ ತಾತಂ ದಿರಾದ ಧರರಾಜಾಡಿಗಳ ಮಾರ್ಗವನ್ನೇ ಹಿಡಿದು, ಅದರಂತೆ ಪ್ರವರ್ತಿ ಸುತಿದ್ದ ಕಾಲದಲ್ಲಿ, ಆತನ ಕಣ್ಣಿದಿರಿಗೆ ಒಂದಾಶ್ ರವೃತ್ತಾಂತವು ನಡೆ ಯಿತು. ಅದನ್ನೂ ಹೇಳುವೆನು ಕೇಳು ! ಥರಪುರುಷನು ವೃಷಭರೂಪ ವನ್ನು ಧರಿಸಿ ಒಂದೇಕಾಲಿನಿಂದ ನಡೆಯುತ್ತ ಬರುವಾಗ, ಸಮೀಪದಲ್ಲಿ ತನ್ನಂತೆಯೇ ಗೋರೂಪವನ್ನು ಧರಿಸಿದ ಭೂಮಿಯು, ಕರುವನ್ನು ಕಳೆದು ಕೊಂಡ ಹಸುವಿನಂತೆ ಕಾಂತಿಗುಂದಿ ಕಣ್ಣೀರುಬಿಡುತ್ತಿದ್ದುದನ್ನು ಕಂಡನು. ಹೀಗೆ ದುಃಖಿತೆಯಾದ ಭೂದೇವಿಯನ್ನು ಕಂಡು ಧರಪುರುಷನು ಪ್ರಶ್ನೆ ಮಾ ಡುವನು. ಆಮ್ಮಾ! ಏನಿದು? ನಿನ್ನ ದೇಹವು ಆರೋಗ್ಯದಲ್ಲಿರುವುದ? ನಿ ನ್ನ ಮುಖವು ಬಹಳವಾಗಿ ಬಾಡಿ ಹೀಗೆ ಕಾಂತಿಗೆಟ್ಟಿರುವುದೇಕೆ? ನಿನ್ನ ಕಣ್ಣು ಗಳಲ್ಲಿ ಹೀಗೆ ದುಃಖಬಾಷ್ಪವು ತುಳುಕುತ್ತಿರುವುದಕ್ಕೆ ಕಾರಣವೇನು? ನಿನ್ನ ಮನಸ್ಸಿನಲ್ಲಿ ಏನೋ ಒಂದು ಮಹಾವ್ಯಸನವು ಬಾಧಿಸುತ್ತಿರುವಂತೆ ತೋರು ವುದು! ಯಾರಾದರೂ ಪ್ರಿಯಬಂಧುಗಳನ್ನಗಲಿದುದಕ್ಕಾಗಿ ಹೀಗೆ ದುಃಖಿಸು ತಿರುವೆಯಾ ? ನಾನು ಒಂದೇಕಾಲಿನಿಂದ ಹೀಗೆ ನಡೆಯುತ್ತಿರುವುದನ್ನು ನೋಡಿ ಈ ನನ್ನ ದುಸ್ಥಿತಿಗಾಗಿ ನೀನು ದೇಖಿಸುತ್ತಿರುವೆಯಾ ? ಅಥವಾ ಇನ್ನು ಮುಂದೆ ನೀನು ಶೂದ್ರಪ್ರಾಯರಾದ ಸಂಕರಜಾತಿಯವರ ಆಳ್ವಿಕೆ ಗೊಳಪಟ್ಟಿರಬೇಕಾಗುವುದೆಂದು ನಿನ್ನ ದುರವಸ್ಥೆಗಾಗಿಯೇ ನೀನು ಚಿಂತಿ ಸುತ್ತಿರುವೆಯಾ ? ಇಲ್ಲವೇ ಇನ್ನು ಮುಂದೆ ಕಲಿದೋಷದಿಂದ, ದೇವತೆಗಳಿಗೆ