ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕ್ಷt R ಶ್ರೀ ಕ್ರಷ್ಣಾಯಪರಬ್ರಹ್ಮಣೇನಮಃ. ಶ್ರೀಮುಪ್ಪಾಗವತವು ದ್ವಿತೀಯಸ್ಕಂಧವು. ( ಹರಿಕೀರ್ತನಪ್ರಶಂಸೆ ಗಟ್ಯಾಂಗಚರಿತ್ರವು, * ಅಷ್ಟಾಂಗಯೋಗವಿವರಣೆ, ವಿರಾಡೂಪವರ್ಣನೆ. ಓ ಶೌನಕಾದಿಗಳೆ ! ಪರೀಕ್ಷಿದ್ರಾಜನು ಕೇಳಿದ ಪ್ರಶ್ನೆಗಳಿಗಾಗಿ ಶುಕ ಮುನಿಯು ಬಹಳಸಂತೋಷಗೊಂಡು, ಆತನನ್ನು ಕುರಿತು.(ಎಲೈ ರಾಜೇಂದ್ರ ನೆ ! ನೀನು ಕೇಳಿದ ಪ್ರಶ್ನವು ನಿನಗೆಮಾತ್ರವಲ್ಲದೆ ಸತ್ವಲೋಕಕ್ಕೂ ಹಿತಕ ರವಾದುದು. ಬಹಳಶ್ಚಾತ್ಯವಾದ ಪ್ರಶ್ನವನ್ನು ಕೇಳಿದೆ! ಈ ಪ್ರಶ್ನವು ಆ ತ್ಮಜ್ಞಾನಿಗಳಿಗೂ ಮೆಚ್ಚತಕ್ಕುದಾಗಿರುವುದು. ನೀನು ಕೇಳಿದ ವಿಷಯವು ಶ್ರವಣಮನನಾದಿಗಳಿಗೆ ಯೋಗ್ಯವಳಾದ ಅರ್ಥಗಳಲ್ಲಿ ಅತ್ಯುತ್ತಮವೆನಿಸಿರು ವುದು. ಎಲೈ ರಾಜನೆ ! ಮೊಕ್ಷಾಪೇಕ್ಷೆಯುಳ್ಳವರಿಗೆ ಪರಮಾತ್ಮ ತತ್ವವನ್ನು ತಿಳಿಯಬೇಕಾದುದೊಂದೇ ಕಾರವು. ಆತ್ಮತತ್ತ್ವವನ್ನು ತಿಳಿಯಲಾರದೆ ಐಹಿಕಾಮುಷ್ಟಿಕಫಲವೊಂದರಲ್ಲಿಯೇ ಆಸಕ್ತರಾಗಿರುವ ಗೃಹಸ್ಥರಿಗೆ, ಕೇಲಿ ತಿಳಿಯಬೇಕಾದ ವಿಷಯಗಳು ಬಹಳವಾಗಿರುವುವು. ಆದರೆ ಗೃಹಸ್ಯರಾದ ಮನುಷ್ಯರು ಆತ್ಮಜ್ಞಾನಕ್ಕಾಗಿ ಲೇಶಮಾತ್ರವೂ ಪ್ರಯತ್ನಿಸದೆ ಅಹೋ ರಾತ್ರವೂ ವ್ಯರ್ಥವಾಗಿ ಕಾಲವನ್ನು ಕಳೆದುಬಿಡುವರು. ರಾತ್ರಿಯ ಕಾಲಗ ಳನ್ನು ನಿದ್ರೆಯಿಂದಲೂ, ಮೈಥುನದಿಂದಲೂ ಕಳೆದುಬಿಡುವರು. ಹಗಲೆಲ್ಲ ವೂ ಕಟುಂಬಪೋಷಣೆಯಲ್ಲಿಯೂ, ಆರ್ಧಾರ್ಜನಚಿಂತೆಯಲ್ಲಿಯೂ ಕಳೆದು ಹೋಗುವುದು. ಇದರಿಂದ ಗೃಹಸ್ಥರಿಗೆ ಆತ್ಮಜ್ಞಾನದಲ್ಲಿ ಬುದ್ದಿ ಹುಟ್ಟುವುದೇ ಕಷ್ಟವು. ಜೀವಾತ್ಮನು ತನಗೆ ಪರಿಕರಗಳಾದ ದೇಹಾದಿಗಳಲ್ಲಿಯೂ,ಹೆಂಡತಿ ಮಕ್ಕಳು ಮೊದಲಾದ ಪರಿವಾರಗಳಲ್ಲಿಯೂ ವಿಶೇಷಾಸಕ್ತನಾಗಿ,ಅವರಲ್ಲಿರು