ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧೯.] ಪ್ರಥಮಸ್ಕಂಧವು. ೨೦೫ ಮರು, ಉಚಥ್ಯ, ಇಂದ್ರಪ್ರಮದ, ಇಧ್ಯವಾಹ, ಮೇಧಾತಿಥಿ, ದೇವಲ, ಆರ್ಟ್ಸ್ಷ್ಣ , ಭಾರದ್ವಾಜ, ಗೌತಮ, ಪಿಪ್ಪಲಾದ, ಮೈತ್ರೇಯ, ಔತ್ವ, ಕವಷ, ಅಗಸ್ಯ, ವ್ಯಾಸ, ನಾರದರೇ ಮೊದಲಾದ ಮಹರ್ಷಿಗಳೆಲ್ಲರೂ ಬಂದು ನೆರೆದರು. ಇನ್ನೂ ಬೇರೆಬೇರೆ ದೇವರ್ಷಿಗಳೂ, ಬ್ರಹ್ಮರ್ಷಿಗಳೂ, ರಾಜರ್ಷಿಗಳೂ, ಆರುಣಾದಿಪೀಶ್ವರರೂ ಆ ಪರೀಕ್ಷಿತನ್ನು ನೋಡಬೇಕೆಂ ಬ ಕುತೂಹಲದಿಂದ ಬಂದರು.ಇವರೆಲ್ಲರೂ ಬಂದುದನ್ನು ನೋಡಿ ಪರೀಕ್ಷೆ ಎ ಜನು, ಅವರನ್ನಿ ಬರುಗೊಂಡು ಪೂಜಾದಿಗಳಿಂದ ಸತ್ಕರಿಸಿ ನಮಸ್ಕರಿಸಿದನು. ಎಲ್ಲರೂ ಸುಖಾಸೀನರಾಗಿ ಕುಳಿತಮೇಲೆ, ಮತ್ತೊಮ್ಮೆ ಅವರೆಲ್ಲರನ್ನೂ ನಮಸ್ಕರಿಸಿ, ಆ ಮಹಾತ್ಮರ ಸಭೆಗಿದಿರಾಗಿ ಕೈಮುಗಿದು ನಿಂತು, ನಿಷ್ಠ ಲ್ಮಷವಾದ ಮನಸ್ಸಿನಿಂದ ತನ್ನ ಉದ್ದೇಶವನ್ನು ಆವರಲ್ಲಿ ಹೀಗೆಂದು ವಿಜ್ಞಾ ಪಿಸಿಕೊಳ್ಳುವನು. ಈ ಎಲೈ ಮಹರ್ಷಿಗಳೇ ! ನನ್ನ ಭಾಗ್ಯವೇ ಭಾಗ್ಯವು ! ರಾಜಕುಲದಲ್ಲಿ ನಮ್ಮ ಕುಲವೇ ಧನ್ಯವು, ಹಾಗಿಲ್ಲದಪಕ್ಷದಲ್ಲಿ ನಿಮ್ಮಂತಹ ಮಹಾತ್ಮರ ಅನುಗ್ರಹಕ್ಕೆ ನಾವು ಪಾತ್ರರಾಗುವುದೆಂದರೇನು ? ರಾಜ ಕುಲದವರ ಕಾರವೇ ಬಹಳ ನಿಂದನೀಯವಾದುದು, ನಿಮ್ಮಂತಹ ಬ್ರಾಹ್ಮ ಸೋತ್ತಮರ ಪಾದಸೇವೆಯಿಂದುಂಟಾಗತಕ್ಕ ಪರಿಶುದ್ಧಿಗೂ, ನಿಂದ್ಯ ವಾದ ಈ ರಾಜವಂಶಕ್ಕೂ ಪರಸ್ಪರಸಂಬಂಧವು ಲಭಿಸುವುದೇ ದುರ್ಲಭವ ಲ್ಲವೆ? ಆಹಾ! ಇದಲ್ಲವೇ ಆತ್ಮರವು. ನಾನು ಭಯಂಕರವಾದ ಸಂಸಾರಪಾಶ ದಲ್ಲಿ ಸಿಕ್ಕಿ, ಆದರೆ ಬಾಧೆಯನ್ನು ತಪ್ಪಿಸಿಕೊಳ್ಳಲಾರದೆ ಇದೇಹವನ್ನು ಬಿಡುವು ದಕ್ಕೆ ತಕ್ಕ ಮಾರ್ಗವಾವುದೆಂದು ಚಿಂತಿಸುತ್ತಿರುವಸಮಯಕ್ಕೆ ಸರಿಯಾಗಿ, ನಗೆ ಬ್ರಾಹ್ಮಣಶಾಪವೊಂದು ಮುಕ್ತಿ ಕಾರಣವಾಗಿ ಬಂದೊದಗಿತು, ಅಹಂ ಕಾರಮಮಕಾರಗಳಿಂದ ಬೀಗಿ ಮೆರೆಯುತಿದ್ದ ನನ್ನಲ್ಲಿ, ಆ ಶ್ರೀಹರಿಯೇ ಕರುಣಿಸಿ, ಈ ಬಾಹ್ಮಣಶಾಪವೆಂಬ ನೆವದಿಂದ ಸರಸಂಗಪರಿತ್ಯಾಗವಾಗು ವಂತೆ ಮಾಡಿದನು.ಎಲೈ ಮಹರ್ಷಿಗಳೆ!ಶೀಘ್ರದಲ್ಲಿಯೇ ನೀವು ನನಗೆ ಅಭಯ ವನ್ನು ಕೊಟ್ಟು ರಕ್ಷಿಸಬೇಕು. ಮಹಾತ್ಮರಾದ ನೀವೂ, ಈಗಂಗಾದೇವಿಯೂ ಭಗವಂತನಲ್ಲಿಯೇ ದೃಢಮನಸ್ಸುಳ್ಳ ನನ್ನನ್ನು ನಿಮ್ಮ ಸೇವಕನನ್ನಾಗಿ ಗ್ರಹಿಸ ಬೇಕು. ಬ್ರಾಹ್ಮಣಶಾಪದಿಂದ ಪ್ರೇರಿತನಾದ ತಕ್ಷಕನು ತನಗಿಷ್ಟಬಂದಂತೆ