ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೧೭) ಪ್ರಥಮಸ್ಕಂಧವು. ೧೮೭ ಕೂಗಿಡುತಿತ್ತು. ಇದನ್ನು ನೋಡಿ ಪರೀಕ್ಷಿದ್ರಾಜನು ಸುವರ್ಣಾಲಂಕೃತವಾದ ರಥದಲ್ಲಿ ಕುಳಿತಿದ್ದ ಹಾಗೆಯೇ ಮುಂದೆ ಬಂದು, ತನ್ನ ಧನುಸ್ಸಿಗೆ ನಾಣೇರಿಸಿ ಹಿಡಿದು, ಮೇವುದಂತೆ ಗಂಭೀರಧ್ವನಿಯಿಂದ ಹೀಗೆಂದು ಹೇಳ ವನು ಏನೆಲೋ ದುರಾತ್ಮಾ! ಕ್ಷರಾ! ಯಾರು ನೀನು? ಈಸಮಸ್ತಲೋ ಕವೂ ನನ್ನ ರಕ್ಷಣೆಗೊಳಪಟ್ಟಿರುವುದನ್ನು ಕಾಣೆಯಾ ? ದೇಹಬಲವಿರುವು ದೆಂಬ ಕೊಬ್ಬಿನಿಂದ ದುರ್ಬಲಪ್ರಾಣಿಗಳನ್ನು ಬಲಾತ್ಕಾರದಿಂದ ಹಿಂಸಿಸುವೆ ಯಾ ? ವೇಷದಲ್ಲಿ ಮಾತ್ರ ರಾಜನಂತೆ ಕಾಣುತ್ತಿರುವೆ? ಈ ನಿನ್ನ ಕೃತ್ಯವನ್ನು ನೋಡಿದರೆ ಶೂದ್ರ ಜಾತಿಯವನೆಂದೆಣಿಸಬೇಕಾಗಿದೆ. ಎಲೆಲ, ದುರಾತಾ! ಆ ಶ್ರೀಕೃಷ್ಣನು ಅರ್ಜುನಸಮೇತನಾಗಿ ಈ ಭೂಮಿಯನ್ನು ಬಿಟ್ಟು ಹೋ ದುದರಿಂದ, ನೀನು ಮದೋನ್ಮತ್ತನಾಗಿ, ನಿರಪರಾಧಿಗಳಾದ ಈ ಸಾಧುಜಂ ತುಗಳನ್ನು ಪೀಡಿಸಲಾರಂಭಿಸಿದೆಯಾ? ನಿಷ್ಕಾರಣವಾಗಿ ಹೀಗೆ ಸಾಧುಪ್ರಾ ಣಿಗಳನ್ನು ಪೀಡಿಸಿದ ನಿನಗೆ, ನನ್ನ ಕೈಯಿಂದ ಮರಣದಂಡನವಲ್ಲದೆ ಬೇರೆ ಪ್ರಾಯಶ್ಚಿತ್ತವಿಲ್ಲ!” ಎಂದು ಹೇಳಿ, ಆಮೇಲೆ ಆ ವೃಷಭವನ್ನು ನೋಡಿ ( ಎಲೈ ವೃಷಭರಾಜನೆ ? ತಾವರೆದಂಟಿನಂತೆ ಶುಭದೇಹವುಳ್ಳ ನೀನು ಯಾರು ? ನಿನ್ನ ನಾಲ್ಕು ಕಾಲುಗಳಲ್ಲಿ ಒಂದೇ ಕಾಲನ್ನು ನೆಲದ ಮೇಲೂರಿ ನಿಂತಿರುವುದಕ್ಕೆ ಕಾರಣವೇನು? ನೀನು ಈ ವೃಷಭರೂಪದಿಂದಸಂಚರಿಸುವ ಯಾವನೋ ಒಬ್ಬ ದೇವಾಂಶಪುರುಷನೆಂದೇ ನನಗೆ ತೋರುವುದು. ಈ ನಿನ್ನ ಮುರ್ದೆಯನ್ನು ನೋಡಿ ನನಗೆ ಬಹಳ ವ್ಯಸನವುಂಟಾಗುತ್ತಿರುವುದು. ಕುರುವಂಶರಾಜರಾದ ನಮ್ಮಿಂದ ಈಭೂಮಿಯು ರಕ್ಷಿಸಲ್ಪಡುತ್ತಿರುವಾಗ, ದುವರೆಗೆ ಒಂದುಪ್ರಾಣಿಯಾದರೂ ಇತರರಬಾಧೆಯಿಂದ ಕಣ್ಣೀರುಬಿಟ್ಟು ಲ್ಲ. ಇಂತಹ ಸ್ಥಿತಿಯಲ್ಲಿಯೂ ನಿನ್ನ ಕಣ್ಣುಗಳಲ್ಲಿ ದುಃಖಬಾಷ್ಟ್ರವು ಬಿಳುವು ದುಂಟೆ? ಎಲೈ ವೃಷಭವೇ! ಈಗಲೂ ಚಿಂತೆಯಿಲ್ಲ!ನೀನು ಎಷ್ಟು ಮಾತ್ರವೂ ಭಯಪಡಬೇಕಾದುದಿಲ್ಲ! ಇದೋ ! ಈಗಲೇ ನಾನು ದುರಾತ್ಮನಾದ ಈ ಶೂದ್ರನನ್ನು ನನ್ನ ತೀಕ್ಷಬಾಣಗಳಿಂದ ಭೇದಿಸಿ, ಇನ್ನು ಮೇಲೆ ನಿನ್ನ ನ್ನು ಈ ಭೂಮಿಯಲ್ಲಿ ನಾಲ್ಕು ಕಾಲುಗಳಿಂದಲೇ ನಡೆಯುವಂತೆ ಮಾಡುವೆನು ನೋಡು! ದುಷ್ಟರನ್ನಡಗಿಸುವುದಕ್ಕಾಗಿಯೇ ಕಂಕಣವನ್ನು ಕಟ್ಟಿ ನಿಂತಿರು