ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೮, ಶ್ರೀಮತ್ಸಾಗವತವು [ಅಧ್ಯಾ. ೧೭. ವ ನಾನಿರುವಾಗ, ನೀನು ಕಣ್ಣೀರುಬಿಟ್ಟು ದುಃಖಿಸುವುದೇಕೆ? ಎಲೈ ಧೇನು ವೆ! ಇನ್ನು ಮೇಲೆ ನೀನೂ ನಿನ್ನ ದುಃಖವನ್ನು ಬಿಟ್ಟುಬಿಡು ! ಯಾವ ರಾಜನು ತನ್ನ ರಾಜ್ಯದಲ್ಲಿ ಪ್ರಜೆಗಳು ದುಷ್ಯರಿಂದ ಬಾದಿಸಲ್ಪಡುವುದನ್ನು ತಿಳಿಯದೆ ಮದೋನ್ಮತ್ತನಾಗಿ ಸುಮ್ಮನಿರುವನೋ, ಆ ರಾಜನ ಆಯುಸ್ಸು, ಕೀರ್ತಿ ರಾಜ್ಯಲಕ್ಷ್ಮಿ , ಇವೆಲ್ಲವೂ ಕ್ಷಣಕ್ಷಣಕ್ಕೂ ಕ್ಷೀಣಿಸಿಹೋಗುವುವು. ಸಜ್ಜನರಿಗೆ ದುರ್ಜನರಿಂದುಂಟಾಗುವ ಬಾಧೆಯನ್ನು ತಪ್ಪಿಸುವುದೇ ನಮ್ಮಂತಹ ರಾಜರಿಗೆ ಮುಖ್ಯವಾದ ಧರವು. ಆ ಕಾರವನ್ನು ನಡೆಸದಿದ್ದಮೇಲೆ ನಮ್ಮ ಜವ್ಯವೇ ಕೆ ? ಆದುದರಿಂದ ಎಲೆ ದೇವಿ! ಈ ದುರಾತ್ಮನನ್ನು ಈಗಲೇ ನಾನು ನಿಗ್ರ ಹಿಸಿ, ನನ್ನ ಕ್ಷತ್ರಿಯಜನ್ಮವನ್ನು ಸಾರ್ಥಕಪಡಿಸುವೆನು. ಎಲೈ ವೃಷಬೇಂ ದ್ರನೆ! ಯಾವ ದುರಾತ್ಮನು ಈ ನಿನ್ನ ಮರುಪಾದಗಳನ್ನು ಕಟ್ಟಿರುವನೋ ಅದನ್ನು ಮೊದಲು ನನಗೆ ಹೇಳು ! ಆಹಾ ! ವಿಷ್ಣು ಭಕ್ತರಾದ ನಮ್ಮಂತಹ ರಾಜರ ಆಳ್ವಿಕೆಯಲ್ಲಿ, ನಿಮ್ಮಂತಹ ಸಾಧುಗಳು ಹೀಗೆ ದುಃಖಿಸುವುದೆಂದರೇ ನ? ಇನ್ನು ನಿನಗೆ ಶುಭವಾಗಲಿ ! ನಿನಗೆ ಈ ಕಷ್ಟವನ್ನುಂಟುಮಾಡಿದವನು ಪಾಂಡವರ ಕೀರ್ತಿಯನ್ನೇ ಕೆಡಿಸುವುದಾಗಿ ಪ್ರಯತ್ನಿಸಿರುವನೆಂದು ದೆಳ ಬೇಕಲ್ಲದೆ ಬೇರೆಯಲ್ಲ! ಆ ದುರಾತ್ಮನಾರೆಂt Jದನ್ನು ನೀವು ತಿಳಿಸಿದರೆ, ಈಗ ಲೇ ನಾನು ಅವನನ್ನು ಕೊಂದು ಬರುವೆನು. ನಿರಪರಾಧಿಗಳನ್ನು ಬಾಧಿಸುವ ವನಿಗೆ ನನ್ನಿಂದ ಭಯವು ತಪ್ಪದು. ಅಂತವನು ದೇವೇಂದ್ರನಾಗಿದ್ದರೂ ನಾನು ಆತನ ಭುಜಗಳನ್ನು ತೊಳ್ಳೆಗಳೊಡನೆಯೇ ಕತ್ತರಿಸದೆ ಬಿಡುವವ ನಲ್ಲ! ಈ ವಿಧದಿಂದ ಧರಸ್ಥಾಪನವನ್ನು ಮಾಡುವುದೇ ನಮ್ಮಂತಹ ರಾಜರಿ ಗೆ ಕುಲಧವು. ದುಷ್ಟರನ್ನು ನಿಗ್ರಹಿಸುವುದು, ದುಃಖಿತರನ್ನು ಕಾಪಾ ಡುವುದು, ಇವೆರಡೇ ನಮ್ಮಂತಹ ರಾಜರಿಗೆ ಮುಖ್ಯ ಕರ್ತವ್ಯಗಳು”ಎಂದನು. ಅದಕ್ಕಾ ವೃಷಭರಾಜನು ಪರೀಕ್ಷಿತನ್ನು ನೋಡಿ ಎಲೈ ಮಹಾರಾಜನೆ ! ಪಾಂಡವಕುಲದಲ್ಲಿ ಹುಟ್ಟಿದ ನಿಮ್ಮಂತವರಿಗೆ ಹೀಗೆ ದುಃಖಿತರನ್ನು ನೋಡಿ ಅಭಯಪ್ರದಾನವನ್ನು ಮಾಡುವುದು ಸಹಜವಾಗಿಯೇ ಇರುವುದು ! ಈ ಗುಣಗಳನ್ನು ನೋಡಿಯೇ ಅಲ್ಲವೇ ಭಗವಂತನಾದ ಶ್ರೀಕೃಷ್ಣನೂಕೂಡ