ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧೬ ಶ್ರೀಮದ್ಭಾಗವತವು [ಅಧ್ಯಾ. ೧ ಆ ಭಗವಂತನ ಮುಖಾರವಿಂದವೊಂದನ್ನೇ # ಏಕಾಗ್ರತೆಯಿಂದ ಧ್ಯಾನಿಸು ತಿರಬೇಕು, + ಸ್ಥಿರಧ್ಯಾನಾಸಕ್ತವಾದ ಈ ಮನಸ್ಸಿನಲ್ಲಿ ಆ ಭಗವಂತನನ್ನು ಬಿಟ್ಟು ಬೇರೆ ಯಾವ ಪದಾರವನ್ನೂ ಸ್ಮರಿಸಬಾರದು. ಮನಸ್ಸಿನಲ್ಲಿ ಧಾರೆ ಣೆಗೆ ಯೋಗ್ಯವಾದ ಶುಭಾಶ್ರಯವಾದ ಆ ವಸ್ತುವಿನ ಸ್ವರೂಪವೆಂತದೆಂದು ಕೇಳುವೆಯಾ ? ಆಗಾಗ ರಜಸ್ತಮೋಗುಣಗಳಿಂದ ಮೂಢವಾಗುತ್ತಿರುವ ಮನಸ್ಸು, ಯಾವನ ಧ್ಯಾನದಿಂದ ಸಿರಲವಾಗಿ ಪ್ರಸನ್ನತೆಯನ್ನು ಕೊಂದು ವುದೋ ಸರೆತ್ತಮವಾದ ಆ ವಿಷ್ಣುವಿನ ಸ್ವರೂಪವೇ ಶುಭಾಶಯ ವಸ್ತುವೆನಿಸುವುದು, ಧೀರನಾದವನು ಮನಃಕಾಲುಷ್ಯವನ್ನು ನೀಗಿಸತಕ್ಕ ಈ ಧಾರಣಾಯೋಗವನ್ನೇ ಮೊದಲು ಸಂಪಾದಿಸಬೇಕು. ಇದನ್ನು ಸಾ ಧಿಸಿ, ಶುಭಾಶ್ರಯವಾಗಿ ತನಗಾಧಾರವಾಗಿರುವ ಪರವಸ್ತುವನ್ನು ಧ್ಯಾನಿಸ ತಕ್ಕವನಿಗೆ ಭಕ್ತಿಯೋಗವು ತಾನಾಗಿಯೇ ಹುಟ್ಟುವುದು.”ಎಂದನು. ಶುಕ ಮುನಿಯು ಹೇಳಿದ ಈ ವಾಕ್ಯವನ್ನು ಕೇಳಿ ತಿರುಗಿ ಪರೀಕ್ಷಿರಾಜನು, 'ಎ ಲೈ ಮಹರ್ಷಿಯೆ ? ಧಾರಣೆಯೆಂಬುದೆಂಥದು ? ಅದಕ್ಕೆ ಆಶ್ರಯವಾದ ಭಗ ವರೂಪವಾವುದು ? ಆ ಧಾರಣೆಯನ್ನು ಹೇಗೆ ನಡೆಸಿದರೆ ಮನಸ್ಸಿನ ಮಾ ಲಿನ್ಯವನ್ನು ನೀಗಿಸುವುದು? ಈ ವಿಷಯವನ್ನು ನೀನು ಇನ್ನೂ ವಿವರವಾಗಿ ನನ ಗೆ ತಿಳಿಸಬೇಕು.” ಎಂದನು. ಅದಕ್ಕಾ ಶುಕಮುನಿಯು “ಎಲೈ ರಾಜನೆ! ಸೀನು ಕೇಳಿದ ಪ್ರಶ್ನೆ ಯು ಉಚಿತವಾಗಿಯೇ ಇರುವುದು. ಧಾರಣೆಗೆ ಆಧಾರವಾವು ದೆಂಬುದನ್ನು ಮೊದಲು ಹೇಳುವೆನು ಕೇಳು. ಹಿಂದೆ ಹೇಳಿದಂತೆ ಮನುಷ್ಯನು ಮೊದಲು ಆಸನಶಕ್ತಿಯನ್ನು ಸಾಧಿಸಿ, ರೇಕಿ ಕಾದಿಗಳಿಂದ ಪ್ರಾಣವಾಯು ವನ್ನು ತಡೆದು, ಪನ್ನೀಪುತ್ರಾಟಗಳಲ್ಲಿ ಸಂಗವನ್ನು ತೊರೆದು, ಇಂದ್ರಿಯ ಗಳನ್ನೂ ನಿಗ್ರಹಿಸಿದಮೇಲೆ, ಬುದ್ಧಿಬಲದಿಂದ ಭಗವಂತನ ವಿರಾಡೂಪದಲ್ಲಿ ಮನಸ್ಸನ್ನು ನಿಲ್ಲಿಸಿಡಬೇಕು. ಇದೇ ಧಾರಣೆಯೆನಿಸುವುದು. ಭೂತಭವಿಷ್ಯ ರ್ತಮಾನ ಕಾಲಗಳಲ್ಲಿರುವ ಪ್ರಪಂಚವೆಲ್ಲವೂ ಮಹತ್ತಿಗಿಂತಲೂ ಮಹತ್ತಾದ ಯಾವ ಭಗವಂತನ ವಿರಾಡೂಪದಲ್ಲಿ ಗೋಚರಿಸುತ್ತಿರುವುದೋ, ಅಂತಹ ಪ

  • ಇಲ್ಲಿ ಧ್ಯಾನಾಂಗವು ಹೇಳಲ್ಪಟ್ಟಿದೆ. + ಇಲ್ಲಿ ಸಮಾಧಿರೂಪವಾದ ಅಂಗವು ಹೇಳಲ್ಪಟ್ಟಿದೆ.