ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೧೮.] ಪ್ರಥಮಸ್ಕಂಥವು. ಮಾತ್ರ ಮುರಿದುಬಿಟ್ಟನು, ಕಲಿಪುರುಷನೂಕೂಡ ಈಗ ಜನರಲ್ಲಿ ನಿರ್ಭಯ ವಾಗಿ ಪ್ರವರ್ತಿಸಲಾರನು. ಅಲ್ಲಲ್ಲಿ ಹೊಂಚುಹಾಕುತಿದ್ದು ಕುರಿಗಳಮೇಲೆ ಬಿಳುವ ತೋಳನಂತೆ, ಅಲ್ಲಲ್ಲಿ ನಿರೀಕ್ಷಿಸುತ್ತಿದ್ದು, ಎಚ್ಚರತಪ್ಪಿದ ಮನುಷ್ಯರನ್ನು ಹಿಡಿಯುವನೇಹೊರತು, ಸ್ಥಿರಮನಸ್ಸುಳ್ಳ ಪಂಡಿತರನ್ನು ಕಂಡರೆ ಹೆದರಿ ಪಲಾಯನಮಾಡುವನು. ಅದು ಹಾಗಿರಲಿ! ಎಲೈ ಮಹರ್ಷಿ ಗಳೆ ! ನೀವು ಪರೀಕ್ಷಿದ್ರಾಜನ ಚರಿತ್ರವನ್ನು ವಿವರಿಸಬೇಕೆಂದು ಕೇಳಿದಿರಿಲ್ಲವೆ? ನಿಮ್ಮ ಕೋರಿಕೆಯಂತೆಯೇ ಭಗವತ್ಕಥಾವಿತ್ರಿತವಾದ ಆ ರಾಜನ ಚರಿತ್ರ ವನ್ನು ನಿಮಗೆ ತಿಳಿಸಿರುವೆನು. ಆ ಜೀವನವನ್ನ ಪೇಕ್ಷಿಸುವವರೊಬ್ಬೊ ಬ್ಬರೂ ಹೀಗೆ ಭಗವದ್ವಿಷಯಕಗಳಾದ ಪುಣ್ಯಚರಿತ್ರಗಳನ್ನು ಕೇಳಿ ತಿಳಿಯ ಬೇಕಾದುದೇ ಅತ್ಯವಶ್ಯವು.” ಎಂದನು. ಈ ಮಾತನ್ನು ಕೇಳಿ ತಿರುಗಿ ಶೌನ ಕಾದಿಮಹರ್ಷಿಗಳು ಸೂತನನ್ನು ಕುರಿತು, “ಎಲೈ ಮಹಾತ್ಮನೆ! ನಿನ್ನಿಂದ ನಾವು ಧನ್ಯರಾದೆವು. ಅಸ್ಥಿರವಾದ ಮನುಷ್ಯ ಜನ್ಮವನ್ನೆ ತಿದ ನಮಗೆ, ನೀನು ಕರ್ಣಾಮೃತಪ್ರಾಯಗಳಾದ ಆ ಭಗವಂತನ ಪುಣ್ಯಚರಿತ್ರಗಳನ್ನು ತಿಳಿಸುವು ದರಿಂದ ನಮ್ಮನ್ನು ಕೃತಾರರನ್ನಾಗಿ ಮಾಡಿದೆ ! ಇದಕ್ಕಾಗಿ ನಾವು ನಿನಗೆ ಯಾವವಿಧವಾದ ಪ್ರತ್ಯುಪಕಾರವನ್ನು ಮಾಡಬಲ್ಲೆವು ? ಇದೋ ! ನಿನ್ನನ್ನು ಆಶೀರ್ವದಿಸುವೆವು! ಇದೇ ನಾವು ಮಾಡತಕ್ಕ ಪ್ರತ್ಯುಪಕಾರವು! ನೀನು ಹೀ ಗೆಯೇ ಅನೇಕಸಂವತ್ಸರಗಳವರೆಗೆ ಬದುಕಿದ್ದು ಲೋಕೋಪಕಾರವನ್ನು ಮಾಡುತ್ತಿರಬೇಕೆಂಬುದೇ ನಮ್ಮ ಕೋರಿಕೆ ! ಓ ಮಹಾತ್ಮಾ! ಈಗ ನಾವು ಬಹಳ ಶ್ರಮಸಾಧ್ಯವಾದ ಸತ್ಯಾಗವನ್ನಾರಂಭಿಸಿರುವೆವಷ್ಟೆ? ಈ ಹೋ ಮಕಾರದಲ್ಲಿ ಅನವರತವೂ ಹೊಗೆಯನ್ನು ಕುಡಿದು ಕುಡಿದು ಬೇಸರಗೊಂ ಡಿರುವ ನಮಗೆ, ನಡುನಡುವೆ ನೀನು ಆ ಭಗವಂತನ ಪಾದಪದ್ಮಸಂಬಂಧ ವಾದ ಮಧುವನ್ನು ಕುಡಿಸಿ ನಮ್ಮ ಬೇಸರಿಕೆಯನ್ನಾರಿಸುತ್ತಿರುವೆ ! ಓ ಸೂತಾ! ನಾವೇ ಪರಮಧನ್ಯರು! ಹೆಚ್ಚು ಮಾತಿನಿಂದೇನು? ಸ್ವರ್ಗಸುಖವಾ ಗಲಿ, ಕೊನೆಗೆ ಮೋಕ್ಷವಾಗಲಿ, ನಿನ್ನಂತಹ ಭಾಗವತೋತ್ತಮರ ಸಹವಾಸ ಕೈ ಲೇಶಮಾತ್ರವೂ ಸಾಟಿಯಾಗಲಾರದು. ಇನ್ನು ಲೋಕದಲ್ಲಿ ಮನುಷ್ಯರಿಗೆ ದುರಾಸೆಯನ್ನು ಹೆಚ್ಚಿಸತಕ್ಕ ಅರ್ಥಕಾಮಾದಿಗಳನ್ನು ಅದಕ್ಕೆ ಸರಿಹೋಲಿ