ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೦ ಶ್ರೀಮದ್ಭಾಗವತವು [ಅಧ್ಯಾ, ೧೮. ಕೊಬ್ಬಿದ ಕಾಗೆಗಳಂತೆ, ಈ ಕೃತಿಯಾಧಮರು ಹಿಂದುಮುಂದುನೋಡದೆ ಮಹಾಗರ್ವದಿಂದ ಬೀಗಿ ಬೆರೆಯುತ್ತಿರುವರು. ಕ್ಷತ್ರಿಯರು ಯಾವಾಗಲೂ ಬ್ರಾಹ್ಮಣರಿಗೆ ಕೇವಲದಾಸಭೂತರು! ತನ್ನ ಸ್ವಾಮಿಯ ಮನೆಬಾಗಿಲನ್ನು ಕಾ ದು ಬಿದ್ದಿರುವ ನಾಯಿಗಳಂತೆ, ಯಾವಾಗಲೂ ಬ್ರಾಹ್ಮಣರಿಗೆ ವಿಧೇಯರಾಗಿ ಅವರನ್ನು ರಕ್ಷಿಸುತ್ತಿರುವುದೇರಾಜರ ಕೃತ್ಯವು.ಹೀಗಿರುವಾಗ ಬಾಗಿಲು ಕಾಯು ವ ನಾಯಿಯ ಯಜಮಾನನ ಭೋಜನಪಾತ್ರೆಗೆಬಾಯಿಕ್ಕಿದಂತೆ, ದಾಸಭೂ ತನಾದಯಾವನೋಕ್ಷತ್ರಿಯನು ಈಗುರುದ್ರೋಹವನ್ನು ಮಾಡಿದನೆ' ಇಂತ ಹ ದುರಾತ್ಮರನ್ನು ಶಿಕ್ಷಿಸುವುದಕ್ಕಾಗಿ ಅವತರಿಸಿದ ಭಗವಂತನಾದ ಕೃಷ್ಣ ನು ಈ ಲೋಕವನ್ನು ಬಿಟ್ಟುಹೋದುದರಿಂದಲ್ಲವೇ ಈ ನೀಚಕೃತ್ಯಗಳಿ ಗೆಲ್ಲವೂ ಅವಕಾಶವಾಯಿತು. ಆದರೇನು ? ಇರಲಿ ! ಈಗಲೂ ಚಿಂತೆ ಯಿಲ್ಲ. ಹಾಗೆ ಧರ್ಮವನ್ನ ತಿಕ್ರಮಿಸಿಹೋಗತಕ್ಕ ದುರಾತ್ಮರಿಗೆ ಇನ್ನು ಮೇಲೆ ನಾನೇ ಶಿಕ್ಷಕನಾಗಿ ನಿಲ್ಲುವೆನು ನನ್ನ ಅದ್ಭುತಸಾಮರ್ಥ್ಯವನ್ನು ಜಗತ್ತೆಲ್ಲಾ ನೋಡಲಿ.” ಎಂದು ಹೇಳಿ, ಕೋಪದಿಂದ ಕೆಂಪೇರಿದ ಕಣ್ಣುಳ್ಳ ವನಾಗಿ, ಅತಿವೇಗದಿಂದ ಹೊರಟು, ಸಮೀಪದಲ್ಲಿದ್ದ ಕೌಶಿಕೀನಡಿಯಲ್ಲಿ ಳಿದು, ಶುದ್ಧಾಚಮನವನ್ನು ಮಾಡಿ ಬಂದು, ವಜ್ರಾಯುಧಕ್ಕೆ ಸಮಾನವಾದ ಈ ಶಾಪವಾಕ್ಯವನ್ನು ಪ್ರಯೋಗಿಸ ತೊಡಗಿದನು, 1 ಯಾವ ದುರಾತ್ಮ ನು ಹೀಗೆ ಮಯ್ಯಾದೆಯನ್ನ ತಿಕ್ರಮಿಸಿ, ಸತ್ಯಹಾವನ್ನು ತಂದು ನನ್ನ ತಂದೆಯಕೊ ರಲಿಗೆ ಸಿಕ್ಕಿಸಿ ಹೋದನೋ, ಆ ನೀಚನು ಈ ಮೊದಲು ಏಳನೆಯದಿನಕ್ಕೆ ತಕ್ಷಕನಿಂದ ದಷ್ಯನಾಗಿ ಸಾಯಲಿ” ಎಂದು ಶಪಿಸಿಬಿಟ್ಟನು. ಆಮೇಲೆ ತನ್ನ ಆಶ್ರಮಕ್ಕೆ ಬಂದು, ತಂದೆಯ ಕೊರಲಿನಲ್ಲಿದ್ದ ಸರ್ಪದೇಹವನ್ನು ನೋಡಿ, ಭಯಗ್ರಸ್ತನಾಗಿ, ಗಟ್ಟಿಯಾಗಿ ಆಳುವುದಕ್ಕೆ ತೊಡಗಿದನು. ಈ ಧ್ವನಿಯನ್ನು ಕೇಳಿ ಶಮೀಕಮುನಿಯು, ತನ್ನ ಸಮಾಧಿಯನ್ನು ನಿಲ್ಲಿಸಿ ಕಣ್ಣು ತೆರೆದು, ತನ್ನ ಮುಂದೆ ಅಳುತ್ತ ನಿಂತಿದ್ದ ಬಾಲಕನನ್ನೂ , ತನ್ನ ಕೊ ರಲಲ್ಲಿ ಜೋಲಾಡುತಿದ್ದ ಸರ್ಪಶರೀರವನ್ನೂ ನೋಡಿ, ಆ ಸರ್ಪದೇಹವನ್ನು ತೆಗೆದು ಬಿಸಾಡಿದನು. ಆಮೇಲೆ ಮಗನನ್ನು ಸಮೀಪಕ್ಕೆ ಕರೆದು, “ಎಲೈವತ್ಸನೆ! ನೀನು ಅಳುವುದಕ್ಕೆ ಕಾರಣವೇನು ? ನಿನಗೆ ಅಪಕಾರವನ್ನು ಮಾಡಿದವರು