ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೨ ಶ್ರೀಮದ್ಭಾಗವತವು [ಅಧ್ಯಾ ೧೭. ನಮ್ಮ *ಬ್ರಹ್ಮಾವರ್ತವೆಂಬ ಕ್ಷೇತ್ರವಾದರೂ ಇದುವರೆಗೆ ಸರ್ವಧರಗಳಿ ಗೂ ನೆಲೆಯೆನಿಸಿಕೊಂಡಿರುವುದು. ಮತ್ತು ಈ ದೇಶದಲ್ಲಿ ಯಜ್ಞಾನುಷ್ಠಾನ ಪರರಾದ ಮಹರ್ಷಿಗಳು ಯಳ್ಳೇಶ್ವರನಾದ ಭಗವಂತನನ್ನು ಅನವರತವೂ ಯಜ್ಞಗಳಿಂದಾರಾಧಿಸುತ್ತಿರುವರು. ಇಲ್ಲಿ ಶ್ರೀ ಶ್ರೀ ಹರಿಯು, ಯಜ್ಞಾರಾಧ್ಯ ರಾದ ಇಂದ್ರಾದಿದೇವತೆಗಳ ಶರೀರದಲ್ಲಿ ತಾನೇ ಪ್ರವೇಶಿಸಿದ್ದು, ಅವರವರ ಯಜ್ಞಕಾರಗಳಿಂದ ಪ್ರಸನ್ನ ನಾಗಿ ಕೋರಿಕೆಗಳನ್ನು ಕೈಗೂಡಿಸುತ್ತಿರುವನು. ಅವರೆಲ್ಲರಿಗೂ ಸರೂವಿಧದಲ್ಲಿಯೂ ಕ್ಷೇಮವನ್ನು ಅದುಮಾಡುತ್ತಿರುವನು. ಮು ಖ್ಯವಾಗಿ ಆ ಭಗವಂತನು ಸ್ಥಾವರಜಂಗಮಾತ್ಮಕಗಳಾದ ಸಮಸ್ಯಪ್ರವಂಚ ದ ಒಳಗೂ, ಹೊರಗೂ ತಾನೊಬ್ಬನೇ ವಾಯುವಿನಂತೆ ವ್ಯಾಇಸಿ, ತಾನೇ ಅವು ಗಳಿಗೆ ಆಧಾರನಾಗಿಯೂ, ನಿಯಾಮಕನಾಗಿಯೂ ಇರುವನು. ಆದುದರಿಂದ ಇಂತಹ ಪುಣ್ಯಕ್ಷೇತ್ರದಲ್ಲಿ ನೀನು 'ಕ್ಷಣಮಾತ್ರವೂ ಕಾಲಿಟ್ಟು ನಿಲ್ಲಕೊಡ ದು.” ಎಂದನು. ಹೀಗೆ ಪರೀಕ್ಷಿದ್ರಾಜನು ನಿಯಮಿಸಿದೊಡನೆ, ಕಲಿಯು, ದಂ ಡಪಾಣಿಯಾದ ಯಮನಂತೆ ತನ್ನ ಮುಂದೆ ಖಡ್ಗಧಾರಿಯಾಗಿ ನಿಂತಿದ್ದ ಆ ರಾಜನನ್ನು ನೋಡಿ ಭಯದಿಂದ ನಡುಗುತ್ತ ವಿಜ್ಞಾಪಿಸುವನು. 'ಎಲೈ ರಾಜೇಂ ದ್ರನೆ ! ನಿನ್ನಾಳ್ಮೆಯಂತೆಯೇ ನಾನು ಬೇರೆಲ್ಲಿಗಾದರೂ ಹೋಗುವುದರಲ್ಲಿ ಸಂದೇಹವಿಲ್ಲ.ಆದರೆ ನಾನು ಬೇರೆಲ್ಲಿಗೆ ಹೋದರೂ ಧನುರ್ಬಾಣಗಳನ್ನು ಹಿಡಿ ದಿರತಕ್ಕ: ಈ ನಿನ್ನ ಸ್ವರೂಪವು ನನ್ನ ಮನಸ್ಸನ್ನು ಬಿಟ್ಟು ಹೋಗಲಾರದು ! ನಿನ್ನಲ್ಲಿ ನನಗುಂಟಾಗಿರುವ ಭೀತಿಯಿಂದ ಎಲ್ಲಿದ್ದರೂ ನನಗೆ ಈ ನಿನ್ನ ರೂಪ ವೇ ಕಾಣಿಸುವಂತಾಗಿರುವುದು. ಆದುದರಿಂದ ನಾನು ನಿರ್ಭಯವಾಗಿಸಿಲ್ಲತಕ್ಕ ಕೆಲವು ಸ್ಥಳಗಳನ್ನು ನೀನೇ ನನಗೆ ತೋರಿಸಿ ಕೊಟ್ಟರೆ, ನಿನ್ನ ಲಜ್ಞಾ ಥೀನನಾಗಿ ನಾನು ಆ ಸ್ಥಳಗಳಲ್ಲಿ ನಿಯತವಾಗಿ ವಾಸಮಾಡುತ್ತಿರುವೆನು.” ಎಂದನು ? ಅದಕ್ಕಾ ರಾಜನು, ಕಲಿಪುರುಷನನ್ನು ಕುರಿತು “ಎಲೈ ! ಹಾಗಿ ದ್ದರೆ ನೀನು ಇನ್ನು ಮೇಲೆ ಜೂಜು, ಮದ್ಯಪಾನ, ಪರಸ್ತ್ರೀಸಂಗಮ, ಪ್ರಾಣಿಹಿಂಸೆ, ಇವು ನಡೆಯತಕ್ಕ ಸ್ಥಳಗಳಲ್ಲಿ ನಿರ್ಭಯವಾಗಿ ಸೇರಬಹುದು.

  • ಸರಸ್ವತಿ ಮತ್ತು ದೃಷದ್ವತೀನದಿಗಳ ನಡುವೆ ಇರುವ ಪ್ರದೇಶವು ಬ್ರಹ್ಮಾ ವರ್ತನೆನಿಸುವುದು.