ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨04 ಶ್ರೀಮದ್ಭಾಗವತವು [ಅಧ್ಯಾ ೧೯ : ನನ್ನನ್ನು ಕಚ್ಚಿದರೂ ಕಚ್ಚಲಿ ! ಅದಕ್ಕಾಗಿ ನಾನು ಹೆದರುವವನಲ್ಲ. ಆದರೆ ಅದುವರೆಗೂ ನೀವು ನನ್ನ ಕಿವಿಗೆ ಬೀಳುವಂತೆ ವಿಷ್ಣು ಕಥೆಗಳನ್ನು ಗಾನಮಾ ಡುತ್ತ ನನ್ನನ್ನು ದರಿಸಬೇಕು. ಭಗವಂತನಲ್ಲಿ ಭಕ್ತಿಯೂ, ಆತನ ಭಕ್ತರಲ್ಲಿ ಅನುರಾಗವೂ ನನಗೆ ದೃಢವಾಗಿ ಹುಟ್ಟುವಂತೆ ಅನುಗ್ರಹಿಸಬೇಕು. ಇನ್ನು ಮುಂದಿನ ಜನ್ಮಗಳಲ್ಲಿಯೂ ನನಗೆ ಆ ಶ್ರೀವಿಷ್ಣುವಿನಲ್ಲಿ ಭಕ್ತಿಯೂ, ಆ ಶ್ರೀ ಹರಿಯ ಗುಣಕೀರ್ತನಗಳನ್ನು ಕೇಳುವುದರಲ್ಲಿ ಆಸಕ್ತಿಯೂ, ಆಪರಮಾತ್ಮನ ಪಾದಸೇವೆಯನ್ನು ಮಾಡುವ ಭಾಗ್ಯವೂ ಲಭಿಸುವಂತೆ ಅನುಗ್ರಹಿಸಬೇಕು. ಎಂದು ಬಾಂಜಲಿಯಾಗಿ ಪ್ರಾರ್ಥಿಸಿ ಗಂಗೆಯ ದಕ್ಷಿಣತೀರದಲ್ಲಿ ಉತ್ತರಾಭಿ ಮುಖನಾಗಿ ಪೂರೈಾಗ್ರವಾದ ದರ್ಭಾಸನದಲ್ಲಿ ಕುಳಿತನು.ಆತನದೃಢನಿಶ್ಚಯ ವನ್ನು ಮಹರ್ಷಿಗಳೆಲ್ಲರೂ ಕೊಂಡಾಡುತಿದ್ದರುಇದೇ ಸಮಯದಲ್ಲಿ ದೇವ ತೆಗಳು ಪರಮಸಂತೋಷದಿಂದ ದೇವದುಂದುಭಿಗಳನ್ನು ನುಡಿಸುತ್ತ ಆಕಾಶ ದಿಂದ ಪುಷ್ಟವರ್ಷಗಳನ್ನು ಕರೆದರು.ಅಲ್ಲಿ ಬಂದಿದ್ದ ಮಹರ್ಷಿಗಳೆಲ್ಲರೂಪರಿಕ್ಷಿ ದ್ರಾಜನ ಗುಣಾತಿಶಯಗಳನ್ನು ನೋಡಿ, “ಭಲೆ, ಭಲೆ” ಎಂದು ಕೊಂಡಾ ಡುತ್ತ, ಆತನನ್ನು ಕುರಿತು ಎಲೈ ರಾಜಶ್ರೇಷ್ಟನೆ ! ಈಗ ನೀನು ಭಗವ ತಾನ್ನಿಧ್ಯವೊಂದನ್ನೇ ಅಪೇಕ್ಷಿಸಿ, ಸಮಸ್ತರಾಜರಿಗೂ ಆಸೆಯನ್ನು ಹುಟ್ಟಿಸ ತಕ್ಕ ಸಾಲ್ವಭೌಮಸಿಂಹಾಸನವನ್ನೇ ಬಿಟ್ಟು ಬಂದೆಯಲ್ಲವೆ ? ಯಾವಾಗ ಲೂ ಶ್ರೀಕೃಷ್ಣಪಾದಸೇವೆಯಲ್ಲಿ ನಿರತರಾದ ನಿನ್ನಂತಹ ಭಕ್ತರು ಈಕಾರ ವನ್ನು ನಡೆಸುವದೇನೂ ಆಶ್ಚರವಲ್ಲ” ಎಂದು ಹೇಳಿ, ತಮ್ಮೊಳಗೆ ತಾವು * ಭಗವದ್ಭಕ್ತರಲ್ಲಿ ದೃಢವಿಶ್ವಾಸವುಳ್ಳ ಈತನು, ಈ ದೇಹವನ್ನು ಬಿಟ್ಟು, ಶುದ್ಧಸತ್ವಮಯವಾಗಿಯೂ, ಅಪಹತ ಪಾಪತ್ವವೇ ಮೊದಲಾದ ಎಂಟು ಗುಣಗಳ ಉತ್ಪತ್ತಿ ಸ್ಥಾನವಾಗಿಯೂ ಇರುವ ಪರಲೋಕವನ್ನು ಹೊಂದು ವವರೆಗೆ, ನಾವೆಲ್ಲರೂ ಇವನ ಸಮೀಪದಲ್ಲಿಯೇ ಇರುವೆವು ” ಎಂದರು. ನಿಷ್ಕಪಟವಾಗಿಯೂ, ಅಮೃತಪ್ರಾಯವಾಗಿಯೂ ಇರುವ ಆ ಮಹರ್ಷಿಗಳ ವಾಕ್ಯವನ್ನು ಕೇಳಿದೊಡನೆ, ಪರೀಕ್ಷಿದ್ರಾಜನಿಗೆ ವಿಶೇಷ ಸಂತೋಷವು ಹು ಟಿತು. ತಿರುಗಿ ರಾಜನು ಅವರೆಲ್ಲರಿಗೂ ನಮಸ್ಕರಿಸಿ ಶ್ರೀಹರಿಚರಿತ್ರವನ್ನು ಕೇಳಬೇಕೆಂಬ ಕುತೂಹಲದಿಂದ ಹೀಗೆಂದು ಪ್ರಾರ್ಥಿಸುವನು,“ಎಲೈ ಮಹ