ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೬ ಶ್ರೀಮದ್ಭಾಗವತವು [ಅಧ್ಯಾ. ೧೬. ತಿರುವೆನು. ಓ ಧರಪುರುಷಾ! (ಆ ವಿಧವಾದ ಪ್ರೇಮವೂ, ಆದಯಾರಸವೂ ಆ ಮಂದಹಾಸವೂ, ಆ ಮನೋಹರಗಮನವೂ, ಆ ಮೃದುವಾಕ್ಯವೂ,ಶ್ರೀ ಕೃಷ್ಣಮೂರ್ತಿಗೊಬ್ಬನಿಗೆಹೊರತು ಬೇರೊಬ್ಬರಿಗುಂಟೆ ? ಅಂತಹ ಶ್ರೀಕೃ ಹ್ಮನ ವಿಯೋಗವನ್ನು ಜಿತೇಂದ್ರಿಯರಾದ ಯೋಗಿಗಳೇ ಸಹಿಸಲಾರರು! ಇ ನ್ನು ನಮ್ಮಂತವರ ಪಾಡೇನು?) ಪುರುಷೋತ್ತಮನಾದ ಯಾವನ ಪ್ರೇಮ ಪೂರಕವಾದ ನೋಟವೂ, ಸುಂದರವಾದ ಮಂದಹಾಸವೂ,ಇಂಪಾದ ನು ಡಿಗಳೂ, 'ಯಾದವಸಿಯರ ಮನೋಧ್ಯೆಶ್ಯವನ್ನು ಕದಲಿಸಿತೋ ಅಂತಹ ಕೃಷ್ಣನ ವಿರಹವನ್ನು ಯಾರುತಾನೇ ಸಹಿಸಬಲ್ಲರು? ಮತ್ತು ಆ ಶ್ರೀ* ಹೈನು ನನ್ನ ಮೇಲೆ ಕಾಲೂರಿ ನಡೆಯುತಿದ್ದ ವರೆಗೂ ನಾನು ಅವನಪಾದಸ್ಪ ರ್ಶದಿಂದ ರೋಮಾಂಚಿತೆಯಾದಂತೆ ಸಮಸ್ತ ಸಸ್ಯಸಮೃದ್ಧಿಯಿಂದ ಶೋ ಭಿಸುತಿದ್ದೆನು. ಇನ್ನು ನನಗೆ ಆ ಭಾಗ್ಯವೆಲ್ಲಿ?” ಎಂದಳು. ಹೀಗೆ ಪ್ರಭಾಸ ತೀರದಲ್ಲಿ ಭೂದೇವಿಯೂ,ಧರಪುರುಷನೂ ಸಂಭಾಷಿಸುತಿದ್ದ ಕಾಲದಲ್ಲಿಯೇ ರಾಜರ್ಷಿಯಾದ ಪರೀಕ್ಷಿನ್ಮಹಾರಾಜನು ಅಲ್ಲಿಗೆ ಆಕಸ್ಮಾತ್ತಾಗಿ ಬಂದುಸೇರಿ ದನು. ಇದು ಹದಿನಾರನೆಯ ಅಧ್ಯಾಯವು. w+ ಕಲಿಪುರುಷನು ಧರ ದೇವತೆಯನ್ನು ಕಾಲಿಂದೊದೆದುದು. •w ಪರೀಕ್ಷಿದ್ರಾಜನು ಅಲ್ಲಿಗೆ ಬಂದು ಸೇರುವ ಸಮಯಕ್ಕೆ ಸರಿಯಾಗಿ, ಅಲ್ಲಿ ರಾಜಚಿಹ್ನವುಳ್ಳ ಶೂದ್ರನೊಬ್ಬನು ಕೈಯಲ್ಲಿ ದಂಡಧಾರಿಯಾಗಿ ನಿಂತಿ ರುವುದನ್ನೂ ,ಎರಡು ಗೋವುಗಳು ಅವನ ಪ್ರಹಾರಕ್ಕೆ ಸಿಕ್ಕಿ,ದಿಕ್ಕಿಲ್ಲದೆ ಗೋ ಆಡುತ್ತಿರುವುದನ್ನೂ ಕಂಡನು. ತಾವರೆಯ ದಂಟಿನಂತೆ ಶುಭವಾ ದ ದೇಹಕಾಂತಿಯುಳ್ಳ ವೃಷಭವು, ಆಶೂದ್ರನ ಪ್ರಹಾರದಿಂದ ಬಹಳವಾಗಿ ನೊಂದು, ಒಂದೇ ಕಾಲಿನಲ್ಲಿ ನಿಂತು ಮೂತ್ರಸ್ರಾವವಾಗುವಂತೆ ಭಯದಿಂ ದ ನಡುಗುತಿದ್ದರು. ಕರುವಿಲ್ಲದೆ ಏಕಾಕಿಯಾಗಿದ್ದ ಆ ಧೇನುವನ್ನೂ ಕೂಡ, ಆ ಶೂದ್ರನು ತನ್ನ ಎಡಗಾಲಿನಿಂದ ಬಾರಿಬಾರಿಗೂ ಒದೆಯುತ್ತಿರಲು, ಅದು ದೈನ್ಯದಿಂದ ಕಣ್ಣೀರುಬಿಡುತ್ತ, ಹಸಿವಿನಿಂದಲೂ ಬಹಳ ಬಳಲಿ ಕೃತವಾಗಿ