ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧೮ ) ಪ್ರಥಮಸ್ಕಂಧವು. ೨೦೧ ಯಾರು ? ಹೆದರಬೇಡ ! ನಿನ್ನ ದುಃಖಕಾರಣವೇನು ಹೇಳು” ಎಂದನು. ಅದಕ್ಕಾಂಗಿಯು ತನ್ನ ದುಃಖವನ್ನು ತಡೆದಿಟ್ಟುಕೊಂಡು, ಯಾವನೋ ರಾಜನು ಬಂದು ಈ ಆಕೃತ್ಯವನ್ನು ಮಾಡಿ ಹೋದುದನ್ನೂ, ತಾನು ಅದ ಕಾಗಿ ಶಾಪವನ್ನು ಕೊಟ್ಟುದನ್ನೂ ತಿಳಿಸಿದನು. ಇದನ್ನು ಕೇಳಿದಮೇಲೆ ಶಮೀಕಮಹರ್ಷಿಯು ತನ್ನ ಮಗನ ಕಾಠ್ಯಕ್ಕಾಗಿ ತಾನು ಸ್ವಲ್ಪ ಮಾತ್ರವೂ ಸಂತೋಷವನ್ನು ತೋರಿಸದೆ ಎಲೈ ಪುತ್ರನೆ ! ನೀನು ಮಾಡಿದುದೇ ಬಹಳ ತಪ್ಪ ! ಆ ರಾಜನು ನನ್ನ ವಿಷಯದಲ್ಲಿ ಮಾಡಿದ ಅಪರಾಧವು ಈ ಕ್ರೂರ ಶಾಪವನ್ನು ಕೊಡುವಷ್ಟು ದೊಡ್ಡದಲ್ಲ. ಅಪರಾಧದ ಬಲಾಬಲತಾರತಮ್ಯ ವನ್ನು ಯೋಚಿಸದೆ ಆತನಿಗೆ ಸರ್ಪದಷ್ಟನಾಗಿ ಸಾಯಲೆಂದು ಕೂರಶಾಪ ವನ್ನು ಕೊಟ್ಟೆಯಲ್ಲಾ ! ಇಲ್ಲಿ ಬಂದಿದ್ದ ಕ್ಷತ್ರಿಯನು ಎಷ್ಟು ಧರ್ಮಾತ್ಮ ನೋ ಅದನ್ನೂ ನೀನು ತಿಳಿದುಕೊಳ್ಳದೆ ಹೀಗೆ ಶಾಪವನ್ನು ಕೊಡಬಹುದೆ ? ಅಯ್ಯೋ ! ಇನ್ನೂ ನಿನ್ನ ಬುದ್ಧಿಯು ರಾಗದ್ವೇಷಾದಿಗಳನ್ನು ಬಿಟ್ಟಿಲ್ಲವೆ ? ಒಂದುವೇಳೆ ರಾಜರು ಪ್ರಜೆಗಳಿಗೆ ಅಪಕಾರವನ್ನು ಮಾಡಿದರೂಕೂಡ, ಪ್ರ ಜೆಗಳುಮಾತ್ರ ರಾಜರವಿಷಯದಲ್ಲಿ ದ್ರೋಹವನ್ನೆಣಿಸಬಾರದು. ರಾಜನನ್ನು ಪ್ರತ್ಯಕ್ಷ ಪಿಷ್ಟವೆಂದೇ ಭಾವಿಸಬೇಕು. ಪ್ರಜೆಗಳು ರಾಜರನ್ನು ಸರ್ವವಿಧದಿಂ ದಲೂ ಗೌರವಿಸಬೇಕು. ಪ್ರಜೆಗಳೆಲ್ಲರೂ ಶತ್ರುದುಸ್ಸಹವಾದ ಆ ರಾಜತೇಜ ಸ್ಸಿನಿಂದಲೇ ರಕ್ಷಿಸಲ್ಪಡುವರು. ಇವರಿಗೆ ಸಮಸ್ತ ಭಯವೂ ಆ ರಾಜರಿಂದಲೇ ನೀಗಿ, ಅವರಿಂದಲೇ ಸೌಖ್ಯವುಂಟಾಗುವುದು. ಆತನ ಪ್ರಜಾವರ್ಗದಲ್ಲಿಸೇರಿದ ನಾವೇ ಆತನಿಗೆ ಶಾಪಕೊಡುವುದೆಂದರೇನು? ಲೋಕಕ್ಷೇಮ'ಕ್ಕಾಗಿ ಕಷ್ಟ ಪಡುತ್ತಿರುವ ರಾಜನನ್ನು ಮರಣದಂಡನೆಗೆ ಗುರಿಮಾಡಬಹುದೆ? ವಿಷ್ಯ ಶದಿಂದ ರಾಜ್ಯವಾಳುತ್ತಿರುವ ರಾಜನಿಲ್ಲದಮೇಲೆ ಪ್ರಜೆಗಳಿಗೆ ಕ್ಷೇಮವೆಲ್ಲಿ ? ತೋಳಗಳ ಹಿಂಡಿನಲ್ಲಿ ಸಿಕ್ಕಿದ ಕುರಿಯ ಮಂದೆಯಂತೆ ಕ್ಷಣಮಾತ್ರದಲ್ಲಿಯೇ ನಾಶಹೊಂದುವರಲ್ಲವೆ? ವತ್ಸ! ರಾಜನಿಲ್ಲದ ರಾಜ್ಯದ ಸ್ಥಿತಿಯನ್ನು ಕೇಳಬೇಕೆ? ಪ್ರಜೆಗಳೆಲ್ಲರೂ ಚೋರಪ್ರಾಯರಾಗಿ, ಒಬ್ಬರ ಧನವನ್ನು ಮತ್ತೊಬ್ಬರು ಬಲಾ ತಾರದಿಂದಲೂ, ಮೋಸದಿಂದಲೂ ಅಪಹರಿಸುವರು.ಒಬ್ಬರಿಗೊಬ್ಬರು ಹೊ ಡೆದಾಡಿ ಸಾಯುವರು. ಸ್ತ್ರೀಯರನ್ನೂ, ಪಶುಗಳನ್ನೂ ಬಲಾತ್ಕಾರದಿಂದ ವಶ