ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧೪ ಶ್ರೀಮದ್ಭಾಗವತವು [ಅಭ್ಯಾ. ೧. ಮಾಡಿದರು. ಅದಕ್ಕಾರಾಜನು ಬಹಳಸಂತೋಷಗೊಂಡವನಾಗಿ (ಎಲೈ ದೇವತೆಗಳಿರಾ ! ಮುಂದೆ ನನಗೆ ಆಯುಃಕಾಲವೆಂಬುದನ್ನು ತಿಳಿಸಬೇಕು. ಇದೇ ನೀವು ನನಗೆ ಅನುಗ್ರಹಿಸಬೇಕಾದ ವರವು” ಎಂದು ಪ್ರಾಕ್ಕಿಸಿದನು, ಅದಕ್ಕಾ ದೇವತೆಗಳು ತಮ್ಮ ಧ್ಯಾನದೃಷ್ಟಿಯಿಂದಾಲೋಚಿಸಿ, “ಎಲೈ ರಾ ಜನೆ! ನಿನ್ನ ಆರ್ಯುಪರಿಮಾಣವು ಇನ್ನು ಮುಹೂರ್ತಮಾತ್ರವೇ ಉಳಿದಿರು ವುದು.”ಎಂದರು. ಇಮಾತನ್ನು ಕೇಳಿದೊಡನೆ ಖಟ್ವಾಂಗನು ವಿಮಾನವನ್ನೆರಿ ವೇಗದಿಂದ ತನ್ನ ಅಂತಃಪುರಕ್ಕೆ ಬಂದು, ಆಗಲೇ ತನ್ನ ರಾಜ್ಯಕೋಶಾದಿಗಳೆಲ್ಲ ವನ್ನೂ ತೊರೆದು, ದೃಢವಾದ ವೈರಾಗ್ಯವನ್ನು ವಹಿಸಿ. ಶ್ರೀಹರಿಯ ಪಾದಾ ರವಿಂದವೊಂದರಲ್ಲಿಯೇ ನಟ್ಟ ಮನಸ್ಸುಳ್ಳವನಾಗಿ, ಆ ಪರಮಾತ್ಮನ ನಾಮ ಸ್ಮರಣವನ್ನು ಮಾಡುತ್ತ, ಎರಡುಗಳಿಗೆಗಳ ಕಾಲದೊಳಗಾಗಿ ಮೋಕ್ಷ ವನ್ನೂ ಹೊಂದಿದನು. ಎಲೈ ಪರೀಕ್ಷಿದ್ರಾಜನೆ ! ಖಟ್ವಾಂಗನು ಇಷ್ಟು ಸ್ವಲ್ಪ ಕಾಲದೊಳಗಾಗಿಯೇ ಶ್ರೀಹರಿಯ ಕೃಪೆಗೆಪಾತ್ರನಾಗಿ ಮೋಕ್ಷವನ್ನು ಹೊಂ ದಿರುವಾಗ, ಇನ್ನೂ ಏಳುದಿನಗಳವರೆಗೆ ಜೀವಿಸಿರತಕ್ಕ ನೀನು ಆಷ್ಟರಲ್ಲಿ ಶ್ರೀ ಹರಿಯನ್ನು ಭಜಿಸಿ ಮೋಕ್ಷವನ್ನು ಸಂಪಾದಿಸುವುದೊಂದು ಹೆಜ್ಜೆ ? ಆದುದ ರಿಂದ ನಿನ್ನ ಕಾವ್ಯಸಾಧನೆಗೆ ತಕ್ಕಷ್ಟು ಕಾಲವಿಲ್ಲವೆಂಬ ಚಿಂತೆಯನ್ನು ಬಿಡು ! ಉಳಿದಿರತಕ್ಕ ಈ ಏಳುದಿನಗಳದಲ್ಲಿಯೇ ಪರಲೋಕಪ್ರಾಪ್ತಿಗೆ ತಕ್ಕ ಕಾರ್ ಗಳಲ್ಲಿ ಪ್ರಯತ್ನಿಸಿ ಮೋಕ್ಷವನ್ನು ಸಾಧಿಸು ! ಮನುಷ್ಯನು ಅಂತ್ಯಕಾಲದಲ್ಲಿ ನಡೆಸಬೇಕಾದ ಕಾರವೇನೆಂಬುದನ್ನು ತಿಳಿಸುವೆನು ಕೇಳು! ಪುರುಷನು ತನಗೆ ಅವಸಾನಕಾಲವು ಸಮೀಪಿಸಿದುದನ್ನು ತಿಳಿದೊಡನೆ, ಮನಸ್ಸಿನಲ್ಲಿ ಮರಣಭ ಯವನ್ನು ಬಿಟ್ಟು, ಸರಸಂಗಪರಿತ್ಯಾಗಮಾಡಿ, ದೇಹದಲ್ಲಿಯೂ, ಮನೆ ಮೊ ದಲಾದ ಸ್ವತ್ತುಗಳಲ್ಲಿಯೂ ವಿಶೇಷವಾಗಿ ಮಮತೆಯನ್ನು ತೊರೆಯಬೇಕು * ಈ ವೈರಾಗ್ಯವನ್ನ ವಲಂಬಿಸಿದೊಡನೆ ಜಿತೇಂದ್ರಿಯನಾಗಿ, ಸನ್ಯಾಸವನ್ನು ವಹಿಸಿ, ಹೆಂಡತಿಮಕ್ಕಳನ್ನು ಬಿಟ್ಟು ಬಂದೆನೆಂಬ ಚಿಂತೆಯನ್ನು ಸ್ವಲ್ಪವಾದ -- --... - ... - ... - * ಇಲ್ಲಿಂದ ಮುಂದೆ ಕ್ರಮವಾಗಿ ಅಷ್ಟಾಂಗಯೋಗಗಳು ನಿರೂಪಿಸಲ್ಪಡುವುವು. ಇಲ್ಲಿ ನಿಯಮಾಂಗವು ಸೂಚಿತವಾಗಿದೆ.