ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತವು [ಅಧ್ಯಾ. ೧೮. + ಪರೀಕ್ಷಿದ್ರಾಜನು ಬೇಟೆಗೆ ಹೋದುದು. ಶೃ೦ಗಿಶಾಪವು.mw ಎಲೈ ಮಹರ್ಷಿಗಳೆ ! ಯಾವ ಮಹಾತ್ಮನು ತಾಯಿಯ ಗರ್ಭದಲ್ಲಿ ಬೆಳೆಯುವಾಗ ಅಶ್ವತ್ಥಾಮನ ಬ್ರಹ್ಮಾಸ್ತ್ರದಿಂದ ದಗ್ಧನಾಗುತ್ತಿದ್ದರೂ, ಕೃಷ್ಣಾನುಗ್ರಹದಿಂದ ಸಾಯದೆ ಬದುಕಿದನೋ, ಯಾವ ಮಹಾನು ಭಾವನು ಶ್ರೀಹರಿಯಲ್ಲಿ ನಮ್ಮ ಮನಸ್ಸುಳ್ಳವನಾಗಿ, ಬ್ರಾಹ್ಮಣಶಾಪಪ್ರೇರಿತ ನಾದ ತಕ್ಷಕನೆಂಬ ಕೋರಸರ್ಪವು ತನ್ನನ್ನು ಕೊಲ್ಲುವುದಕ್ಕಾಗಿ ಬಂದಾ ಗಲೂ ಹೆದರದೆ ಧೈಯ್ಯದಿಂದಿದ್ದನೋ, ಆ ಪರೀಕ್ಷಿದ್ರಾಜನು ತನ್ನ ದೇಹ ದಲ್ಲಿಯೂ, ತದನುಬಂಧಿಗಳಲ್ಲಿಯೂ ಆಸೆಯನ್ನು ಬಿಟ್ಟು, ಶುಕಮುನಿಗೆ ಶಿಷ್ಯನಾಗಿ, ಭಗವಂತನಲ್ಲಿ ದೃಢವಾದ ನಿಷ್ಠೆಯನ್ನು ಹಿಡಿದು, ಗಂಗಾತೀರ ದಲ್ಲಿ ತನ್ನ ದೇಹವನ್ನು ಕಳೆದುಬಿಟ್ಟನು. ಎಲೈ ಶೌನಕಾದಿಗಳೆ ! ಭಗವಂತ ನಲ್ಲಿ ನಿಷ್ಠೆಯುಳ್ಳವರಿಗೆ ಮೋಹವೆಂಬುದು ಎಷ್ಟು ಮಾತ್ರಕ್ಕೂ ಉಂಟಾಗ ದು, ಶ್ರೀಹರಿಯ ಕಥಾಮೃತವನ್ನು ಪಾನಮಾಡತಕ್ಕರಿಗೂ, ಆತನನ್ನು ಸ್ಮರಿಸತಕ್ಕವರಿಗೂ, ಅವಸಾನಕಾಲದಲ್ಲಿಯಾದರೂ ಧೈರವು ಕದಲದು. ಕಲಿಯು ಈ ಭೂಮಿಯಲ್ಲಿ ಪ್ರವೇಶಿಸಿದ್ದರೂ ಕೂಡ, ಪರೀಕ್ಷಿತ್ತು ರಾಜ್ಯ ವನ್ನಾಳುತಿದ್ದವರೆಗೆ, ಮತ್ತು ಆತನಾಜ್ಞೆಯು ಲೋಕದಲ್ಲಿ ನಡೆಯುತಿದ್ದವ ರೆಗೆ, ಕಲಿಯ ಪ್ರಾಬಲ್ಯಕ್ಕೆ ಎಳ್ಳಷ್ಟಾದರೂ ಅವಕಾಶವಾಗಲಿಲ್ಲ ! ಶ್ರೀಕೃ ಏನು ಈ ಭೂಮಿಯನ್ನು ಬಿಟ್ಟಕ್ಷಣವೇ ಅದರ ಕಾರಣನಾದ ಕಲಿಯು ಈ ಲೋಕದಲ್ಲಿ ತಲೆಯಿಕ್ಕಿದನು. ಕಲಿಯು ವಿಶೇಷಪಾಪಕಾರಣನಾಗಿದ್ದರೂ, ಪರೀಕ್ಷಿದ್ರಾಜನು ಅವನನ್ನು ಕೊಲ್ಲದೆ ಬಿಟ್ಟು ದಕ್ಕೆ ಕೆಲವು ಕಾರಣಗ ಳುಂಟು ! ಕಲಿಯುಗದಲ್ಲಿ ಭಗವದ್ಗೀರ್ತನಗಳೇ ಮೊದಲಾಗಿ ಬಹಳ ಸುಲಭ ಸಾಧ್ಯಗಳಾದ ಪುಣ್ಯಕರ್ಮಗಳೂಕೂಡ, ಬಹುತೇಪುಕಾಲದಲ್ಲಿಯೇ ಫಲ ವನ್ನು ಕೈಗೂಡಿಸುವುವು. ಪಾಪಕಾರಗಳು ಬೇಗನೆ ಫಲವನ್ನು ತೋರಿಸ ಲಾರವು. ಪರೀಕ್ಷಿದ್ರಾಜನು ಈ ಗುಣಾಂಶವನ್ನು ಚೆನ್ನಾಗಿ ಬಲ್ಲವನಾದುದ ರಿಂದ, ಕಲಿಪ್ರವೇಶವಾದಮಾತ್ರಕ್ಕೆ ಅಷ್ಟಾಗಿ ನಷ್ಟವೇನೂ ಇಲ್ಲವೆಂದೆಣಿಸಿ: ಪುಷ್ಪಗಳನ್ನು ಕದಲಿಸದೆ ಅವುಗಳೊಳಗಿನ ಮಕರಂದವನ್ನು ಕುಡಿಯುವ ಭ್ರಮರದಂತೆ, ಕಲಿಪುರುಷನನ್ನು ಸಂಪೂರ್ಣವಾಗಿ ವಧಿಸದೆ,ಆತನ ಗಧ್ವನ.