ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಥ್ಯಾ. ೧೩. ) ಪ್ರಥಮಸ್ಕಂಧವು. ೧೯೧ ದಿಕ್ಕಿಲ್ಲದವಳಂತೆ ದುಃಖದಿಂದ ಕಣ್ಣೀರುಬಿಟ್ಟು ವಿಲಪಿಸುತ್ತಿರುವಳು. ಇನ್ನು ಮೇಲೆ ತಾನು, ಬ್ರಾಹ್ಮಣಕುಲಕ್ಕೆ ವಿರೋಧಿಗಳಾಗಿ,ವ್ಯಾಜಮಾತ್ರಕ್ಕೆ ರಾಜ ರೆನೆಸಿಕೊಂಡ ಶೂದ್ರರ ಕೈಯಲ್ಲಿ ಸಿಕ್ಕಿಬಿದ್ದು, ಅವರಿಗೆ ಭೋಗ್ಯಳಾಗಿರಬೇಕಾ ದ ಸಂಭವವುಂಟಾಗುವುದೆಂದು ಈಕೆಯು ಬಹಳವಾಗಿ ಕೊರಗುವಂತಿದೆ !” ಎಂದನು. ಹೀಗೆ ಪರೀಕ್ಷಿದ್ರಾಜನು ಧರಪುರುಷನನ್ನೂ, ಭೂದೇವಿಯನ್ನೂ ಸಾಂತ್ವವಾಕ್ಯಗಳಿಂದ ಸಮಾಧಾನ ಪಡಿಸಿ, ಇವರ ಕಷ್ಟಕ್ಕೆ ಕಾರಣಭೂತ ನಾದ ಕಲಿಪುರುಷನನ್ನು ಅಕ್ಷಣವೇ ಕೊಂದುಬಿಡಬೇಕೆಂದೂ ನಿಶ್ಚಯಿಸಿ, ತನ್ನ ತೀಕ್ಷವಾದ ಖಡ್ಗವನ್ನು ಒರೆಯಿಂದ ಕಿತ್ತು ಕೈಗೆತ್ತಿಕೊಂಡನು. ಆಗ ಕಲಿಪುರುಷನು ತನ್ನನ್ನು ಕೊಲ್ಲುವದಕ್ಕಾಗಿ ಕತ್ತಿಯನ್ನೆಳೆದು ನಿಂತಿರುವ ಪರೀ ಕ್ಷಿದ್ರಾಜನನ್ನು ನೋಡಿ, ಭಯದಿಂದ ನಡುಗುತ್ತ, ತಾನು ಧರಿಸಿದ್ದ ರಾಜವೇಷ ವನ್ನು ಆಕ್ಷಣವೇ ತೆಗೆದು ಬಿಸುಟು, ಆ ರಾಜನ ಪಾದಗಳಲ್ಲಿ ಬಿದ್ದು ನಮಸ್ತ ರಿಸಿ, ಶರಣಾಗತಿಯನ್ನು ಮಾಡಿದನು. ಆಗ ದೀವವತ್ಸಲನಾದ ಪರೀಕ್ಷಿದ್ರಾ ಜನು, ಕಾಲಮೇಲೆ ಬಿದ್ದು ಶರಣಾಗತನಾಗಿ ರಕ್ಷಣೆಯನ್ನು ಬೇಡುತ್ತಿರುವ ಕಲಿಪುರುಷನನ್ನು ನೋಡಿ, ಅವನಲ್ಲಿ ಮರುಕಗೊಂಡು, ಅವನನ್ನು ಕೊಲ್ಲು ವುದಕ್ಕಿಷ್ಟವಿಲ್ಲದೆ, ಮಂದಹಾಸಪೂರೈಕವಾಗಿ ಹೇಳುವನು. 'ಎಲೈ ! ಇನ್ನು ನೀನು ಭಯಪಡಬೇಡ ! ನನ್ನ ಪಿತಾಮಹನಾದ ಅರ್ಜುನನ ಕೀರ್ತಿ ಯನ್ನು ಮುಂದಕ್ಕೆ ತರಬೇಕೆಂಬುದೇ ಆ ವಂಶಜರಾದ ನಮ್ಮ ಮುಖ್ಯಕೃತ್ಯ ವಾದುದರಿಂದ, ಕೈಜೋಡಿಸಿ ನಿಂತವರನ್ನು ನಾವು ಕೊಲ್ಲಲಾರೆವು. ಆದರೆ, ನೀನು ಕೇವಲಪಾಪಪ್ರಿಯನು. ಆದುದರಿಂದ ಇನ್ನು ಮೇಲೆ ನೀನು ನನ್ನ ಆಳ್ವಿಕೆಗೊಳಪಟ್ಟ ದೇಶಗಳಲ್ಲಿಮಾತ್ರ ಕಾಲಿಡಕೂಡದು. ಈ ಕ್ಷಣವೆ ನೀನು ಈ ಸ್ಥಳವನ್ನು ಬಿಟ್ಟು ಬೇರೆಲ್ಲಿಗಾದರೂ ಹೋಗಬೇಕು ! ನೀನು ರಾಜರ ದೇಹದಲ್ಲಿ ವರ್ತಿಸುವಾಗ, ನಿನ್ನನ್ನನುಸರಿಸಿಯೇ ಅವರಲ್ಲಿ ಆಧರಗಳೆ ಲ್ಲವೂ ಕಾಲೂರಿ ನಿಲ್ಲವುವು. ಅಂತವರಲ್ಲಿ ಲೋಭವೂ, ಅಸತ್ಯವೂ, ಚೌರವೂ, ಹೆಮ್ಮೆಯೂ, ದುಗ್ಧಭಾವವೂ, ದುರಾಚಾರವೂ, ರಾಗದ್ವೇಷಾದಿಗಳಿಂದ ಹು “ವ ಕಲಹವೂ, ವಂಚನೆಯೂ, ಮೇಲೆಮೇಲೆ ತಲೆಯೆತ್ತುತ್ತಿರುವುವು. ಈ