ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೧೬. | ಪ್ರಥಮಸ್ಕಂಧವು, ೧೮೫ ಇಗಳಾದ ಇನ್ನೂ ಅನೇಕಮಹಾಗುಣಗಳು ಯಾವನಲ್ಲಿ ಕ್ಷಣಮಾತ್ರವೂ ಆಗ ಲದೆ ಸತ್ಯವಾಗಿ ನೆಲೆಗೊಂಡಿದ್ದು ವೋ, ಲಕ್ಷ್ಮಿ ನಿವಾಸನಾದ ಆ ಶ್ರೀಕೃಷ್ಣ ಮೂರ್ತಿಯು, ಈಗ ನನ್ನ ಮೈ ಬಿಟ್ಟು ಆಗಲಿಹೋದನು.ಇದೇ ಸಮಯವನ್ನು ನಿರೀಕ್ಷಿಸುತ್ತಿದ್ದ ಕಲಿಯೂ ಈ ಲೋಕದಲ್ಲಿ ಕಾಲಿಟ್ಟನು. ಲೋಕವೆಲ್ಲವೂ ಆ ಕ ಲಿಯಿಂದ ಪ್ರೇರಿತವಾಗಿಕೇವಲ ಪಾಪಪ್ರಚುರವಾಗಿರುವುದು. ನಮ್ಮ ಪುರುಷಾ! ಈಸ್ಥಿತಿಯನ್ನು ನೋಡಿ ನಾನು ಹೇಗೆ ತಾನೇ ಸಹಿಸಲಿ!ಮುಖ್ಯವಾಗಿ ಆ ಶ್ರೀ ಕೃಷ್ಣಯೋಗವೇ ನನ್ನ ದುಃಖಕ್ಕೆ ಮೂಲಕಾರಣವು. ಈ ಅನರಗಳೆಲ್ಲಕ್ಕೂ ಅದೇ ಮಲವು: ಎಲೈ ಭದ್ರತೆ! ನನ್ನೊಬ್ಬಳಿಗಾಗಿಮಾತ್ರವೇ ನಾನು ದುಃ ವಿಸುವೆನೆಂದಣಿಸಬೇಡ! ಮುಂದೆಮುಂದೆ ಕಲಿಯೋಪದಿಂದ ನನಗಾಗಿ,ನಿನ ಗಾಗಲಿ, ದೇವತೆಗಳಿಗಾಗಲಿ,ಪಿತೃಗಳಿಗಾಗಲಿ, ಮಹರ್ಷಿಗಳಿಗಾಗಲಿ ಇತರ ಸಾ ಧುಜನರಿಗಾಗಲಿ, ವರ್ಣಾಶ್ರಮಧುನಿರತರಿಗಾಗಲಿ,ಯಾರಿಗೂಕ ವ್ಯವು ತ ಪ್ಪಿದುದಲ್ಲ! ಈ ನಮ್ಮೆಲ್ಲರ ಸ್ಥಿತಿಗಾಗಿಯೇ ನಾನು ಬಹಳವಾಗಿ ಕೊರಗುತ್ತಿರು ವೆನು!ಎಲೈ ಮಹಾತ್ಮನೆ!ಇನ್ನು ಹೆಚ್ಚಾಗಿ ಹೇಳಿದುದರಿಂದೇನು?ಬ್ರಹ್ಮಾದಿದೇ ವತೆಗಳೂಕೊಡ. ಯಾವ ಮಹಾಪುರುಷನ ಕೃಪಾಕಟಾಕ್ಷಕ್ಕೆ ಪಾತ್ರರಾಗುವು ದಕ್ಕಾಗಿ, ದೀರ್ಘತಪಸ್ಸನ್ನು ನಡೆಸಿರುವರೋ, ಶ್ರೀಮಹಾಲಕ್ಷ್ಮಿಯು ತನಗೆ ನಿ ವಾಸಸ್ಥಳವಾದ ಕಮಲವನದಲ್ಲಿಯೂ ಆಸೆಯನ್ನು ಬಿಟ್ಟು ಯಾವಭಗವಂತನ ಮಾದಕ ಮಲಗಳನ್ನು ಸಮಾನರಾಗದಿಂದ ಹಿಡಿದು ಸೇವಿಸುತ್ತಿರುವ, ಅಂತಹ ಶ್ರೀಕೃಷ್ಣನು,ಧ್ವಜಕಮಲವಬಾಂಕುಶಾದಿ ಶುಭರೇಖೆಗಳಿಂದ ಕೂ ಡಿದ ತನ್ನ ಪಾದಗಳನ್ನೋತಿ ನನ್ನ ನ್ನ ಲಂಕರಿಸುತ್ತಿದ್ದನು. ಇದುವರೆಗೆ ಆ ಮ ಹಾಭಾಗ್ಯವು ನನಗಿದ್ದುದರಿಂದ ಮೂರುಲೋಕಕ್ಕೂ ನಾನೇ ಮೇಲೆಂಬ ಹೆಮ್ಮೆಯಿಂದಿದ್ದನು. ಆ ಭಗವಂತನು ಈಗ ನಮ್ಮನ್ನಗಲಿಹೋದುದರಿಂದ ಆ ನನ್ನ ಹೆಮ್ಮೆಯೆಲ್ಲವೂ ಆಡಗಿಹೋಯಿತು. ಎಲೆ ಮಹಾತ್ಮ ! ಯಾವನು ಯದುವಂಶದಲ್ಲಿ ಹುಟ್ಟಿ, ದುಷ್ಟ ಕ್ಷತ್ರಿಯರನ್ನಡಗಿಸಿ, ನನ್ನ ಭಾರವನ್ನಿಳಿಸಿದ ನೋ,ಯಾವನು ಎರಡೇಕಾಲುಗಳಲ್ಲಿ ನಿಂತಿದ್ದ ನನ್ನನ್ನು ಇದುವರೆಗೆ ನಾಲ್ಕು ಕಾಲುಗಳಿಂದ ನಡೆಸುತ್ತಿದ್ದನೋ, ಅಂತಹ ಮಹಾನುಭಾವನಾದ ಶ್ರೀಕೃಷ್ಣ ನು, ಈಗ ನಮ್ಮನ್ನಗಲಿ ಹೋದುದಕ್ಕಾಗಿ ನಾನು ಬಹಳವಾಗಿ ವಿಲಪಿಸು