ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

se] ಅಧ್ಯಾ, ೧೭,] ಪ್ರಥಮಸ್ಕಂಧವು. ೧೯೩ ಇವು ನಾ ನಿನಗೆ ನಿತ್ಯನಿವಾಸ್ತವಾಗಿರಲಿ! ” ಎಂದನು. ಕಲಿಯು ಇನ್ನೂ ಕೆಲವು ಸ್ಥಳಗಳನ್ನು ತೋರಿಸಬೇಕೆಂದು ಪ್ರಾರ್ಥಿಸಲು, ಸುವರ್ಣವನ್ನೂ ಒಂದುಸ್ಥಳವಾಗಿ ತೋರಿಸಿಕೊಟ್ಟನು. ಅಷ್ಟಕ್ಕೂ ತೃಪ್ತಿಯಿಲ್ಲದೆ ಕಲಿಯು ಮತ್ತೆ ಕೆಲವು ಸ್ಥಳಗಳನ್ನು ಯಾಚಿಸಲು, ಸುಳ್ಳು, ಮದ, ಕಾಮ, ಕ್ರೋಧ, ವೈರಗಳೆಂಬ ಈ ಐದು ಬಗೆಯ ಅಧರಗಳಿರತಕ್ಕ ಸ್ಥಳಗಳನ್ನು ತೋರಿಸಿ, ಈ ಸ್ಥಳಗಳುಹೊರತು, ಬೇರೆಲ್ಲಿಯೂ ಪ್ರವರ್ತಿಸಕೂಡದೆಂದು ಕಠಿನಶಾ ಸನವನ್ನು ಮಾಡಿದನು ಆ ರಾಜಾಜ್ಞೆಯನ್ನು ತಿರಸಾವಹಿಸಿ ಕಲಿಪುರುಷನು ಆ ಸ್ಥಳಗಳಲ್ಲಿ ಮಾತ್ರವೇ ನಿವಸಿಸುತ್ತಿರುವನು. ಎಲೈ ಮಹರ್ಷಿಗಳೆ ! ಈ ಮೇಲೆ ಹೇಳಿದುವೆಲ್ಲವೂ ಕಲಿಸಿವಾಸಸ್ಥಾನಗಳಾದುದರಿಂದ, ಆಜ್ಜಿ ವನವನ್ನ ಪೇಕ್ಷಿಸತಕ್ಕವರು, ಎಂದಿಗೂ ಇಂತಹವಿಷಯಗಳಲ್ಲಿ ಪ್ರವರ್ತಿಸಕೂಡ ದು, ಅದರಲ್ಲಿಯೂ ಮುಖ್ಯವಾಗಿ ಪ್ರಜಾಪಾಲನವನ್ನು ಮಾಡತಕ್ಕ ರಾ ಜರು ಈ ಸ್ಥಳಗಳನ್ನು ಕಣ್ಣೆತ್ತಿಯೂ ನೋಡಬಾರದು. ರಾಜನಾದವನು ಯಾವಾಗಲೂ ಧೃತೇಲನಾಗಿರಬೇಕಾದುದತ್ಯವಶ್ಯವು. ರಾಜನೇ ದಾರಿತ ಪ್ಪಿ ನಡೆದರೆ, ಪ್ರಜೆಗಳೂ ಆದೇದಾರಿಯನ್ನು ಹಿಡಿದು ಕೆಟ್ಟುಹೋಗುವರು. ಒಬ್ಬನ ಅವಿವೇಕದಿಂದ ಮೊತ್ತಕ್ಕೆ ರಾಜ್ಯವೇ ಕೆಡುವುದು.” ಎಂದನು. ಹೀಗೆ ಪರೀಕ್ಷಿದ್ರಾಜನು ಕಲಿಯನ್ನು ನಿಗ್ರಹಿಸಿ ಕಳುಹಿಸಿ, ಧರಪುರುಷನಿಗೆ ತಪ ಶಾಚದಯಾರೂಪಗಳಾದ ಮರು ಕಾಲುಗಳನ್ನೂ ತಿರುಗಿ ದೃಢಪಡಿಸಿ ಕೊಟ್ಟನು. ಭೂದೇವಿಗೂ ಮನಸ್ಸಂತೋಷವನ್ನು ಂಟುಮಾಡಿ ಅತ್ತಾದ ರಿಂದ ಪೋಷಿಸಿದನು. ಹೀಗೆ ಪರೀಕ್ಷಿದ್ರಾಜನು, ತನ್ನ ಪಿತಾಮಹನಾದ ಧರಪುತ್ರನು ಅರಣ್ಯಕ್ಕೆ ಹೋಗುಕಾಲದಲ್ಲಿ ತನಗೆ ಕೊಟ್ಟು ಹೋದ ಸಾ ಮಾಜ್ಯಸಿಂಹಾಸನವನ್ನೇರಿ, ರಾಜಲಕ್ಷಿವಿಶಿಷ್ಯನಾಗಿ, ವಿಶಾಲವಾದ ಕೀ ರ್ತಿಯನ್ನು ಹರಡಿ, ಮೊನ್ನೆ ಯವರೆಗೂ ಹಸ್ತಿನಾಪುರದಲ್ಲಿರುತ್ತಿದ್ದನು. ಮ ಹಾನುಭಾವನಾದ ಆ ಪರೀಕ್ಷಿದ್ರಾಜನ ಆಜ್ಞೆಯು ಇನ್ನೂ ನಡೆಯುತ್ತಿರು ವುದರಿಂದಲೇ, ನೀವೂ ಇಲ್ಲಿ ಸತ್ರಯಾಗವನ್ನಾರಂಭಿಸಿ, ನಿರಿಷ್ಟು ವಾಗಿ ನಡೆಸುತ್ತಿರುವಿರಿ ! ಇಲ್ಲದಪಕ್ಷದಲ್ಲಿ ನಿಮ್ಮ ಯಾಗಕಾರವೂಕೂಡ ಕಲಿ ಬಾಧೆಯಿಂದ ಆಗಲೇ ನಷ್ಟವಾಗುತ್ತಿದ್ದಿತು.” ಎಂದನು. ಇಲ್ಲಿಗೆ ಹದಿನೇಳ ನೆಯ ಅಧ್ಯಾಯವು. 13