ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತ ಮಾಹಾತ್ಮವು. ಆ ಪರಮಾತ್ಮನು ನಿನ್ನನ್ನು ಈ ಲೋಕದಲ್ಲಿ ಸೃಷ್ಟಿಸಿದನು. ಹಿಂದೆ ನೀ ಮೈ ಆತನಿಗೆ ಕೈಮುಗಿದು, ನಾನು ಮಾಡತಕ್ಕ ಕಾರವೇ”ನೆಂದು ಕೇಳಿದುದ ಕೈ, ತನ್ನ ಭಕ್ತರನ್ನು ದರಿಸುತ್ತಿರಬೇಕೆಂದು ನಿನಗೆ ಆಜ್ಞಾಪಿಸಿರುವನು.ನೀನೂ ಅದನ್ನು ಸಂತೋಷಪೂರೈಕವಾಗಿ ಅಂಗೀಕರಿಸಿದೆ. ಅದರಮೇಲೆ ಭಗವಂತನು ನಿನ್ನಲ್ಲಿ ಬಹಳಪ್ರಸನ್ನ ನಾಗಿ, ಆ ಕಾರಕ್ಕಾಗಿಯೇ ಸಿನಗೆ ಮುಕ್ತಿಯನ್ನು ದಾ ಸಿಯನ್ನಾಗಿಯೂ, ಈ ಜ್ಞಾನವೈರಾಗ್ಯಗಳನ್ನು ಪುತ್ರರನ್ನಾಗಿಯೂ ಮಾ ಡಿರುವನು. ಎಲೆ ಭದ್ರೆ ! ನಿನ್ನ ನಿಜಸ್ವರೂಪದಿಂದ ನೀನು ವೈಕುಂಠದಲ್ಲಿ ನೆಲೆಸಿರುವೆ. ಈ ಭೂಮಿಯಲ್ಲಿ ಛಾಯಾರೂಪದಿಂದ ಮುಕ್ತಿಜ್ಞಾನವೈರಾ ಗ್ಯಗಳೊಡನೆ ಸೇರಿ ಬಂದು, ಕೃತಯುಗದಿಂದ ದ್ವಾಪರಾಂತದವರೆಗೆ ಮಹಾ ನಂದದಿಂದ ಸಮಸ್ತಭೂಭಾಗವನ್ನೂ ವ್ಯಾಪಿಸಿದೆ ! ಕಲಿಯು ಪ್ರಾಪ್ತವಾ ದೊಡನೆ ಪಾಷಂಡಬಾಧೆಯಿಂದ ಮುಕ್ತಿಯು ಕ್ಷೀಣಗತಿಹೊಂದಿದುದನ್ನು ನೋಡಿ, ನೀನೇ ಆಕೆಯನ್ನು ಹಿಂತಿರುಗಿ ವೈಕಂಠಕ್ಕೆ ಕಳುಹಿಸಿಬಿಟ್ಟೆ ? ಆದ ರೇನು? ಈಗಲೂ ನೀನು ನೆನೆಸಿದಕ್ಷಣದಲ್ಲಿ ಆ ಮುಕ್ತಿದೇವಿಯು ಇಲ್ಲಿ ಬಂದು ಹೋಗುವುದರಲ್ಲಿ ಸಂದೇಹವಿಲ್ಲ. ಜ್ಞಾನವೈರಾಗ್ಯಗಳೆಂಬ ಇವರಿಬ್ಬರೂ ನಿನಗೆ ಪುತ್ರಭೂತರಾಗಿ ನಿನ್ನ ಪೋಷಣೆಗೊಳಪಟ್ಟು ನಿನ್ನ ವಶದಲ್ಲಿಯೇ ಇರುವರು. ಕಲಿದೋಷದಿಂದ ಇವರಿಗೆ ಈ ದುಸ್ಥಿತಿಯು ಬಂದಿರುವುದು. ಹಾಗಿದ್ದರೂ ನೀನು ಚಿಂತಿಸಬೇಡ. ಇದಕ್ಕಾಗಿ ನಾನೊಂದು ತಕ್ಕ ಉಪಾ ಯವನ್ನು ಯೋಚಿಸಿ ಹೇಳುವೆನು. ಎಲೆ ಶುಭಾಂಗಿ! ಈ ಕಲಿಯುಗಕ್ಕೆ ಸಮಾನ ವಾದ ಕಾಲವು ಬೇರೊಂದಿಲ್ಲ! ಈ ಕಾಲದಲ್ಲಿ ನಿನ್ನನ್ನು ಪ್ರತಿಯೊಂದು ಮನೆ ಯಲ್ಲಿಯೂ, ಪ್ರತಿಯೊಂದು ಜನದಲ್ಲಿಯೂ ನೆಲೆಗೊಳಿಸುವುದಕ್ಕೆ ನಾನು ಪ್ರಯತ್ನಿ ಸುವೆನು, ಎಲ್ಲರೂ ಸಮಸ್ತಧರ್ಮಗಳನ್ನೂ ಬಿಟ್ಟು ನಿನ್ನೊಬ್ಬಳನ್ನೆ ಆಶ್ರಯಿಸುವಂತೆ ಮಾಡುವೆನು. ಈರೀತಿಯಾಗಿ ನಿನಗೆ ಸರ್ವತೋಮು ಖವಾದ ಪ್ರವೃತ್ತಿಯನ್ನುಂಟುಮಾಡದಿದ್ದ ಪಕ್ಷದಲ್ಲಿ, ಆಗ ನಾನು ಹರಿದಾಸ ನಲ್ಲವೆಂದೇ ತಿಳಿ! ಎಲೆ ಭದ್ರೆ! ಈ ಕಾಲದಲ್ಲಿ ನಿನ್ನ ಆಶ್ರಯದಿಂದ ಪಾಪಿಗಳೂ ಕೂಡ ನಿರ್ಭಯವಾಗಿ ವಿಷ್ಣುಲೋಕವನ್ನು ಸೇರಬಹುದು,ಯಾರ ಮನಸ್ಸಿನಲ್ಲಿ ಪ್ರೇಮರೂಪವಾದ ಈ ಭಗವದ್ಭಕ್ತಿಯು ನೆಲೆಗೊಳ್ಳುವುದೋ, ಅಂತವರು