ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ, ೧ | ದ್ವಿತೀಯಸ್ಕಂಧವು. ೨೧೫ ರೂ ಮನಸ್ಸಿನಲ್ಲಿಡದೆ ದೃಢಧ್ಯೆಶ್ಯದಿಂದಿರಬೇಕು, ಆಮೇಲೆ ಪುಣ್ಯತೀರ ಸ್ನಾನ ಮಾಡಿ, ಪರಿಶುದ್ಧವಾದ ಒಂದು ವಿವಿಕ್ತಸ್ಥಳದಲ್ಲಿ ಸೇರಿ, *ಯಧಾವಿಥಿಯಾಗಿ ಕಲ್ಪಿಸಿದ ದರ್ಭಾಸನದಲ್ಲಿ ಕುಳ್ಳಿರಬೇಕು, ಹೀಗೆ ದೃಢಚಿತ್ತನಾಗಿ ಕುಳಿತ ಮೇಲೆ ಸತ್ವಲೋಕಪಾವನವಾಗಿಯೂ, ಆಕಾರ, ಉಕಾರ, ಮಕಾರಗಳೆಂಬ ವರ್ಣತ್ರಯಾತ್ಮಕವಾಗಿಯೂ, ಬ್ರಹ್ಮ ಪ್ರತಿಪಾದಕವಾಗಿಯೂ ಇರುವ ಓಂ ಕಾರವೆಂಬ ಪ್ರಣವಾಕ್ಷರವನ್ನು ಎಡೆಬಿಡದೆ ಮನನಮಾಡಬೇಕು. ರೇಚಕ ಪೂರಕ ಕುಂಭಕಗಳೆಂಬhಪ್ರಾಣಾಯಾಮಕ್ರಮಗಳಿಂದ ಉಚ್ಚಾಸನಿಶ್ವಾ ಸವಾಯುವನ್ನು ನಿಗ್ರಹಿಸಿಡಬೇಕು. ಬ್ರಹ್ಮ ಬೀಜಾಕ್ಷರರೂಪವಾದ ಓಂಕಾರ ವನ್ನು ಮರೆಯದೆ, ಅದರಲ್ಲಿ ಮನಸ್ಸನ್ನು ನಿರ್ಬಂಧಿಸಿಡಬೇಕು.ಎಲೈ ರಾಜನೆ! ಜೀವಾತ್ಮನನ್ನು ಒಬ್ಬರಥಿಕನನ್ನಾಗಿ ತಿಳಿ ! ಅವನಿಗೆ ಶರೀರವೇ ರಥವು. ಬುದ್ಧಿಯೇ ಸಾರಥಿ ! ಇಂದ್ರಿಯಗಳೇ ಆ ರಥವನ್ನೆಳೆಯತಕ್ಕ ಕುದುರೆ ಗಳಂತಿರುವುವು. ಮನಸ್ಸೆಂಬುದು ಆ ಕುದುರೆಗಳಿಗೆ ಕಟ್ಟಿದ ಹಗ್ಗದಂತಿರು ವುದು. ಪ್ರಕಂದನಾದಿವಿಷಯಗಳೇ ಅದರ ಸಂಚಾರಮಾರ್ಗಗಳೆನಿನಿಸಿರು ವುವು. ಆದುದರಿಂದ ಬುದ್ದಿಯೆಂಬ ಸಾರಥಿಯ ಕೈಯಲ್ಲಿ,ಮನಸ್ಸೆಂಬ ಹಗ್ಗ ದಿಂದ ಹಿಡಿಯಲ್ಪಟ್ಟಿರುವ ಇಂದ್ರಿಯಗಳೆಂಬ ಕುದುರೆಗಳು, ದೇಹವೆಂಬ ರಥವನ್ನು ವಿಷಯಗಳೆಂಬ ಬೀದಿಗಳಲ್ಲಿ, ಸಿಕ್ಕಿದಕಡೆಗೆ ಎಳೆದುಕೊಂಡು ಹೋ ಗದಹಾಗೆ ತಡೆದಿಡಬೇಕಾದುದೇ ರಥಿಕನಾಗಿರುವ ಜೀವನ ಕಾರವು. ಪೂ. ಜನ್ಮದಲ್ಲಿ ನಡೆಸಿದ ಪುಣ್ಯಪಾಪಕಮ್ಮಗಳ ಸಂಬಂಧದಿಂದ ಮನಸ್ಸೆಂಬುದು ನಾನಾಕಡೆಗಳಿಗೆ ಬಲಾತ್ಕರಿಸಿ ಎಳೆಯಲ್ಪಡುವುದು. $ ಆ ಮನಸ್ಸನ್ನು ಯುಕ್ತಾಯುಕ್ತ ವಿವೇಚನೆಯಳ್ಳ ಬುದ್ದಿಯ ಬಲದಿಂದ ಶುಭಾಸ್ಪದವಾದ ಪರಮಾತ್ಮರೂಪವಾದ ವಸ್ತುವಿನಲ್ಲಿ ನಿಶ್ಚಲವಾಗಿ ನಿಲ್ಲಿಸಿಡಬೇಕು. ಹೀಗೆ ಮನಸ್ಸನ್ನು ಬೇರೆ ವಿಷಯಾಂತರಗಳಿಗೆ ಹೋಗದಂತೆ ನಿರ್ಬಂಧಿಸಿಟ್ಟ ಮೇಲೆ

  • ಇಲ್ಲಿ ಆಸನರೂಪವಾದ ಅಂಗವು ಹೇಳಲ್ಪಟ್ಟಿದೆ. + ಇದರಿಂದ ಪ್ರಾಣಾಯಾಮರೂಪವಾದ ಅಂಗವು ಸೂಚಿತವಾಗುವುದು, * ಇದರಿಂದ ಪ್ರತ್ಯಾಹಾರವು ಸೂಚಿತವಾಗಿದೆ. ... ಇದರಿಂದ ಧಾರಕರಪವಾದ ಅಂಗವು ವ್ಯಕ್ತವಾಗುವುದು.

as mr - + ++