ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧೦ ಶ್ರೀಮದ್ಭಾಗವತವು (ಅಧ್ಯಾ. ೧೯. ಕಾದುದೇನು? ಅವನು ಪಠಿಸಬೇಕಾದುದೇನು? ಯಾವುದನ್ನು ಭಜಿಸಬೇಕು? ಇವೆಲ್ಲಕ್ಕೂ ವಿರುದ್ಧವಾಗಿ ಅವನು ನಡೆಸಬಾರದ ಕೃತ್ಯಗಳಾವುವು? ಅವೆಲ್ಲವ ನ್ಯೂ ನನಗೆ ತಿಳಿಸಬೇಕು. ಇಂದಿಗೆ ಏಳನೆಯದಿನದಲ್ಲಿ ನಾನು ಸಾಯುವುದಕ್ಕೆ ಸಿದ್ಧನಾಗಿರುವೆನು. ಇಷ್ಟರೊಳಗಾಗಿ ನನಗೆ ಮೋಕ್ಷಪಾಯವನ್ನು ಅನು ಗ್ರಹಿಸಬೇಕು. ಎಲೈ ಮಹಾತ್ಮನೆ ! ನೀನು ಗೃಹಸ್ಥರ ಮನೆಗಳಲ್ಲಿ ಪ್ರವೇತಿ ಸಿದರೂ ಕೂಡ, ಹಸುಗಳನ್ನು ಹಾಲುಕರೆಯುವಷ್ಟು ಕಾಲವಾದರೂ ಅಲ್ಲಿ ನೆಲೆಯಾಗಿ ನಿಲ್ಲುವವನಲ್ಲ ! ಅಂತಹ ನೀನು ಈಗ ನನಗೆ ಈ ಅವ ಸಾನಕಾಲದಲ್ಲಿ ದರ್ಶನವನ್ನು ಕೊಟ್ಟುದೇ ನನ್ನ ಪೂರೈಪುಣ್ಯವಲ್ಲವೆ” ಎಂದ ನು. ಹೀಗೆ ಪ್ರಶ್ನೆ ಮಾಡುತ್ತಿರುವ ಪರಿಕ್ಷಿದ್ರಾಜನನ್ನು ನೋಡಿ, ಧರ್ಮಜ್ಞ (ನಾಗಿಯೂ, ಪೂಜ್ಯನಾಗಿಯೂ ಇರುವ ಶುಕಮಹಾಮುನಿಯು, ಮೃದು ವಾಕ್ಯದಿಂದ ಆತನಿಗೆ ಪ್ರತ್ಯುತ್ತರವನ್ನು ಕೊಡುವನು, ಇಲ್ಲಿಗೆ ಹತ್ತೊಂ ಬತ್ತನೆಯ ಅಧ್ಯಾಯವು. ಪ್ರಥಮಸ್ಕಂಧವು ಸಮಾಪ್ತವು.