ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧೯೬) ಪ್ರಥಮಸ್ಕಂಧವು. ೨೪೯ ಆ ಶುಕಮಹಾಮುನಿಯು ಸಭಾಮಧ್ಯದಲ್ಲಿ ಕುಳಿತಿದ್ದಾಗ, ಪರೀಕ್ಷೆ ದ್ರಾ ಜನು ವಿನಯಭಕ್ತಿಗಳಿಂದ ಮೆಲ್ಲಗೆ ಆತನ ಬಳಿಗೆ ಬಂದು, ನಮಸ್ಕರಿಸಿ, ಬ ಬ್ಯಾಂಬಲಿಯಾಗಿ ಅವನ ಮುಂದೆ ನಿಂತು ಮೃದುಮಧುರವಾಕ್ಯಗಳಿಂದ ವಿ ಜ್ಞಾಪಿಸುವನು. 'ಎಲೈ ಮಹಾಮುನೀಂದ್ರನೆ! ಕ್ಷತ್ರಬಂಧುಗಳಾದ ನಾವು ನಿಮ್ಮಂತವರ ಪಾದಸೇವಕರು' ನಿಮ್ಮ ದರ್ಶನದಿಂದ ಈಗ ನಾನು ಕೃತಾ ರ್ಥ ನಾದೆನು. ತಮ್ಮ ಸೇವೆಯಿಂದ ನನ್ನ ಪಾಪಗಳೆಲ್ಲವೂ ಸಿಗಿದುವು. ಈ ಮೃತಸ ಮಹಾತ್ಮರು ನಮ್ಮಲ್ಲಿಗೆ ಆತಿಥಿಭಾವದಿಂದ ಬಂದುದು ನಮ್ಮ ಪೂರೈಪುಣ್ಯವಲ್ಲದೆ ಬೇರೆಯಲ್ಲ.ತಮ್ಮಂತವರು ಸ್ಮರಿಸಿದಮಾತ್ರದಿಂದಲೇ ಗ್ಯ ಹಸ್ಥರ ಮನೆಗಳು ಪರಮಪವಿತ್ರಗಳಾಗುವುದೆಂದು ಹೇಳಬಹುದು. ಹೀಗಿರು ವಾಗೆ ಈಗ ನನಗೆ ತಮ್ಮ ಪ್ರತ್ಯಕ್ಷದರ್ಶನವೂ, ತಮ್ಮೊಡನೆ ಸಂಭಾಷಣವೂ ತಮ್ಮ ಪಾದಸೇವೆಯನ್ನು ಮಾಡತಕ್ಕ ಭಾಗ್ಯವೂ ಲಭಿಸಿದಮೇಲೆ, ನನ್ನ ಜನ್ಮವು ಪವಿತ್ರವಾಯಿತೆಂಬುದನ್ನು ಕೇಳಬೇಕೆ? ಶ್ರೀಮಹಾವಿಷ್ಣುವಿನ ಮುಂದೆ ರಾಕ್ಷಸರು ಹೇಗೋಹಾಗೆ ತಮ್ಮಂತಹ ಯೋಗಿಶ್ವರ ಸನ್ನಿಧಿ ಯಲ್ಲಿ ಎಂತಹ ಮಹಾಪಾತಕಗಳಾದರೂ ತಲೆಯೆತ್ತದಹಾಗೆ ಅಡಗಿಹೋಗು ವುವು. ಎಲೈ ಮಹಾತ್ಮನ! ಕೃಷ್ಣನುಪಾಂಡವರಿಗೆ ಹಿತನಾಗಿಯೂಬಂಧುವಾ ಗಿಯೂ ಇದ್ದು, ಸಮಂತವಾದ ಸಮಸ್ತಭೂಮಿಗೂ ಅವರನ್ನು ರಾಜರ ನಾ!) ಮಾಡಿದನಲ್ಲವೆ? ಅವರ ವಂಶದಲ್ಲಿ ಹುಟ್ಟಿದ ನನ್ನಲ್ಲಿಯೂ ಕೂಡ ಆ ಕೃ. ಷ್ಯನು ಅದೇ ವಿಧವಾದ ಬಂಧುವಾತ್ಸಲ್ಯವನ್ನು ತೋರಿಸುತ್ತಿರುವನೆಂಬುದರಲ್ಲಿ ಸ್ವಲ್ಪ ಮಾತ್ರವೂ ಸಂದೇಹವಿಲ್ಲ.ಹಾಗಿಲ್ಲದ ಪಕ್ಷದಲ್ಲಿ, ಬೇರೊಬ್ಬರಿಗೆ ತಿಳಿಯದ ಘನತೆಯುಳ್ಳ ನಿನ್ನ ದರ್ಶನವು ನಮ್ಮಂತಹ ಅಲ್ಪ ಮನುಷ್ಯರಿಗೆಲಭಿಸುವುದೆಂ ದರೇನು? ಮಹಾತ್ಮನಾದ ನಿನ್ನ ದರ್ಶನದಿಂದ ಈಗ ನನ್ನ ಕೋರಿಕೆಗಳೆಲ್ಲ ವೂ ಸಿದ್ಧಿಸಿದಂತೆಯೇ ಹೇಳಬಹುದು. ಆದರೆ ಯೋಗೀಶ್ವರರಿಗೂ ಗುರುವೆನಿ ಸಿಕೊಂಡ ನಿನ್ನಲ್ಲಿ ಒಂದುವಿಷಯವನ್ನು ಮಾತ್ರ ಕೇಳಿ ತಿಳಿಯಬೇಕೆಂದಿರುವೆ ನು. ಈಗಲೋ, ನಾಳೆಯೋ ಸಾಯುವುದಕ್ಕೆ ಸಿದ್ಧನಾಗಿರುವ ಮನುಷ್ಯನು, ಯಾವ ಉಪಾಯದಿಂದ ತನಗೆ ತಿರುಗಿ ಸಂಸಾರಸಂಬಂಧವಿಲ್ಲದಂತೆ ತಪ್ಪಿಸಿ ಕೊಳ್ಳಬಹುದು? ಅಂತವನು ಜಪಿಸಬೇಕಾದ ದೇನು ? ಇತರರಿಂದ ಕೇಳಬೇ 14