ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಮದ್ಭಾಗವತಮಾಹಾತ್ಮವು. ಗೂ ಅವರ ಕಿವಿಯಲ್ಲಿ ವೇದವೇದಾಂತವಾಕ್ಯಗಳನ್ನೂ ಗೀತೆಗಳಿನ್ನೂ ಬೋಧಿ ಸಿದನು. ನಾರದನು ಎಷ್ಟಾವರ್ತಿ ಅವರ ಕಿವಿಗಳಲ್ಲಿ ಮಂತ್ರಗಳನ್ನು ಪದೇತಿ ಸಿದರೂ, ಅವರು ಕಣ್ಣುಗಳನ್ನು ತೆರೆಯಲಾರದೆ ಮರದ ತುಂಡುಗಳಂತೆ ನಿಶ್ಲೇಷ್ಯರಾಗಿಯೇ ಬಿಟ್ಟಿದ್ದರು. ಅದನ್ನು ನೋಡಿ ನಾರದನು ಮುಂದೇನು ಮಾಡಬೇಕೆಂದು ತೋರದೆ ಚಿಂತಾಕ್‌ಲನಾಗಿ ಹರಿಧ್ಯಾನವನ್ನು ಮಾಡು ತನಿಂತಿದ್ದನು. ಇಷ್ಟರಲ್ಲಿ ಆಕಾಶದಲ್ಲಿ ಆಶರೀರವಾಕ್ಕೊಂದು ಮಡಿಯಿತು “ಎಲೆ ಮಹರ್ಷಿಯೆ? ಚಿಂತಿಸಬೇಡ ! ನಿನ್ನ ಪ್ರಯತ್ನವು ಕೈಗೂಡುವುದರಲ್ಲಿ ಸಂದೇಹವಿಲ್ಲ. ಇದಕ್ಕಾಗಿ ನೀನೊಂದು ಸತ್ಕರ್ಮವನ್ನು ನಡೆಸಬೇಕಾಗಿರುವ ದು, ಆ ಕರ್ಮವಾವುದೆಂಬುದನ್ನು ಸಾಧುಶಿರೋಮಣಿಗಳಾದ ಕೆ. ವುಮಹಾ ತ್ಮರು ನಿನಗೆ ಉಪದೇಶಿಸುವರು. ಆ ಕರ್ಮವನ್ನು ನೀನು ನಡೆಸಿದೆಯಾದರೆ ಇವರ ವಾರ್ಧಕವೂ, ಇವರ ಸಿದ್ರೆಯೂ ಒಡನೆಯೇ ಸೀಗುವುದು. ಈಭಕ್ತಿ ಗೂ ಲೋಕದಲ್ಲಿ ಸತ್ವತೋಮುಖವಾದ ಪ್ರಸಾರವುಂಟಾಗುವುದು” ಹೀಗೆಂ ದು ಅಲ್ಲಿದ್ದವರೆಲ್ಲರಿಗೂ ಕೇಳುವಂತೆ ಆಕಾಶವಾಣಿಯು ನುಡಿಯಿತು. ಅದನ್ನು ಕೇಳಿ ನಾರದನಿಗೂ ಆಶ್ರವುಂಟಾಯಿತು. ಆದರೆ ಆಗ ನಾರದನಿಗೆ ಯಾ ರಿಂದ ತಾನು ಉಪದೇಶಹೊಂದಬೇಕೆಂಬ ವಿಷಯವು ಮಾತ್ರ ಸ್ಪಷ್ಟವಾಗಿ ತಿಳಿಯಲಿಲ್ಲ. ಹೀಗೆ ಗೂಢವಾಗಿ ಆಕಾಶವಾಣಿಯು ಸೂಚಿಸಿದ ಮಾರ್ಗವು ತನಗೆ ಹೇಗೆ ಕೈಗೂಡುವುದೆಂದು ತಿಳಿಯದೆ ಚಿಂತಿಸುತ್ತಿದ್ದನು. ಕೊನೆಗೆ ನಾರದನು ಅವರೆಲ್ಲರನ್ನೂ ಅಲ್ಲಿಯೇ ಬಿಟ್ಟು, ಒಂದೊಂದು ಪುಣ್ಯತೀರ್ಥಗಳಿ ಗೂ ಹೋಗಿ, ಆ ಮಹಾತ್ಮರಾರೆಂಬುದನ್ನು ಹುಡುಕುತ್ತ ಬಂದನು. ದಾರಿ ಯಲ್ಲಿ ಕಂಡಕಂಡಮಹರ್ಷಿಗಳೆಲ್ಲರನ್ನೂ ಪ್ರಶ್ನೆ ಮಾಡುತಿದ್ಮಮ.ಯಾರೂಅದ ರ ನಿಶ್ಚಯವನ್ನು ತಿಳಿಸಲಾರದೆಹೋದರು ಕೆಲವರು ಅಸಾಧ್ಯ ಕಾರಣವೆಂದು ನಿರಾಕರಿಸಿದರು. ಮತ್ತೆ ಕೆಲವರು ಈ ಮಾತನ್ನು ಕೇಳಿದೊಡನೆ ಮನದಿಂದ ಪರಾಜ್ಯಖರಾಗಿ ಹೋಗುತಿದ್ದರು. ಇವೆಲ್ಲವನ್ನೂ ನೋಡಿ ನಾರದನಿಗೆ ಮ ನಸ್ಸಿನಲ್ಲಿದ್ದ ಕಳವಳವು ಇನ್ನೂ ಹೆಚ್ಚಿತು. ಕೊನೆಗೆ ಕಠಿನವಾದ ತಪಸ್ಸಿನಿಂದ ಲಾದರೂ ತನ್ನ ಕಾಲ್ಯವನ್ನು ಸಾಧಿಸಬೇಕೆಂದು ನಿಶ್ಚಯಿಸಿ, ನಾರದನು ಬದರಿ ಕಾಶ್ರಮಕ್ಕೆ ಬಂದನು.ಇಷ್ಟರಲ್ಲಿ ಕೋಟಿಸೂರ್ಸಮಾನವಾದ ತೇಜಸ್ಸುಳ್ಳ