ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪o * ಶ್ರೀಮದ್ಭಾಗವತವು (ಅಧ್ಯಾ, ೧೬. ರಣರಾರೆಂಬುದನ್ನು ತಿಳಿಸದೆ ಮರೆಸಿಟ್ಟಿರುವೆ ! ಓ ಮಹಾತ್ಮಾ ! ನಿನ್ನ ಅಭಿ ಪ್ರಾಯವೇನೆಂಬುದು ನನಗೆ ಚೆನ್ನಾಗಿ ತಿಳಿಯಿತು. ಮಾಡಿದವರ ಪಾಪವು ಆಡಿದವರ ಬಾಯಲ್ಲಿ” ಎಂಬ ನಾಣ್ಣುಡಿಯಂತೆ, ಅಧರವನ್ನು ನಡೆಸಿದವನು ಸಮೀಪದಲ್ಲಿದ್ದರೂ, ಅವನನ್ನು ನಿರ್ದೇಶಿಸಿ, ಅವನ ಪಾಪಕಾರವನ್ನು ಬಾ ಯಿಂದ ನಿರೂಪಿಸಿ ಹೇಳಿದಪಕ್ಷದಲ್ಲಿ,ಧದ್ಮಶೀಲರಿದ್ರೂ ಕೂಡ ಆ ಪಾಪವು ಬಂ ದು ತಗುಲುವುದು. ಈ ಥರಸೂಕ್ಷವನ್ನು ನೀನು ಬಲ್ಲವನಾದುದರಿಂದಲೇ ಅದರ ಕಾರಣವನ್ನು ತಿಳಿದರೂ ಬಾಯಿಂದ ಹೇಳದೆ ಮರೆಸಿಟ್ಟಿರುವೆ. ಇದಲ್ಲ ದೆ ಪ್ರಾಣಿಗಳಿಗೆ ಭಗವತ್ಸಂಕಲ್ಪವು ಹೇಗೆಂಬುದನ್ನು ಮನಸ್ಸಿನಿಂದಾಗಲಿ, ಮಾತಿನಿಂದಾಗಿ ನಿರ್ಧರಿಸುವುದಕ್ಕೆ ಸಾಧ್ಯವಲ್ಲ! ಆದುದರಿಂದ ನಿನ್ನ ಮಾತು ಗಳನ್ನು ನೋಡಿದರೆ ಮತ್ತೊಬ್ಬನನ್ನು ಕುರಿತು, ಈತನೇ ಆಧರಕಾರಿಯೆಂ ದು ನಿರೂಪಿಸಿ ಹೇಳುವುದೇ ಆಧರವೆಂದೂ ವ್ಯಕ್ತವಾಗುವುದು. ವೃಷಭರೂ ಪಹಿಂದಿರುವ ಧಮ್ಮ ಪುರುಷನೇ ನೀನೆಂಬುದರಲ್ಲಿ ಏನೇನೂ ಸಂದೇಹವಿಲ್ಲ. ನಿನ ಗೆ ತಪಸ್ಸು, ಶೌಚ, ದಯೆ, ಸತ್ಯ, ಎಂಬಿವು ನಾಲ್ಲೂ ನಾಲ್ಕು ಪಾದಗಳಾ ಗಿರುವುವು. ಇವುಗಳಲ್ಲಿ ಮೊದಲನೆಯ ಮೂರುಪಾದಗಳೂ ಕ್ರಮವಾಗಿ ಈಗಿನ ಕಾಲದೋಷದಿಂದ ಶಕ್ತಿಗುಂದಿರುವುವು. ಹೆಮ್ಮೆಯಿಂದ ತಪಸ್ಕೂ, ದುಸ್ಸಂಗದಿಂದ ಶುಚಿತ್ವವೂ, ಮದದಿಂದ ದಯೆಯೂ ಕ್ರಮಕ್ರಮವಾಗಿ ಕುಂದುತ್ತ ಬರುವುದು ಸಹಜವು, ಆಧಾಂಗಗಳಾದ ಈ ಮೂರುದೋಷಗ ಳಿಂದ ಸತ್ಯಾದಿರೂಪಗಳಾದ ನಿನ್ನ ಮೂರುಪಾದಗಳಿಗೂ ಭಂಗವುಂಟಾಗಿರು ವುದು. ಎಲೈ ಢರಪುರುಷನೆ ! ಈಗ ನೀನು ಸತ್ಯವೆಂಬ ಒಂದೇ ಕಾಲಿನಿಂದ ನಿಂತಿರುವೆ ! ಅಧರಸ್ವರೂಪನಾದ ಕಲಿಪುರುಷನು ಲೋಕದಲ್ಲಿ ಅಮೃತ ವನ್ನು ಹೆಚ್ಚಿಸಿ, ಈ ನಿನ್ನ ಒಂದು ಪಾದವನ್ನು ಮುರಿದುಬಿಡಬೇಕೆಂದು ಪ್ರಯತ್ನಿಸುತ್ತಿರುವನು. ಗೋರೂಪವನ್ನು ಧರಿಸಿರುವ ಈ ಭೂದೇವಿಯೂ ಕೂಡ, ಇದುವರೆಗೆ ಭೂಭಾರೊತ್ಸಾರಣಾರವಾಗಿ ಅವತರಿಸಿದ್ದ ದಯಾ ಳುವಾದ ಆ ಭಗವಂತನ ಶುಭಲಕ್ಷಣವಿಶಿಷಗಳಾದ ಪಾದಗಳ ಸಂಬಂಧ ದಿಂದ ಸಂತೋಷಗೊಂಡಿದ್ದಳು. ಆ ಶ್ರೀಕೃಷ್ಣನೂ ಈಗ ತನ್ನನ್ನು ಬಿಟ್ಟು ಹೋದುದರಿಂದ ಪರಮಸಾದ್ವೀಮಣಿಯಾದ ಈಕೆಯು ಭಾಗ್ಯಹೀನಯಾಗಿ