ಪುಟ:ಶ್ರೀಮದ್ಭಾಗವತವು ಪ್ರಥಮ ದ್ವಿತೀಯ ಸ್ಕಂಧಗಳು.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧ ಅಣ್ಯಾ. ೧.] ದ್ವಿತೀಯಸ್ಕಂಧವು. ರಸ್ವರೂಪವೇ ಭಕ್ತಿಯೋಗಾವಲಂಬಿಯಾದ ಪುರುಷನ ಮನಸ್ಸಿಗೆ ವಿಷಯ ಭೂತವು. ಅನಿರುದ್ಧಾಂಶದಿಂದ ಹುಟ್ಟಿದ ಈ ಪುರುಷಸ್ವರೂಪವೇ ಅಂಡ ಕೋಶವೆನಿಸುವುದು. ಈ ರೂಪವು, ಭೂಮಿ, ನೀರು, ತೇಜಸ್ಸು, ವಾಯು ಆ ಕಾಶ, ಅಹಂಕಾರ, ಮಹತತ್ವಗಳೆಂಬ ಏಳುಬಗೆಯ ಆವರಣಗಳಿಂದೊಪ್ಪತಿ ರುವುದು. ಈ ಶರೀರದಿಂದ ಕೂಡಿದವನೇ ವಿರಾಟ್ಟುರುಷನೆನಿಸುವನು. ಆ ಪು ರುಷನೇ ಭಕ್ತಿಗೆ ಸೇಧನವಾದ ಧಾರಣಾಯೋಗಕ್ಕೂ ಆಥಾರನೆನಿಸಿರುವನು ಆ ಮಹಾತ್ಮನಿಗೆ ಪಾತಾಳಲೋಕವೇ ಅಂಗಾಲೆನಿಸುವುದು. ರಸಾತಲವು ಹಿ ಮ್ಮಡಿಯಾಗಿಯೂ ಪಾದಾಗ್ರವಾಗಿಯೂ ಇರುವುದು, ತಲಾತಲವೇ ಆತನ ಜಂಘಗಳು ! ಸುತಲವೇ ಆತನ ಜಾನಗಳು ! ತಲವಿತಲಗಳೆರಡೂ ಆತನ ತೊಡೆಗಳು! ಭೂಲೋಕವೇ ಆತನ ರ್ಕತಪ್ರದೇಶವು, ಆಕಾಶವೆಂಬುದು ಆ ಆಲಪುರುಷನ ನಾಭಿಯು ಗ್ರಹನಕ್ಷತ್ರಾದಿಗಳಿಂದ ಕೂಡಿದ ನಕ್ಷತ್ರಲೋಕ ವನ್ನು ಆತನ ವಕ್ಷಸ್ಥಲವೆಂದು ಹೇಳುವರು. ಮಹಕವೇ ಆ ಪುರುಷನ ಕಂಠವು, ಜನಲೋಕವು ಆತನ ಮುಖವು, ತಪೋಲೋಕವು ಆತನ ಫಾಲ ಪ್ರವೇಶವು.ಸತ್ಯಲೋಕವೇ ಆತನ ತಿರಸ್ಸು, ಇಂದ್ರಾದಿದೇವತೆಗಳೇ ಆತನ ಬಾಹುಗಳು.ದಿಕ್ಕುಗಳೇ ಆತನ ಕಿವಿಗಳು.ಶಬ್ದವೇ ಆತನ ಶ್ರವಣೇಂದ್ರಿಯವು ಅಶ್ವಿನೀದೇವತೆಗಳಿಬ್ಬರೂ ಆತನ ನಾಸಾ ಪುಟಗಳು. ಗಂಧವೇ ಆತನ ಫಾ ನೇಂದ್ರಿಯವು. ಅಗ್ನಿ ಹೋತ್ರನು ಆತನ ಬಾಯಿಯು. ದ್ಯುಲೋಕವು ಆತನ ನಯನಗಳು. ಸೂರ್ಯನೇ ಆತನ ನೇತೇಂದ್ರಿಯವು. ಹಗಲಿರುಳುಗಳೇ ಆತನ ಸಿಮೇದೋಷಗಳು, ಬ್ರಹ್ಮ ಪದವಿಯೇ ಆತನ ಹುಬ್ಬಿನಾಟಗಳು. ಜಲವೂ, ತದಭಿಮಾಸಿದೇವತೆಯಾದ ವರುಣನೂ ಆತನ ದವಡೆಗಳು, ರಸ ವೇ ಆತನ ಜಿಹೇಂದ್ರಿಯವು ಛಂದಸ್ಸುಗಳೇ ಆತನ ಶಿರಸ್ಸು, ಯಮನೇ ಆತನ ಕೋರೆಹಲ್ಲುಗಳು.ನಿಮ್ಮಂತಹ ಜೀವಿಗಳಲ್ಲಿರುವ ಪತ್ರಕಳತ್ರಾದಿ ಮವೇ ಆತನ ಹಲ್ಲುಗಳು.ಲೋಕದ ಜನರನ್ನು ಮರುಳುಗೊಳಿಸತಕ್ಕ ಆಶ್ಚಯ್ಯ ಮಾಯೆಯನ್ನು ಆಮಹಾಪುರುಷನ ಮಂದಹಾಸವೆನ್ನುವರು. ಆಮಹಾತ್ಮನ ಕ ಡೆಗಣ್ಣಿನ ನೋಟವೇ ಪ್ರಪಂಚಸೃಷ್ಟಿಯು, ಲಜ್ಞೆ,ಲೋಭ,ಇವೆರಡೂ ಆತನ ಮೇಲಿನ ಮತ್ತು ಕೆಳಗಣ ತುಟಿಗಳು, ಧರವೆಂಬುದೇ ಆ ಪುರುಷನಸ್ತನಗಳು