ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೮ ಶ್ರೀಮದ್ಭಾಗವತವು [ಅಧ್ಯಾ, ೧೯, ಲೂ, ಸ್ಪಷ್ಟವಾಗಿ ಕಾಣುವ ತ್ರಿವಳಿಗಳಿಂದಲೂ ಕೂಡಿದ ಆತನ ಉದರ ದೇಶವು ಅತಿಸುಂದರವಾಗಿದ್ದಿತು. ಆತನು ಕಾಮಕ್ರೋಧಾದಿಗಳನ್ನು ಹೇ ಗೋಹಾಗೆ, ಮೈಮೇಲಿನ ಬಟ್ಟೆಯನ್ನೂ ಬಿಟ್ಟು, ಯಥೇಚ್ಛವಾಗಿ ತಿರುಗುತ್ತಿದ್ದ ನು. ಆತನ ಬಿಚ್ಚಿದ ಕೇಶಪಾಶಗಳು ಮೈಯೆಲ್ಲವನ್ನೂ ಮರೆಸುವಂತೆ ಕದರಿ ದ್ದುವು. ಆತನ ಉದ್ದವಾದ ತೋಳುಗಳು ಮೊಳಕಾಲಿನವರೆಗೆ ನೀಡಿದ್ದುವು ಆತನ ದಿವ್ಯತೇಜಸ್ಸು ನೋಡುವುದಕ್ಕೆ ಬಹಳ ರಮ್ಯವಾಗಿ ಕಾಣುತಿತ್ತು. ಆ ವನ ಸೌಂದಯ್ಯವು ಸಮಸ್ತಭಾಮಿನಿಯರಿಗೂ ಮೋಹಜನಕವಾಗಿದ್ದರು. ಇಂ ತಹ ಮಹಾನುಭಾವನಾದ ಶುಕಮುನಿಯನ್ನು ಕಂಡೊಡನೆ, ಅಲ್ಲಿದ್ದ ಮಹರ್ಷಿ ಗಳೆಲ್ಲರೂ ತಮ್ಮ ಮೃ ಆಸನಗಳಿಂದ ಮೇಲೆದ್ದು ನಿಂತು, ಅವನನ್ನು ಗೌರ ವಿಸಿ ಬರಮಾಡಿಕೊಂಡರು. ಹಾಗೆಯೇ ಪರೀಕ್ಷಿನ್ಮಹಾರಾಜನೂಕೊಡ, ಪ್ರ ತ್ಯುತ್ಥಾನಮಾಡಿ ನಮಸ್ಕರಿಸಿ, ಯಥಾವಿಧಿಯಾಗಿ ಆ ಶುಕಮುನಿಯನ್ನು ಪೂಜಾದಿಗಳಿಂದ ಸತ್ಕರಿಸಿದನು. ಎಲೈ ಶೌನಕಾದಿಗಳೇ ! ಮೈಮೇಲೆ ಬಟ್ಟೆ ಯಿಲ್ಲದೆ ತಲೆಕೂದಲನ್ನು ಕೆದರಿಕೊಂಡು, ಹುಚ್ಚಿನಂತೆ ತಿರುಗುತಿದ್ಯ ಆ ಶುಕ ಮುನಿಯನ್ನು ಸುತ್ತಿ ಮುತ್ತಿಕೊಂಡು, ಆತನನ್ನು ಹಾಸ್ಯಮಾಡುತ್ತ, ಅವನ ಹಿಂದೆ ಬರುತಿದ್ದ ಅಜ್ಞರಾದ ಅನೇಕಬಾಲಕರೂ, ಸ್ತ್ರೀಯರೂ, ಅಲ್ಲಿ ಅನೇಕ ಮಹರ್ಷಿಗಳ ನಡುವೆ ಆತನಿಗುಂಟಾದ ಮಹಾಗೌರವವನ್ನೂ, ಸತ್ಕಾರಗಳ ನ್ಯೂ ನೋಡಿದರು.ಆಮೇಲೆ, ಅವರಿಗೂ ಆತನು ಯಾರೋ ಮಹಾತ್ಮನೆಂಬ ಭಾವವು ಹುಟ್ಟಿತು. ಒಡನೆಯೇ ಅವರೆಲ್ಲರೂ ಭಯದಿಂದ ಹಿಂತಿರುಗಿಬಿಟ್ಟರು ಆಮೇಲೆ ಪರೀಕ್ಷಿದ್ರಾಜನು ಶುಕಸಿಗೆ ಉನ್ನ ತಾಸನವೊಂದನ್ನು ಸಮರ್ಪಿಸಿ, ತಾನೂ ತನಗೆ ಯೋಗ್ಯವಾದ ಆಸನದಲ್ಲಿ ಕುಳಿತನು. ಮಹಾತ್ಮರಲ್ಲಿಯೂ ಮಹಾತ್ಮನಾದ ಆ ಶುಕನು, ಅನೇಕದೇವರ್ಷಿಗಳಿಂದಲೂ, ರಾಜರ್ಷಿಗಳಿಂದ ಲೂ, ಮಹರ್ಷಿಗಳಿಂದಲೂ ತುಂಬಿದ ಆ ಮಹಾಸಭೆಯಲ್ಲಿ ಪರೀಕ್ಷಿದ್ರಾಜನು ತನಗೆ ಕೊಟ್ಟ ಪೀಠದಲ್ಲಿ ಕುಳಿತು, ಅನೇಕಗ್ರಹನಕ್ಷತ್ರಗಳಿಂದ ತುಂಬಿದ ಆಕಾಶದಲ್ಲಿ ಪೂರ್ಣಕಳೆಗಳಿಂದ ಪ್ರಕಾಶಿಸುವ ಚಂದ್ರನಂತೆ ಶೋಭಿಸುತ್ತಿದ್ದ ನು. ಹೀಗೆ ಕೇವಲಶಾಂತಸ್ವರೂಪನಾಗಿಯೂ, ಅವಿದ್ಯಾಸಂಬಂಧದಿಂದುಂ ಟಾಗುವ ಜ್ಞಾನಸಂಕೋಚವಿಲ್ಲದೆ, ಮಹಾಥೀಮಂತನಾಗಿಯೂ ಇರುವ