ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೮ ಶ್ರೀಮದ್ಭಾಗವತವು (ಅಧ್ಯಾ, ೧೮. ನಾಲ್ಕನೆಯ ಆಶ್ರಮವನ್ನು ಹೊಂದುವರು. ಎಲೈ ಮುನಿಶ್ರೇಷ್ಠರೆ ! ಅಂತ ಹ ಮಹಾಮಹಿಮೆಯುಳ್ಳ ಭಗವಂತನ ಗುಣಗಳನ್ನು ವಿವರಿಸುವುದಕ್ಕೆ ನಾನು ಶಕ್ತನೆ? ಆದರೆ ಜ್ಞಾನಾಧಿಕರಾದ ನೀವೇ ಈ ವಿಷಯದಲ್ಲಿ ನನ್ನನ್ನು ಬಹಳ ವಾಗಿ ನಿರ್ಬಂಧಿಸುತ್ತಿರುವುದರಿಂದ, ನನ್ನ ಬುದ್ಧಿಗೆ ತೋರಿದಷ್ಟನ್ನು ಮಾತ್ರ ವಿವರಿಸಬಲ್ಲೆನು.ಪಕ್ಷಿಗಳುತಮ್ಮ ರೆಕ್ಕೆಗಳಲ್ಲಿರುವ ಬಲಕ್ಕನುಸಾರವಾಗಿ, ಆಕಾ ಶ್ರದಲ್ಲಿ ಹಾರಿ, ಆ ಬಲವು ತಗ್ಗಿದೊಡನೆ ಹಿಂತಿರುಗುವಂತೆ, ಪಂಡಿತರಾದವರೂ ಕೂಡ, ತಮ್ಮ ತಮ್ಮ ಬುದ್ಧಿಬಲಕ್ಕೆ ತಕ್ಕಂತೆ ಭಗವದ್ಗುಣಗಳನ್ನು ವರ್ಣಿಸು ತ, ಆ ಬುದ್ಧಿಬಲವು ತಗ್ಗಿದೊಡನೆ ಆ ವಿಷಯದಿಂದ ಹಿಂತಿರುಗುವರು. ರೆಕ್ಕೆಗಳಲ್ಲಿ ಬಲವಿಲ್ಲದುದಕ್ಕಾಗಿ ಪಕ್ಷಿಗಳು ವಿಮುಖವಾಗಬೇಕೇಹೊರತು, ಆಕಾಶದಲ್ಲಿ ಅವಕಾಶವು ಸಾಲದೆಂದು ಹಿಂತಿರುಗುವುವಲ್ಲ. ಹಾಗೆಯೇ ಭಗ ವದ್ದು ಣಗಳನ್ನು ವರ್ಣಿಸುವಾಗಲೂ, ಬುದ್ಧಿಕ್ಷಯದಿಂದ ಅದರಲ್ಲಿ ವಿಮ ಖರಾಗಬೇಕೇಹೊರತು, ಆತನ ಗುಣಗಳಿಗೆ ಮಾತ್ರ ಕೊನೆಯೆಂಬುದೇ ಇಲ್ಲ. ಈ ವಿಚಾರವು ಹಾಗಿರಲಿ ! ಇನ್ನು ಪರೀಕ್ಷಿದ್ರಾಜನ ವೃತ್ತಾಂತವನ್ನು ಕೇ ಳಿರಿ ! ಒಮ್ಮೆ ಪರೀಕ್ಷಿದ್ರಾಜನು ಬೇಟೆಯಾಡಬೇಕೆಂಬ ಕುತೂಹಲದಿಂದ ಧನುರ್ಬಾಣಗಳನ್ನು ಧರಿಸಿ ಕಾಡಿಗೆ ಹೋದನು. ಅಲ್ಲಲ್ಲಿ ಬೇಟೆಯಾಡುತ್ತ ಮೃಗಗಳನ್ನು ಬೆನ್ನಟ್ಟಿ ಹೋಗುವಾಗ, ಮಾರ್ಗಾಯಾಸದಿಂದಲೂ, ಹಸಿವು ಬಾಯಾರಿಕೆಗಳಿಂದಲೂ ಪೀಡಿತನಾಗಿ,ಜಲಾಶಯವನ್ನು ಹುಡುಕುತ್ತ ಬಂದನು ಎಲ್ಲೆಲ್ಲಿ ಸುತ್ತಿದರೂ ಸರೋವರವನ್ನು ಕಾಣದೆ, ಕೊನೆಗೆ ಶಮೀಕನೆಂಬ ಒಬ್ಬ ಮಹರ್ಷಿಯ ಪುಣ್ಯಾಶ್ರಮವನ್ನು ಪ್ರವೇಶಿಸಿದನು. ಆ ಆಶ್ರಮಮಧ್ಯದಲ್ಲಿ ಈ ವೀಕಮುನಿಯು ಶಾಂತನಾಗಿ, ಕಣ್ಣು ಮುಚ್ಚಿ ತಪೋನಿರತನಾಗಿ ಕುಳಿತಿದ್ದು ದನ್ನು ಕಂಡನು. ಆ ಮಹರ್ಷಿಯು ತನ್ನ ಸತ್ಯೇಂದ್ರಿಯಗಳನ್ನೂ, ಪ್ರಾಣವ ನ್ಯೂ , ಮನಸ್ಸನ್ನೂ, ಬುದ್ಧಿಯನ್ನೂ ತಡೆದಿಟ್ಟುಕೊಂಡು, ಬಾಹ್ಯವ್ಯಾಪಾರ ಗಳೊಂದೂ ಇಲ್ಲದೆ,ಜಾಗ್ರತೃಷ್ಟ ಸುಷುಪ್ತಿಗಳೆಂಬ ಅವಸ್ಥಾತ್ರಯಗಳಿಗಿಂತ ಲೂ ಬೇರೆಯಾದ ಆತ್ಮಾನುಸಂಧಾನದಿಂದ ಕೇವಲಬ್ರಹ್ಮ ವಿಷಯಕವಾದ ಭಾವನೆಯೊಂದರಲ್ಲಿಯೇ ನಿರತನಾಗಿದ್ದನು. ಮತ್ತು ವಿಕಾರಶೂನ್ಯನಾಗಿ, ಜಟಾಭಾರದಿಂದ ಮುಚ್ಚಿದ ಮೈಯುಳ್ಳವನಾಗಿ, ಮೃಗಚರವನ್ನು ಧರಿಸಿ