ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೨ ಶ್ರೀಮದ್ಭಾಗವತವು fಅಧ್ಯಾ. ೧೮. ಡಿಸಿಕೊಳ್ಳುವರು. ವರ್ಣಾಶ್ರಮಾಚಾರಗಳೊಡನೆ ವೈದಿಕಕರ್ಮಗಳೆಲ್ಲವೂ ಕೆಟ್ಟು ಹೋಗುವುವು. ಮನುಷ್ಯರಲ್ಲಿರುವ ಆರ್ಯಧರ್ಮಗಳೆಲ್ಲವೂ ನಶಿಸುವುವು. ಹೀಗೆ ಧರ್ಮಕ್ಕೆ ದಾರಿಯಿಲ್ಲದುದರಿಂದ ಪ್ರಜೆಗಳೆಲ್ಲರೂ ಅರ್ಥಕಾಮಗಳಲ್ಲಿಯೇ ದುರಾಸೆಯುಳ್ಳವರಾಗುವರು. ಇದರಿಂದ ಮನುಷ್ಯಜಾತಿಯೆಲ್ಲವೂ ನಾಯಿಗ ಳಂತೆಯೂ, ಕಪಿಗಳಂತೆಯೂ ಒಂದಾಗಿ ಕಲೆತು ಜಾತಿಭೇದಗಳಿಲ್ಲದೆ ಸಂಕಿ ರ್ಣವಾಗುವುದು. ಇವೆಲ್ಲಕ್ಕೂ ಅವಕಾಶಕೊಡದೆ ಪ್ರಜೆಗಳನ್ನು ಸರಿಯಾದ ದಾರಿಯಲ್ಲಿಟ್ಟು ಕಾಪಾಡುವ, ಲೋಕಕ್ಷೇಮಕರನಾದ ರಾಜನನ್ನು ಕೊಲ್ಲುವುದರಿಂದ ಮಹಾಪಾಪವು ಸಂಭವಿಸದೆ ಬಿಡದು. ಈಗ ನೀನು ಶಾಪ ವನ್ನು ಕೊಟ್ಟುದರಿಂದ ಆ ಪಾಪವನ್ನೆಲ್ಲಾ ನೀನೇ ಕಟ್ಟಿಕೊಂಡಂತಾಯಿ ತಲ್ಲವೆ ? ಕುಮಾರಾ ! ಈಗ ಬಂದಿದ್ದವನು ಯಾರೆಂದು ಬಲ್ಲೆ ? ಪರಮಧ ಮಾತ್ಯನಾದ ಪರೀಕ್ಷೆ ದ್ರಾಜನಲ್ಲವೆ ? ಅವನನ್ನು ಸಾಮಾನ್ಯರಾಜನೆಂದು ಭಾವಿಸಬೇಡ. ಉತ್ತಮವಾದ ಭರತವಂಶದಲ್ಲಿ ಹುಟ್ಟಿದವನು. ಕೆಟ್ಟು ಹೋ ಗಿದ್ದ ವರ್ಣಾಶ್ರಮಧರ್ಮಗಳೆಲ್ಲವನ್ನೂ ತಿರುಗಿ ಸ್ಥಾಪಿಸಿದನು, ಉದಾರ ಕೀರ್ತಿಯುಳ್ಳವನು.ಸಕಲರಾಜಸಾರ್ವಭೌಮನು. ವಿಧ್ಯುಕ್ತವಾಗಿ ಆನೇಕಾಶ್ ಮೇಧಗಳನ್ನು ನಡೆಸಿದವನು. ಪರಮಭಾಗವತೋತ್ತಮನು, ಅಂತಹ ಮ ಹಾನುಭಾವನು ದಾಹದಿಂದ ಪೀಡಿತನಾಗಿ ನೀರಿಗೋಸ್ಕರ ನಮಾಶ್ರಮಕ್ಕೆ ಬಂದಾಗ, ನಾವು ಆತನಿಗೆ ನೀರನ್ನು ಕೊಟ್ಟು ಸತ್ಕರಿಸುವುದುಚಿತವೆ ? ಶಾಪ ವನ್ನು ಕೊಟ್ಟು ಕೊಲ್ಲುವುದುಚಿತವೆ? ನೀನೇ ಇದನ್ನು ಯೋಚಿಸು.” ಎಂದು ಹೇಳಿ ಭಗವಂತನನ್ನು ಪ್ರಾರ್ಥಿಸುವನು, 'ಎಲೈ ದೇವದೇವನೆ : ಬಾಲನಾದ ನನ್ನ ಮಗನು, ವಿವೇಕಶೂನ್ಯನಾಗಿ, ತನ್ನ ಬುದ್ದಿ ಚಾಪಲ್ಯದಿಂದ ತಕ್ಕಷ್ಟು ಅಪ ರಾಧವಿಲ್ಲದಿದ್ದರೂ ನಿನ್ನ ಭಕ್ತನನ್ನು ಶಪಿಸಿರುವನು. ಎಲೈ ದಯಾಸಮುದ್ರನೆ! ನನ್ನಲ್ಲಿ ಕೃಪೆಯಿಟ್ಟು, ಈ ಬಾಲವನ್ನು ಮನ್ನಿಸಬೇಕು. ರಾಜದ್ರೋಹದಿಂದುಂ ಟಾಗುವ ಪಾಪವು ನಮಗೆ ಸಂಭವಿಸದಂತೆ ರಕ್ಷಿಸಬೇಕು. ಹೇ ಕೃಷ್ಣಾ ! ಹೇಮುಕುಂದಾ ! ನಿನಗೆ ನಮಸ್ಕಾರವು. ಲೋಕದಲ್ಲಿ ಭಾಗವತೋತ್ತಮರು, ತಮ್ಮನ್ನು ಬೇರೊಬ್ಬರು ತಿರಸ್ಕರಿಸದರೂ, ವಂಚಿಸಿದರೂ, ನಿಂದಿಸಿದರೂ, ಶಪಿಸಿದರೂ ಹೊಡೆದರೂ, ಸಹಿಸಿಕೊಳ್ಳುವರೇಹೊರತು, ಕೋಪಿಸಿ ಪ್ರತ್ಯ.