ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ. ೧.] ದ್ವಿತೀಯಸ್ಕಂಧವು. ೨೧೩ ವನ್ನು ಭಕ್ತಿಯಿಂದಭ್ಯಸಿಸಿದೆನು. ನೀನೂ ವಿಶೇಷವಾಗಿ ಭಗವದ್ಭಕ್ತಿಯುಳ್ಳವ ನಾದುದರಿಂದ, ಆ ಗ್ರಂಥವನ್ನೇ ನಿನಗುಪದೇಶಿಸುವೆನು ಕೇಳು ! ಆ ಗ್ರಂಥ ವನ್ನು ಶ್ರದ್ಧೆಯಿಂದ ಕೇಳುವವರಿಗೆ ವಿಷ್ಣುಭಕ್ತಿಯಲ್ಲಿ ತಾನಾಗಿಯೇ ಆಸಕ್ತಿ ಯು ಹುಟ್ಟುವುದು, ಮೋಕ್ಷಾಪೇಕ್ಷಿಯಾದ ನಿನಗೆ ತಪ್ಪದೆ ಮೋಕ್ಷಪ್ರಾಪ್ತಿ ಯುಂಟಾಗುವುದು. ಆಧ್ಯಾತ್ಮಿಕಾದಿತಾಪತ್ರಯಗಳಲ್ಲಿ ಬೇಸರವನ್ನು ಹೊಂ ಜ, ಮೋಕ್ಷದಲ್ಲಿ ಆಸೆಯಿಟ್ಟು, ಫಲಾಪೇಕ್ಷೆಯಿಲ್ಲದ ಕರಯೋಗದಲ್ಲಿ ನಿಮ್ಮ ರಾದವರಿಗೆ, ಶ್ರೀಹರಿಯ ನಾಮಸಂಕೀರ್ತನಗಳೂ, ಆತನ ಸ್ವರೂಪಚಿಂತನೆ ಯೂ ಇವೆರಡುಹೊರತು ಬೇರೆ ಮೋಕ್ಷಸಾಧನವಿಲ್ಲವು. ಇನ್ನು ಆರೇಳು ಜನಗಳೊಳಗಾಗಿ ಸಾಯುವುದಕ್ಕಿರುವ ನಾನು ಈ ಕಾವ್ಯವನ್ನು ಹೇಗೆತಾನೇ ಸಾಧಿಸಬಲ್ಲೆ” ನೆಂದು ನೀನು ಸಂದೇಹಿಸಬೇಕಾದುದಿಲ್ಲ. ಹೆಂಡತಿ ಮಕ್ಕಳು ಮೊದಲಾದ ದೇಹಾನುಬಂಧಗಳಲ್ಲಿಯೇ ವಿಶೇಷಾಸಕ್ತನಾಗಿರುವವನು, ಅನೇಕವರ್ಷಗಳವರೆಗೆ ಬದುಕಿದ್ದರೂ, ಆ ಆಯುಃಕಾಲವೆಲ್ಲವೂ ತಿಳಿಯದ ಹಾಗೆಯೇ ವ್ಯರವಾಗಿ ಕಳೆದುಹೋಗುವುದು. ಅಂತವನು ಎಷ್ಟು ಸಂವತ್ಸರ ಗಳವರೆಗೆ ಬದುಕಿದ್ದರೆ ತಾನೇ ಫಲವೇನು ? ಕಾಲವು ವರವಾಗಿ ಕಳೆದು ಹೋಗುವುದೆಂಬ ಪರಿಜ್ಞಾನವಿದ್ದವನಿಗೆ ಒಂದು ಮುಹೂರ್ತ ಮಾತ್ರವಿದ್ದರೆ ಸಾಕು ! ಆ ಒಂದುಮುಹೂರ್ತಕಾಲದಲ್ಲಿಯೇ ಮೋಕ್ಷಸಾಧನೆಯಲ್ಲಿ ಪ್ರಯ ತಿಸಿ, ಸಿದ್ಧಿಯನ್ನು ಪಡೆಯಬಹುದು. ಇದಕ್ಕೆ ನಿದರ್ಶನವಾಗಿ ಒಂದು ಪೂರೈಕಥೆಯನ್ನು ಹೇಳುವೆನು ಕೇಳು. , ಪೂರದಲ್ಲಿ ಖಟ್ವಾಂಗನೆಂಬ ರಾಜನೊಬ್ಬನಿದ್ದನು. ಆತನು ಸಪ್ತದ್ವೀ ಪಪರಿಮಿತವಾದ ಸಮಸ್ತಭೂಮಿಯನ್ನೂ ನಿರಂಕುಶವಾಗಿ ಕೈವಶಮಾಡಿ ಕೊಂಡು ಪಾಲಿಸುವಷ್ಟು ಬಲಾಡ್ಯನು, ಒಮ್ಮೆ ದೇವದಾನವರಿಗೆ ಯುದ್ಧವು ಸಂಭವಿಸಿದಾಗ, ದೇವತೆಗಳು ದಾನವರೊಡನೆ ಇದಿರಿಸಿ ನಿಲ್ಲಲಾರದೆ, ಈ ಖ ಬ್ಯಾಂಗನ ಸಹಾಯವನ್ನ ವೀಕ್ಷಿಸಿ ಬಂದರು. ಇವರ ಪ್ರಾರನೆಯಮೇಲೆ ಆ ರಾಜನು ದೇವತೆಗಳಕಡೆಗೆ ಸಹಾಯಕನಾಗಿ ನಿಂತು, ಯುದ್ಧಮಾಡಿ ದಾನ ವರನ್ನು ಜಯಿಸಿ ಬಂದನು. ಅದಕ್ಕಾಗಿ ದೇವತೆಗಳು ಸಂತೋಷಿಸಿ, ಆತನಿಗಿ ಪ್ರವಾದ ಯಾವ ವರವನ್ನು ಕೇಳಿದರೂ ತಾವು ಕೊಡುವುದಾಗಿ ವಾಗ್ದಾನ