ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧೮.] ಪ್ರಥಮಸ್ಕಂಧವು. ಕೇವಲಧ್ಯಾನಪರನಾಗಿ ಕುಳಿತಿದ್ದನು. ದಾಹಪೀಡಿತನಾಗಿದ್ದ ಪರೀ ಕ್ಷಿದ್ರಾಜನು, ಆಸ್ಥಿತಿಯಲ್ಲಿದ್ದ ಋಷಿಯನ್ನು ಕಂಡು,ದಾಹಶಾಂತಿಗಾಗಿ ತನಗೆ ಸ್ವಲ್ಪಪಾನಜಲವನ್ನು ಕೊಡಬೇಕೆಂದು ಯಾಚಿಸಿದನು. ಹೀಗೆಯಾಚಿಸುವಾ ಗಲೂ ಆ ಮಹರ್ಷಿಯು ಯಾವ ಪ್ರತ್ಯುತ್ತರವನ್ನೂ ಹೇಳದೆ, ಕುಶಲಪ್ರಶ್ನವ ನ್ಯೂ ಮಾಡದೆ, ಕೇವಲಧ್ಯಾನದಲ್ಲಿಯೇ ಇದ್ದು ಬಿಟ್ಟನು. ಆಗ ಪರೀಕ್ಷಿದ್ರಾ ಜನು, ತನಗೆ' ಕುಳ್ಳಿರುವುದಕ್ಕೆ ಆಸನವನ್ನಾಗಲಿ ಅರ್ಥ್ಯವನ್ನಾಗಲಿ, ಕೊಡ ದೆ ಆ ಮಹರ್ಷಿಯು ಕೇವಲ ಉದಾಸೀನನಾಗಿರುವುದನ್ನು ನೋಡಿ, ಆತನು ತನ್ನನ್ನ ವಮಾನಪಡಿಸಿದಂತೆ ತನ್ನಲ್ಲಿ ತಾನೇ ಭಾವಿಸಿಕೊಂಡನು.ಅವನಿಗೆ ಮೇ ಲೆಮೇಲೆ ಕೋಪಾವೇಶವೂ ಹೆಚ್ಚಿ ಬಂದಿತು. ಮೊದಲೇ ಈ ರಾಜನು ಹಸಿವು ಬಾಯಾರಿಕೆಗಳಿಂದ ಪೀಡಿತನಾಗಿದ್ದುದರಿಂದ, ಅವನಿಗೆ ಆ ಮಹರ್ಷಿಯ ವಿಷ ಯದಲ್ಲಿ ಹಿಂದೆಯಾವಾಗಲೂ ಇಲ್ಲದ ವೈರವೂ,ಕೋಪವೂ, ಹುಟ್ಟಿತು. ಈ ಕೋಪದಿಂದ ಪರೀಕ್ಷಿದ್ರಾಜನು ಸಮೀಪದಲ್ಲಿ ಸತ್ತು ಬಿದ್ದಿದ್ದ ಒಂದು ಹಾವ ನ್ನು ತನ್ನ ಬಿಲ್ಲಿನ ತುದಿಯಿಂದ,ಆಶಮೀಕಮುನಿಯ ಕೊರಳಿಗೆ ಮಾಲೆಹಾಕಿ ಪಟ್ಟಣಕ್ಕೆ ಹಿಂತಿರುಗಿದನು. ಎಲೈ ಶೌನಕಾದಿಕಳೆ ! ಪರೀಕ್ಷಿದ್ರಾಜನು ಆ ಋಷಿಯ ಕೊರಳಿಗೆ ಸತ್ಯ ಹಾವನ್ನು ಮಾಲೆಹಾಕಿದುದಕ್ಕೆ ಕಾರಣವ ನ್ನು ಹೇಳುವೆನು ಕೇಳಿರಿ ! ( ಆ ಮಹರ್ಷಿಯು ನಿಜವಾದ ಸಮಾಧಿಯಿಂದ ಲೇ ಕಣ್ಣುಗಳನ್ನು ಮುಚ್ಚಿ ಕುಳಿತಿರುವನೆ ? ಅಥವಾ ತಮ್ಮಂತಹ ಕ್ಷತ್ರಿಯ ರಲ್ಲಿ ತುಣ್ಣೀಭಾವದಿಂದ ಮಾತಾಡುವುದಕ್ಕಿಷ್ಟವಿಲ್ಲದೆ ಕಪಟಸಮಾಧಿ ಯಿಂದ ಸುಮ್ಮನಿರುವನೆ?” ಎಂಬುದನ್ನು ಪರೀಕ್ಷಿಸಿ ತಿಳಿಯಬೇಕೆಂಬುದ ಕ್ಯಾಗಿಯೇ, ಆ ರಾಜನು ಈ ವಿಧವಾದ ಕಾವ್ಯವನ್ನು ಮಾಡಿ ತನ್ನ ಪಟ್ಟಣ ಕ್ಕೆ ಹಿಂತಿರುಗಿಬಿಟ್ಟನು. ಇಷ್ಟರಲ್ಲಿ ಆ ಮಹರ್ಷಿಯ ಪುತ್ರನಾದ ಶೃಂಗಿ ಯೆಂಬವನ್ನು ತನ್ನ ಸಂಗಡಿಗರಾದ ಕೆಲವು ಋಷಿಕುಮಾರರೊಡನೆ ಅಲ್ಲಲ್ಲಿವಿಹ ರಿಸುತಿದ್ದು, ತಂದೆಯ ಬಳಿಗೆ ಬರುತ್ತ, ತನ್ನ ತಂದೆಯವಿಷಯದಲ್ಲಿ ರಾಜ ನು ಮಾಡಿ ಹೋದ ಮಹಾಪರಾಧವನ್ನು ದಾರಿಯಲ್ಲಿಯೇ ಕೇಳಿ, ಮನಸ್ಸಿ ನಲ್ಲಿ ಬಹಳವಾಗಿ ದುಃಖಿಸಿ, ಕೋಪಾವಿಷ್ಟನಾಗಿ 14 ಆಹಾ ! ಇದೇನಿದು ! ರಾಜರಲ್ಲಿ ಇಷ್ಟೊಂದು ಆಧರ್ಮಬುದ್ಧಿಯೆ ? ಛೇ ! ಬಲಿಯನ್ನು ತಿಂದು