ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೪ ಶ್ರೀಮದ್ಭಾಗವತವು [ಅಧ್ಯಾ, ೧೬ . ಕಾಲವೆಂಬುದು ಮಹಾಬಲಾಡ್ಯರಿಗಿಂತಲೂ ಬಲಾಡ್ಯವೆನಿಸಿರುವುದು ? ಸತ್ವ ಲೋಕಪ್ಪ ಹಣೀಯವಾಗಿ, ದೇವತೆಗಳಿಂದಲೂ ಗೌರವಿಸಲ್ಪಡತಕ್ಕ ನಿನ್ನೆ ಸೌಂದಯ್ಯಕ್ಕೆ ಕಾಲವಶದಿಂದಲೆ ಈ ವಿಧವಾದ ಕೊರತೆಯುಂಟಾಯಿತೇ ನು? ನನ್ನಲ್ಲಿ ಕೃಪೆಯಿಟ್ಟು ನಿನ್ನ ದುಃಖಕಾರಣವನ್ನು ತಿಳಿಸಬೇಕು ! ಯಾವ ದುರಾತ್ಮನಿಂದ ನಿನಗೆ ಈ ವ್ಯಸನವುಂಟಾಯಿತು?” ಎಂದನು. ಹೀಗೆ ಬಹಳ ನಿರ್ಬಂಧಿಸಿ ಪ್ರಶ್ನೆ ಮಾಡುತ್ತಿರುವ ಧಪುರುಷನನ್ನು ಕುರಿತು ಭೂದೇವಿಯು «« ಓ ಥರ ಪುರುಷಾ ! ನಿನಗೆ ತಿಳಿಯದ ಸಂಗತಿಯೇನಿರುವುದು ? ನನ್ನನ್ನು ನೀನು ಹೊಸದಾಗಿ ಕೇಳಬೇಕಾದುದೇನು ? ಎಲ್ಲವನ್ನೂ ನೀನೇಬಲ್ಲೆ ! ಮೊದಲು ನೀನು ಲೋಕಸುಖಾಸ್ಪದಗಳಾದ ಈ ನಿನ್ನ ನಾಲ್ಕು ಪಾದಗಳ ನ್ಯೂ ನೆಲದಲ್ಲಿಟ್ಟು ನಿರಾಯಾಸವಾಗಿ ಸಂಚರಿಸುತಿದ್ದವನಲ್ಲವೆ? ಈಗ ನೀನು, ಆಸ್ಥಿತಿಯನ್ನು ಬಿಟ್ಟು ಒಂದೇ ಕಾಲಿನಿಂದ ನಡೆಯುತ್ತಿರುವುದೇಕೆ ? ಯಾವ ಕಾರಣದಿಂದ ನಿನಗೆ ಈ ಸ್ಥಿತಿಯುಂಟಾಯಿತೋ, ಅದೇ ನನ್ನ ದುಃಖಕ್ಕೂ ಕಾರಣವಲ್ಲದೆ ಬೇರೆಯಲ್ಲ. ಇದಕ್ಕಿಂತಲೂ ನಮಗೆ . ಸಂಭವಿಸಬೇಕಾದ ಹೆಚ್ಚು ಕಷ್ಟವೇರುವುದು? ಯಾವ ಕೃಷ್ಣ ಪರಮಾತ್ಮನಲ್ಲಿ, ಸತ್ಯ,ಶುಚಿತ್ವ ದಯೆ, ತಾಳ್ಮೆ, ಪೂರ್ಣಕಾಮನಾದುದರಿಂದ ಆಶಾತ್ಯಾಗ, ನಿತ್ಯಸಂತೋಷ, ಕಪಟವಲ್ಲದ ಋಜುಸ್ವಭಾವ, ಮನಸ್ಸನ್ನೂ ಬಂದ್ರಿಯಗಳನ್ನೂ ತಡೆಯತಕ್ಕ ಶಕ್ತಿ, ಪ್ರಪಂಚ ಕಾರಾಲೋಚನೆ, ಹಸಿವು ಬಾಯಾರಿಕೆ ಮೊದ ಲಾದ ಬಾಧೆಗಳಿಲ್ಲದೆ ಸು ಬಾ ಸಮಸ್ಥಿತಿಯಿಂದಿರುವುದು, ಸುಖದುಃಖಾದಿ ದ್ವಂದ್ವಗಳಿಗೆ ಈಡಾಗದಿರುವುದು, ವ್ಯಕಾವ್ಯಗಳಲ್ಲಿ ವೈಮುಖ್ಯ, ಶಾಸ್ತ್ರ, ತ್ಯಜ್ಞಾನ, ವಿಷಯವೈರಾಗ್ಯ, ಆಶ್ರಿತರಕ್ಷಣೋಚಿತವಾದ ತಿಳುವಳಿಕೆ, ಸ ದ್ವಾಧಿಪತ್ಯ, ಶೌ, ತೇಜಸ್ಸು, ಬಲ, ಉಪಕಾರಸ್ಮರಣೆ, ಇತರಾಪೇಕ್ಷೆಯಿ ಲ್ಲದ ಸ್ವಾತಂತ್ರ, ಕಾರನೈಪುಣ್ಯ, ಮಹಾದ್ಭುತ ಕಾಂತಿ, ಧೈರ,ಮೃದುಸ್ವ ಭಾವ, ಪ್ರೌಢಿಮೆ, ದೊಡ್ಡವರಲ್ಲಿ ವಿನಯ, ಸುಶೀಲತೆ, ಕಷ್ಟಸಹಿಷ್ಟುತ್ವ ಅನ್ನಾ ದಿಗಳಿಂದುಂಟಾಗತಕ್ಕ ಶಕ್ತಿಧಾರಣಸಾಮರ್,ಜ್ಞಾನಾದ್ಯತಿಶಯ, ಗಾಂಭೀರಸ್ಟ್‌ ಗಳು,ಶಾಸ್ತಾರಗಳಲ್ಲಿ ನಂಬಿಕೆ, ಯಶಸ್ಸು,ಪೂಜಾರ್ಹತೆ, ಅಹಂಕಾರಮಮಕಾರಗಳಿಲ್ಲದಿರುವಿಕೆ, ಇವೇ ಮೊದಲಾಗಿ ಮಹತ್ತ್ವಕ್ಕೆ ಕಾರ