ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೬ ಶ್ರೀಮದ್ಭಾಗವತವು [ಅಧ್ಯಾ. ೧೮. ಸುವುದು ಬರೀಹುಚ್ಚುತನವಲ್ಲವೆ? ಮಹಾತ್ಮರಿಗೆ ಪ್ರಾಪ್ಯ ಸ್ಥಾನವಾಗಿಯೂ, ಪಾಪಕನಾಗಿಯೂ, ಆಧಾರನಾಗಿಯೂ ಇರುವ ಆ ಭಗವಂತನ ಗುಣಗಳ ನ್ನು ಕೇಳುವುದರಲ್ಲಿ, ರಸಜ್ಞನಾದ ಯಾವ ಮನುಷ್ಯನಿಗೆತಾನೇ ತೃಪ್ತಿ ಯುಂಟಾಗುವುದು ? ಬ್ರಹ್ಮಾದಿದೇವತೆಗಳಾಗಲಿ, ಪರಮಯೋಗಿಗಳಾಗಲಿ, ಆ ಭಗವಂತನ ಕಲ್ಯಾಣಗುಣಗಳೆಂಬ ಮಹಾಸಮುದ್ರದ ಪಾರವನ್ನು ಕಂಡು ಹಿಡಿಯಲಾರರು. ಇನ್ನು ನಮ್ಮಂತಹ ಸಾಮಾನ್ಯ ಜನರು ಆ ಭಗವಚ್ಚರಿತ್ರ ಗಳ ಪಾರವನ್ನು ಕಂಡು ತೃಪ್ತರಾಗುವುದೆಂದರೇನು ? ಎಲೈ ಮಹಾತ್ಮನೆ ! ನೀನು ಆ ಭಗವದ್ಗುಣಗಳ ತತ್ವವನ್ನು ಚೆನ್ನಾಗಿ ಬಲ್ಲವನು, ಆ ಭಗವಂತನೋ 1ನೇ ಮುಖ್ಯಾಶ್ರಯನೆಂದು ನಂಬಿದವನು. ಆದುದರಿಂದ ಸೀನು, ಶ್ರದ್ದೆ ಯಿಂದ ಕೇಳಬೇಕೆಂದಿರುವ ನಮಗೆ ಲೋಕಪಾವನಗಳಾದ ಆ ಭಗವತ್ಕಥೆಗೆ ಳನ್ನೇ ವಿಸ್ತಾರವಾಗಿ ತಿಳಿಸಬೇಕು! ಭಾಗವತೋತ್ತಮನಾಗಿಯೂ, ಧೀಮಂತ ನಾಗಿಯೂ ಇರುವ ಪರೀಕ್ಷಿದ್ರಾಜನು, ಶುಕಮುನಿಯಿಂದುಪದೇಶಿಸಲ್ಪಟ್ಟ ಪುರಾಣವನ್ನು ಕೇಳಿ, ಆದರಿಂದುಂಟಾದ ಜ್ಞಾನದಿಂದ ಶ್ರೀಮನ್ನಾರಾಯಣನ ಪಾದಮೂಲವನ್ನು ಸೇರಿದುದಾಗಿ ಹೇಳಿದೆಯಷ್ಟೆ? ಆ ಪುರಾಣವನ್ನೇ ನಮಗೆ ನೀನು ಉಪದೇಶಿಸಬೇಕು. ಆ ಪುರಾಣಶ್ರವಣದಿಂದಲೂ, ಅದನ್ನು ಪಠಿಸುವು ದರಿಂದಲೂ ನಿರತಿಶಯವಾದ ಪುಣ್ಯವು ಲಭಿಸುವುದು. ಅದಕ್ಕೆ ಸಮಾನವಾ ದ ಬೇರೆ ಪುರಾಣವಿಲ್ಲವು.ಮುಮುಕ್ಷುಗಳಿಗೆ ತಿಳಿಯಬೇಕಾದ ವಿಷಯಗಳೆಲ್ಲವೂ ಅದರಲ್ಲಿ ಸ್ಪಷ್ಟವಾಗಿ ತಿಳಿಸಲ್ಪಡುವುವು. ಆದರೆ ಶ್ರವಣಪಠನೆಗಳಿಂದ ಅತ್ಯ ದ್ಭುತವಾದ ಭಕ್ತಿಯೋಗವೂ ಪ್ರಾಪ್ತವಾಗುವುದು. ಭಗವಚ್ಛರಿತ್ರಗಳಿಂದ ಕೂಡಿ,ಭವದ್ಭಕ್ತರಿಗೆ ವಿಶೇಷಾದರಣೀಯವಾದ ಆಪುರಾಣವನ್ನೇ ನೀನು ನಮ್ಮ ಕ್ಲ ಪೂರ್ಣಾನುಗ್ರಹವನ್ನಿಟ್ಟು ತಿಳಿಸಬೇಕು” ಎಂದು ಪ್ರಾರ್ಥಿಸಿದರು. ಹೀಗೆ ಭಗವತ್ಕಥೆಯನ್ನು ಹೇಳುವುದಕ್ಕಾಗಿ ಪ್ರೇರಿಸುತ್ತಿರುವ ಶೌನಕಾದಿಗಳ ವಾಕ್ಯ ನ್ನು ಕೇಳಿ, ಸೂತನು ಪರಮಹರ್ಷಯುಕ್ತನಾಗಿ, ಅವರನ್ನು ಕುರಿತು, (ಎಲೈ ಮಹರ್ಷಿಗಳೆ! ಇದಲ್ಲವೇ ನನ್ನ ಪರಮಭಾಗ್ಯವು! ನಾವು ಕೇವಲಸಂಕರವರ್ಣಿ ದಲ್ಲಿ ಹುಟ್ಟಿದ ಹೀನಜಾತಿಯವರಾಗಿದ್ದರೂ,ಜ್ಞಾನದಿಂದಲೂ, ವಯಸ್ಸಿನಿಂದ ರೂ ವೃದ್ಧರಾದ ನೀವು ನಮ್ಮನ್ನು ಇಷ್ಟು ದೂರಕ್ಕೆಗೌರವಿಸಿ, ನಮ್ಮಿಂದ